

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ಮೇ ತಿಂಗಳಲ್ಲಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆ-ಸಿಇಟಿ-23) ಫಲಿತಾಂಶ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. 11 ಗಂಟೆಯ ನಂತರ ಕೆಇಎ ವೆಬ್ಸೈಟ್ http://kea.kar.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ರಾಜ್ಯದ 592 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2.60 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಲಿಂಕ್ http://kea.kar.nic.in
ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಇಂಜಿನಿಯರಿಂಗ್ ಕೋರ್ಸ್ಗೆ 203381, ಕೃಷಿ ವಿಜ್ಞಾನ ಕೋರ್ಸ್ಗೆ 164187, ಪಶುಸಂಗೋಪನೆ 166756, ಯೋಗ ಮತ್ತು ನ್ಯಾಚುರೋಪತಿ 166746, ಬಿ. ಫಾರ್ಮ ಕೋರ್ಸಿಗೆ 206191, ಫಾರ್ಮ-ಡಿ ಕೋರ್ಸ್ಗೆ 206340 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.
1. ವಿಘ್ನೇಶ್ ನಟರಾಜ್ ಕುಮಾರ್- 97.8% ಬೆಂಗಳೂರು
2. ಅರುಣ್ ಕೃಷ್ಣಸ್ವಾಮಿ- 97.5% ಅರ್ವಿಪಿಯು ಕಾಲೇಜ್, ಜಯನಗರ
3. ಸಮೃದ್ದ ಶೆಟ್ಟಿ- 97.167% ವಿದ್ಯಾನಿಕೇತನ ಪಿ.ಯು.ಸೈನ್ಸ್ ಕಾಲೇಜು, ಹುಬ್ಬಳ್ಳಿ