More

    ಅಭಿಮಾನಿಗಳಿಗೆ ಶಾಕ್​ ಕೊಟ್ಟು ಹಸೆಮಣೆ ಏರಿದ ನಮ್ರತಾ-ಕಾರ್ತಿಕ್; ವಿಡಿಯೋ ವೈರಲ್

    ಬೆಂಗಳೂರು: ಹಲವು ವಿಶೇಷತೆಗಳಿಂದ ಕೂಡಿದ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​-10 ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಪ್ರೀತಿ-ಪ್ರೇಮ, ಸ್ನೇಹದ ವಿಚಾರಕ್ಕೆ ಹೆಚ್ಚು ಗಮನ ಸೆಳೆದಿದ್ದ ಬಿಗ್​ಬಾಸ್​ನಲ್ಲಿ ಕೆಲವು ಸ್ಪರ್ಧಿಗಳ ನಡುವೆ ಆತ್ಮೀಯತೆ ತುಸು ಹೆಚ್ಚೇ ಇತ್ತು ಎಂದು ಹೇಳಬಹುದಾಗಿದೆ.

    ಈ ವಿಚಾರಕ್ಕೆ ಬರುವುದಾದರೆ ಕಾರ್ತಿಕ್​ ಹಾಗೂ ನಮ್ರತಾ ಗೌಡ ಫಿನಾಲೆ ಸಮೀಪಿಸುತ್ತಿದ್ದಂತೆ ತುಸು ಹತ್ತಿರವಾಗಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಚಾರಕ್ಕೆ ಟೀಕೆ ವ್ಯಕ್ತವಾದ ಕಾರಣ ಈ ಇಬ್ಬರು ಪರಸ್ಪರ ದೂರಾಗಿದ್ದರು. ಆದರೆ, ಈ ಇಬ್ಬರ ಸ್ನೇಹ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಮುಂದುವರೆದಿದ್ದು, ಈ ನಡುವಲ್ಲೇ ಇಬ್ಬರು ಹಸೆಮಣೆ ಏರಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: ನಿಮ್ಮನ್ನು ಮುಂದಿನ 10 ವರ್ಷಗಳ ಬ್ಯುಸಿಯಾಗಿರಿಸುತ್ತೇವೆ; ಸಂದೇಶ್​​ಖಾಲಿ ಆರೋಪಿ ಪರ ವಕೀಲರಿಗೆ ಕೋರ್ಟ್ ಛೀಮಾರಿ ​

    ನಮ್ರತಾ ಮತ್ತು ಕಾರ್ತಿಕ್ ಪಕ್ಕಾ ಸಂಪ್ರದಾಯಿಕ ಉಡುಪು, ಮದುವೆ ಗೆಟಪ್​​​ನಲ್ಲಿದ್ದು, ಇಬ್ಬರ ಈ ಫೋಟೋಗಳು ಅಭಿಮಾನಿಗಳಿಗೆ ಶಾಕ್ ನೀಡಿದೆ. ಫೋಟೋಗಳನ್ನು ನೋಡಿದ ಕೆಲವರು ಇಬ್ಬರಿಗೂ ಶುಭಾಶಯಗಳನ್ನು ಕೋರಿದ್ದಾರೆ. ಆದರೆ, ಈ ಫೋಟೋಗಳ ಅಸಲಿಯತ್ತು ಬೇರೆಯದ್ದೇ ಇದೆ. ನಮ್ರತಾ ಹಾಗೂ ಕಾರ್ತಿಕ್ ಇಬ್ಬರು ಜಾಹೀರಾತು ಒಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಆ ಸಮಯದಲ್ಲಿ ತೆಗೆಯಲಾದ ಫೋಟೋಗಳು ಎಂದು ಹೇಳಲಾಗಿದೆ.

    ಇಬ್ಬರೂ ವಧು-ವರರಂತೆ ವೇಷ ತೊಟ್ಟು ಮೈತುಂಬ ಚಿನ್ನದ ಆಭರಣಗಳನ್ನು ತೊಟ್ಟು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ರೆಸಾರ್ಟ್ ಒಂದರಲ್ಲಿ ಜಾಹೀರಾತಿನ ಚಿತ್ರೀಕರಣ ನಡೆದಿದೆ. ಜಾಹೀರಾತು ಚಿತ್ರೀಕರಣದ ವಿಡಿಯೋ ಹಾಗೂ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.  ವಧು-ವರರಾಗಿ ಕಾಣಿಸಿಕೊಂಡಿರುವ ಕಾರ್ತಿಕ್-ನಮ್ರತಾರ ಜೋಡಿ ಕಂಡು ಒಳ್ಳೆಯ ಜೋಡಿಯೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts