More

    ಮತದಾನೋತ್ತರ ಸಮೀಕ್ಷೆಗಳು ಏನಾದವು? ಯಾವ್ಯಾವ ಸಮೀಕ್ಷೆ ಏನು ಹೇಳಿತ್ತು?

    ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಿಗದಿತ ಸಮಯ ಮುಗಿಯುತ್ತಿದ್ದಂತೆ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳು ಪಕ್ಷಗಳ ಬಲಾಬಲ, ಗೆಲುವಿನ ಲೆಕ್ಕಾಚಾರಗಳು ಬಹಿರಂಗಗೊಳಿಸಿದ್ದವು. ವಿವಿಧ ಮಾಧ್ಯಮ ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಯ ಅಂಶಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಭಾರಿ ಪೈಪೋಟಿ ಇರುವುದಾಗಿ ತಿಳಿಸಿದ್ದವು. ಇನ್ನು ಕೆಲವು ಸಮೀಕ್ಷೆಗಳು ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಎಂದು ತಿಳಿಸಿದ್ದವು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಸಿದ್ದತೆ ನಡೆಸುತ್ತಿದೆ. ಚುನಾವಣೆಯಲ್ಲಿ 136 ಸೀಟ್​ಗಳನ್ನು ಕಾಂಗ್ರೆಸ್ ಗೆದ್ದುಕೊಳ್ಳುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ.

    ಚುನಾವಣಾ ರಿಸಲ್ಟ್ 2023

    ಕಾಂಗ್ರೆಸ್ – 136
    ಬಿಜೆಪಿ – 65
    ಜೆಡಿಎಸ್ – 19
    ಇತರೆ – 04

    ಎಬಿಪಿ ನ್ಯೂಸ್​-ಸಿವೋಟರ್​, ನ್ಯೂಸ್​ ನೇಷನ್​-ಸಿಜಿಎಸ್, ರಿಪಬ್ಲಿಕ್ ಟಿವಿ-ಪಿ ಮಾರ್ಕ್​, ಸುವರ್ಣ ನ್ಯೂಸ್-ಜನ್ ​ಕಿ ಬಾತ್, ಟಿವಿ9 ಭರತವರ್ಷ್-ಪೋಲ್ ಸ್ಟ್ರೀಟ್, ಝೀ ನ್ಯೂಸ್-ಮ್ಯಾಟ್ರಿಜ್ ಏಜೆನ್ಸಿ, ನ್ಯೂಸ್ 24 ಟುಡೆ ಚಾಣಕ್ಯ ನಡೆಸಿದ್ದ ಚುನಾವಣೋತ್ತರ​ ಸಮೀಕ್ಷೆಗಳ ಅಂಕಿ-ಅಂಶಗಳು ಇಂತಿವೆ…

    ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ; ಸಿಹಿ ತಿನ್ನಿಸಿ ಸಂಭ್ರಮಿಸಿದ ಮಲ್ಲಿಕಾರ್ಜುನ ಖರ್ಗೆ

    ಎಬಿಪಿ ನ್ಯೂಸ್-ಸಿ ವೋಟರ್

    ಬಿಜೆಪಿ: 83-95
    ಕಾಂಗ್ರೆಸ್​: 100-112
    ಜೆಡಿಎಸ್​: 21-29
    ಇತರ: 2-6

    ನ್ಯೂಸ್ ನೇಷನ್-ಸಿಜಿಎಸ್

    ಬಿಜೆಪಿ: 114
    ಕಾಂಗ್ರೆಸ್​: 86
    ಜೆಡಿಎಸ್​: 21
    ಇತರ: 3

    ರಿಪಬ್ಲಿಕ್ ಟಿವಿ-ಪಿ ಮಾರ್ಕ್

    ಬಿಜೆಪಿ: 85-100
    ಕಾಂಗ್ರೆಸ್​: 94-108
    ಜೆಡಿಎಸ್​: 24-32
    ಇತರ: 0-2

    ನ್ಯೂಸ್ 24 ಟುಡೆ ಚಾಣಕ್ಯ

    ಬಿಜೆಪಿ: 120
    ಕಾಂಗ್ರೆಸ್​: 92
    ಜೆಡಿಎಸ್​: 12
    ಇತರ: 0

    ಸುವರ್ಣ ನ್ಯೂಸ್- ಜನ್​ ಕಿ ಬಾತ್

    ಬಿಜೆಪಿ: 94-117
    ಕಾಂಗ್ರೆಸ್​: 91-106
    ಜೆಡಿಎಸ್​: 14-24
    ಇತರ: 0-2

    ಇದನ್ನೂ ಓದಿ: ಚುನಾವಣೆಯಲ್ಲಿ ಬಡವರ ಶಕ್ತಿ ಗೆದ್ದಿದೆ, ಇದು ಜನತೆಗೆ ಸಂದ ಜಯ : ರಾಹುಲ್ ಗಾಂಧಿ

    ಟಿವಿ 9 ಭರತವರ್ಷ- ಪೋಲ್​ಸ್ಟ್ರೀಟ್

    ಬಿಜೆಪಿ: 88-98
    ಕಾಂಗ್ರೆಸ್​: 99-109
    ಜೆಡಿಎಸ್​: 21-26
    ಇತರ: 0-4

    ಝೀ ನ್ಯೂಸ್-ಮ್ಯಾಟ್ರಿಜ್ ಏಜೆನ್ಸಿ

    ಬಿಜೆಪಿ: 79-94
    ಕಾಂಗ್ರೆಸ್​: 103-118
    ಜೆಡಿಎಸ್​: 25-33
    ಇತರ: 2-5

    ರಾಜ್ಯ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಬಹತೇಕ ಉಲ್ಟಾ ಹೊಡೆದಿದೆ. ಬಹುತೇಕ ಸಮೀಕ್ಷೆಗಳು ಆಡಳಿತ ಪಕ್ಷವಾಗಿದ್ದ ಬಿಜೆಪಿ 90ಕ್ಕೂ ಅಧಿಕ ಸ್ಥಾನ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿತ್ತು. ಆದರೆ ಅಂತಿಮವಾಗಿ ಬಿಜೆಪಿ ಗೆದ್ದುಕೊಂಡಿರುವುದು 65 ಸ್ಥಾನಗಳನ್ನು ಮಾತ್ರ.

    ಮತದಾನೋತ್ತರ ಸಮೀಕ್ಷೆಗಳಲ್ಲಿ ಚಾಣಕ್ಯ ಸಂಸ್ಥೆ ಬಹಿರಂಗಪಡಿಸಿದ್ದ ಸಮೀಕ್ಷೆ ಬಹುತೇಕ ಖಚಿತಗೊಂಡಿದೆ. ಕಾಂಗ್ರೆಸ್ 120ಕ್ಕೂ ಹೆಚ್ಚಿನ ಸ್ಥಾನ ಗೆದ್ದುಕೊಂಡು ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳಿತ್ತು. ಇದೀಗ ಈ ಸಮೀಕ್ಷೆ ನಿಜವಾಗಿದ್ದು, ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts