Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ ಸೇವನೆ ಮಾಡಬೇಕೆಂದನಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಬೆಸ್ಟ್ ಚಾಯ್ಸ್ ಎಂದ್ರೆ ತೆಂಗಿನಕಾಯಿ ನೀರು(ಹಸಿ ತೆಂಗಿನಕಾಯಿ) ಅಥವಾ ಕಬ್ಬಿನ ಜ್ಯೂಸ್ಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತದೆ.

ಸಾಮಾನ್ಯವಾಗಿ ಈ ಬೇಸಿಗೆಯಲ್ಲಿ ರಸ್ತೆಬದಿಯಲ್ಲಿ ಕಬ್ಬಿನ ಬಂಡಿಗಳ ಮುಂದೆ ಉದ್ದನೆಯ ಸರತಿ ಸಾಲು ಇರುತ್ತದೆ. ಮತ್ತು ಇತರ ಸ್ಥಳಗಳಲ್ಲಿ, ಜನರು ತೆಂಗಿನಕಾಯಿ ಮಾರಾಟಗಾರರಿಂದ ತಣ್ಣನೆಯ ಮತ್ತು ಸಿಹಿ ನೀರನ್ನು ಸೇವನೆ ಮಾಡುತ್ತಿರುತ್ತಾರೆ.
ಇದನ್ನೂ ಓದಿ:ನಮ್ಮ ಮೆಟ್ರೋ ರೈಲಿನಲ್ಲಿ ಊಟ ಮಾಡಿ 500 ರೂ. ದಂಡ ಕಟ್ಟಿದ ಮಹಿಳೆ| Bengaluru Metro
ಎರಡೂ ಪಾನೀಯಗಳನ್ನು ಸಂಪೂರ್ಣವಾಗಿ ನೈಸರ್ಗಿಕವೆಂದು ಪರಿಗಣಿಸಲಾಗುತ್ತದೆ. ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ, ಈ ಪಾನೀಯಗಳಲ್ಲಿ ಯಾವುದು ತ್ವರಿತ ಶಕ್ತಿಯನ್ನು ಒದಗಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ತಿಳಿಯೋಣ.
ಹಸಿ ತೆಂಗಿನಕಾಯಿ ನೀರು
ತೆಂಗಿನ ನೀರು ಎಂದರೆ ಹಸಿ ತೆಂಗಿನಕಾಯಿಯ ತಣ್ಣನೆಯ ರಸ. ಇದು ತುಂಬಾ ಹಗುರವಾಗಿದ್ದು ಖನಿಜಗಳಿಂದ ಸಮೃದ್ಧವಾಗಿದೆ. ನೀವು ಹೆಚ್ಚು ಬೆವರುತ್ತಿದ್ದರೆ ಅಥವಾ ನಿಮ್ಮ ದೇಹವು ನಿರ್ಜಲೀಕರಣಗೊಳ್ಳುತ್ತಿದ್ದರೆ, ತೆಂಗಿನ ನೀರು ಅತ್ಯುತ್ತಮ ಆಯ್ಕೆಯಾಗಿದೆ. ಇದು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿದ್ದು, ದೇಹವನ್ನು ಒಳಗಿನಿಂದ ಹೈಡ್ರೀಕರಿಸುತ್ತದೆ. ತೆಂಗಿನ ನೀರಿನಲ್ಲಿ ಕ್ಯಾಲೋರಿಗಳು ಕಡಿಮೆ, ಸಕ್ಕರೆ ಕಡಿಮೆ ಮತ್ತು ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ.
ಹಸಿ ತೆಂಗಿನಕಾಯಿ ನೀರು ಪ್ರಯೋಜನ
ದೇಹವನ್ನು ತ್ವರಿವಾಗಿ ಹೈಡ್ರೆಟ್ ಮಾಡುತ್ತದೆ. ಹೊಟ್ಟೆಗೆ, ಮೂತ್ರ ಪಿಂಡ ಹಾಗೂ ಹೃದಯಕ್ಕೆ ಹಸಿ ತೆಂಗಿನಕಾಯಿ ನೀರು ಸಾಹಯಕಾರಿಯಾಗಿದೆ. ಅಲ್ಲದೆ, ತೂಕ ನಷ್ಟಕ್ಕೆ ಪ್ರಯೋಜಕಾರಿಯಾಗಿದೆ.
ಕಬ್ಬಿನ ರಸ
ಕಬ್ಬಿನ ರಸವು ತುಂಬಾ ರಸಭರಿತ ಮತ್ತು ದಪ್ಪವಾಗಿರುತ್ತದೆ. ಇದು ನೈಸರ್ಗಿಕ ಸಕ್ಕರೆ ಅಂದರೆ ಸುಕ್ರೋಸ್‌ನಲ್ಲಿ ಸಮೃದ್ಧವಾಗಿದೆ. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ನೀವು ತುಂಬಾ ದಣಿದಿದ್ದರೆ ಅಥವಾ ನಿಮ್ಮ ರಕ್ತದಲ್ಲಿನ ಸಕ್ಕರೆ ಕಡಿಮೆಯಿದ್ದರೆ, ಒಂದು ಲೋಟ ಕಬ್ಬಿನ ರಸವು ನಿಮ್ಮ ದೇಹವನ್ನು ತಕ್ಷಣವೇ ರೀಚಾರ್ಜ್ ಮಾಡುತ್ತದೆ. ಕಬ್ಬಿನ ರಸವು ಉತ್ತಮ ಪ್ರಮಾಣದ ಕ್ಯಾಲೊರಿಗಳನ್ನು ಮತ್ತು ಸಕ್ಕರೆ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.
ಕಬ್ಬಿನ ರಸದ ಪ್ರಯೋಜನ
ತ್ವರಿತ ಶಕ್ತಿ ವರ್ಧಕ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಕಬ್ಬಿನ ರಸವು ತ್ವರಿತ ಮತ್ತು ಹೆಚ್ಚಿನ ಶಕ್ತಿಯನ್ನು ನೀಡುವಲ್ಲಿ ಉತ್ತಮವಾಗಿದೆ. ಆದ್ದರಿಂದ, ನೀವು ತುಂಬಾ ದಣಿದಿದ್ದಾಗ ಅಥವಾ ತ್ವರಿತ ಶಕ್ತಿಯನ್ನು ಹೆಚ್ಚಿಸಬೇಕಾದಾಗ, ಕಬ್ಬಿನ ರಸವು ಉತ್ತಮವಾಗಿರುತ್ತದೆ. ಆದರೆ ದೇಹವನ್ನು ಉಲ್ಲಾಸಗೊಳಿಸುವ ಮತ್ತು ಹೈಡ್ರೇಟ್ ಮಾಡುವ ಹಗುರವಾದ ಪಾನೀಯವನ್ನು ನೀವು ಬಯಸಿದರೆ, ತೆಂಗಿನ ನೀರು ಪರಿಪೂರ್ಣವಾಗಿರುತ್ತದೆ. ಹೀಗಾಗಿ, ಎರಡು ಉತ್ತಮ.(ಏಜೆನ್ಸೀಸ್)
ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes
ಪೀಚ್ ಹಣ್ಣು ತಿನ್ನುವುದರಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು! | Peaches