More

    1993 ಸರಣಿ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ದೋಷಮುಕ್ತ

    ಜೈಪುರ: 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾನನ್ನು ಅಜ್ಮೇರ್​ನ ವಿಶೇಷ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಭಯೋತ್ಪಾದನಾ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ತಡೆ ಕಾಯ್ದೆ (TADA) ಅಡಿ ತುಂಡಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

    ಆರೋಪವನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಧಾರಗಳು ಇಲ್ಲದ ಕಾರಣ ತುಂಡಾನನ್ನು ಅಜ್ಮೇರ್​ನ ವಿಶೇಷ ನ್ಯಾಯಾಲಯವು ಪ್ರಕರಣದಿಂದ ಖುಲಾಸೆಗೊಳಿಸಿದೆ.

    ಇದನ್ನೂ ಓದಿ: ನಿವೃತ್ತ ಐಎಎಸ್​ ಅಧಿಕಾರಿ ಶಿವರಾಂ ಬದುಕಿದ್ದಾರೆ, ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಅಳಿಯ ಪ್ರದೀಪ್ ಸ್ಪಷ್ಟನೆ

    1993 ಡಿಸೆಂಬರ್‌ 5 ಮತ್ತು 6ರಂದು ಲಖನೌ, ಕಾನ್‌ಪುರ, ಹೈದರಾಬಾದ್‌, ಸೂರತ್‌ ಮತ್ತು ಮುಂಬೈ ನಗರಗಳಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ದಾವೂದ್​ ಇಬ್ರಾಹಿಂ ಆಪ್ತ ಅಬ್ದುಲ್ ಕರೀಂ ತುಂಡಾ, ಇರ್ಫಾನ್‌ ಅಲಿಯಾಸ್‌ ಪಪ್ಪು ಮತ್ತು ಹಮಿದುದ್ಧಿನ್‌ನನ್ನು ವಶಕ್ಕೆ ಪಡೆಯಲಾಗಿತ್ತು.

    ಬ್ದುಲ್‌ ಕರೀಮ್‌ ತುಂಡಾ, ಇರ್ಫಾನ್‌ ಅಲಿಯಾಸ್‌ ಪಪ್ಪು ಮತ್ತು ಹಮಿದುದ್ಧಿನ್‌ ಆರೋಪಿಗಳೆಂದು ಪ‌ರಿಗಣಿಸಿ ನ್ಯಾಯಾಲಯ ವಿಚಾರಣೆ ಆರಂಭಿಸಿತ್ತು. ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತುಂಡಾ ದೋಷಮುಕ್ತನೆಂದು ತೀರ್ಪು ನೀಡಿದ್ದು, ಇನ್ನಿಬ್ಬರು ಆರೋಪಿಗಳಾದ ಇರ್ಫಾನ್‌ ಮತ್ತು ಹಮಿದುದ್ಧಿನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts