ಬೆಂಗಳೂರು: ಕಾವೇರಿ ಜಲ ವಿವಾದದಲ್ಲಿ ರಾಜಕೀಯ ಜಟಾಪಟಿ ಬುಗಿಲೆದ್ದಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಸ್ಥಾನದಿಂದ ರಾಜೀನಾಮೆ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಎಲ್ಲರದ್ದು ಮುಖವಾಡದ ಬದುಕು! ವೇಶ್ಯಾವಾಟಿಕೆ ಪ್ರಯೋಜನದ ಬಗ್ಗೆ ನಟಿ ಓವಿಯಾ ಓಪನ್ ಟಾಕ್
ರಾಜ್ಯದಲ್ಲಿ ಕಾವೇರಿ ವಿಚಾರವಾಗಿ ರಾಜಕೀಯ ನಾಯಕರಲ್ಲಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದು, ಈ ಮಧ್ಯೆ ಪ್ರಲ್ಹಾದ ಜೋಶಿ ನೀರು ನೆನಪಾದಾಗ ಸಂಸದರು ನೆನೆಪಾದರೇ ಎಂದು ನೀಡಿದ ಹೇಳಿಕೆಗೆ ಇದೀಗ ಸಚಿವ ಮಹದೇವಪ್ಪ ತಿರುಗೇಟು ಕೊಟ್ಟಿದ್ದಾರೆ.
“ಸಾಮಾನ್ಯವಾಗಿ ನದಿ ನೀರಿನ ಸಮಸ್ಯೆ ಹಾಗೂ ಗಡಿ ಸಮಸ್ಯೆಯ ಸಂದರ್ಭದಲ್ಲಿ ಎಲ್ಲರೂ ಪಕ್ಷಬೇಧ ಮರೆತು ಒಂದಾಗುತ್ತಿದ್ದ ಕಾಲ ಒಂದಿತ್ತು. ಆದ್ರೆ, ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅನಾರೋಗ್ಯಕರ ರೀತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಟೀಕೆಗೆ ಇಳಿದಿರುವುದು ಸರಿಯಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ಸಂಕಷ್ಟ, ಸಮಾಧಾನ; ತಮಿಳುನಾಡಿನ ಬೇಡಿಕೆಗೆ ಸುಪ್ರೀಂ ನಕಾರ
“ಅಂದಹಾಗೆ ನೀರು ಖಾಲಿಯಾದಾಗ ಸಂಸದರು ನೆನಪಾದ್ರಾ ಎಂದು ರಾಜ್ಯದ ಸಂಸದನ ಜವಾಬ್ದಾರಿ ಮರೆತು ಮಾತನಾಡುತ್ತಿರುವ ಪ್ರಲ್ಹಾದ ಜೋಷಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಒಳಿತು” ಎಂದು ಹೇಳಿದ್ದು, ಈ ಮೂಲಕ ಜೋಶಿ ಅವರ ರಾಜೀನಾಮೆಗೆ ಸಚಿವರು ಒತ್ತಾಯಿಸಿದ್ದಾರೆ.
‘ನಾನು ಅವಳ ಜತೆಗೆ ಮೃತಪಟ್ಟಿದ್ದೇನೆ’; ಪುತ್ರಿಯ ಸಾವು ನೆನೆದು ವಿಜಯ್ ಭಾವನಾತ್ಮಕ ಪೋಸ್ಟ್