More

    ಗುತ್ತಿಗೆ ಪಟ್ಟಿಯಿಂದ ಕೊಕ್ ಕೊಟ್ಟ ಬೆನ್ನಲ್ಲೇ ಶ್ರೇಯಸ್​-ಇಶಾನ್​ಗೆ ಮತ್ತೊಂದು ಶಾಕ್!

    ನವದೆಹಲಿ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್​ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (BCCI) ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು ಮತ್ತು ಆಟಗಾರರಾದ ಶ್ರೇಯಸ್​ ಅಯ್ಯರ್​ ಹಾಗೂ ಇಶಾನ್​ ಕಿಶನ್​ಗೆ ಶಾಕ್​ ನೀಡಿತ್ತು.

    ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಬಿಡುಗಡೆಯಾಗಿ ಇನ್ನು ಒಂದು ದಿನ ಕಳೆದಿಲ್ಲ ಅದಾಗಲೇ ಈ ಇಬ್ಬರು ಆಟಗಾರರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಒಂದು ಹೊರ ಬಿದ್ದಿದೆ. ಈ ಇಬ್ಬರು ಆಟಗಾರು ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಭಾಗವಹಿಸುವುದು ಅನುಮಾವಾಗಿದೆ. ಈ ಇಬ್ಬರು ಆಟಗಾರರು ಬಿಸಿಸಿಐ ಮಾತನ್ನು ದಿಕ್ಕಿರಿಸಿದ ಪರಿಣಾಮ ಟಿ-20 ವಿಶ್ವಕಪ್​ಗೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ.

    ಕೇಂದ್ರೀಯ ಒಪ್ಪಂದದಿಂದ ಕೈಬಿಡಲಾಗಿದ್ದರೂ, ಆಟಗಾರರು ಭಾರತಕ್ಕಾಗಿ ಆಡಲು ಲಭ್ಯವಿರುತ್ತಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆಯು ಪ್ರದರ್ಶನ ಮತ್ತು ಫಿಟ್ನೆಸ್ ಅನ್ನು ಆಧರಿಸಿದೆ. ಬಿಸಿಸಿಐನ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿರುವವರಿಗೆ ಸೀಮಿತವಾಗಿಲ್ಲ. ಏತನ್ಮಧ್ಯೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಜೊತೆಗೆ ಚೇತೇಶ್ವರ ಪೂಜಾರ, ಯುಜ್ವೇಂದ್ರ ಚಾಹಲ್, ಉಮೇಶ್ ಯಾದವ್, ಶಿಖರ್ ಧವನ್ ಮತ್ತು ದೀಪಕ್ ಹೂಡಾ ಕೂಡ ಕೇಂದ್ರ ಒಪ್ಪಂದದಿಂದ ವಂಚಿತರಾಗಿದ್ದಾರೆ.

    ಇದನ್ನೂ ಓದಿ: 1993 ಸರಣಿ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ದೋಷಮುಕ್ತ

    ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಸರಣಿಗೂ ಮುನ್ನ ತಂಡದಲ್ಲಿದ್ದ ಇಶಾನ್​ ಕಿಶನ್​ ವೈಯಕ್ತಿಕ ಕಾರಣಗಳನ್ನು ನೀಡಿ ತವರಿಗೆ ಮರಳಿದ್ದರು. ಆ ನಂತರ ಅವರಿಗೆ ರಣಜಿ ಟ್ರೋಫಿಯಲ್ಲಿ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಆದರೆ, ಬಿಸಿಸಿಐ ಮಾತನ್ನು ದಿಕ್ಕರಿಸಿದ್ದ ಇಶಾನ್​ ತಮ್ಮ ತವರು ತಂಡವನ್ನು ಕೂಡಿಕೊಂಡಿರಲಿಲ್ಲ.

    ಪ್ರಸ್ತುತ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳನ್ನು ಆಡಿದ್ದ ಶ್ರೇಯಸ್​ ಅಯ್ಯರ್ ಗಾಯಗೊಂಡ ಪರಿಣಾಮ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಗುಣಮುಖರಾದ ಬಳಿಕ ಶ್ರೇಯಸ್​ಗೂ ರಣಜಿ ಆಡುವಂತೆ ಹೇಳಲಾಗಿತ್ತು. ಆದರೆ ಅಯ್ಯರ್ ಬಿಸಿಸಿಐ ಆದೇಶವನ್ನು ದಿಕ್ಕರಿಸಿದ ಪರಿಣಾಮ ಶ್ರೇಯಸ್​ ಅಯ್ಯರ್​ಗೂ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೊಕ್​ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts