More

    ಕಾಂಗ್ರೆಸ್ ಸರ್ಕಾರ ದೀರ್ಘಾವಧಿ ಆಡಳಿತ ನಡೆಸಲ್ಲ, ಡಿಕೆಶಿ-ಸಿದ್ದರಾಮಯ್ಯ ಒಬ್ಬರ ಮೇಲೊಬ್ಬರು ಬಂಡಾಯ ಏಳ್ತಾರೆ; ಯತ್ನಾಳ್

    ವಿಜಯಪುರ: ಜಿಲ್ಲೆಯ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಜನತೆ ಬಿಜೆಪಿಯೊಂದಿಗೆ ಹಾಗೂ ನನ್ನೊಂದಿಗೆ ಇದ್ದಾರೆ. ಕಾರ್ಯಕರ್ತರು, ಪದಾಧಿಕಾರಿಗಳು ಸೇರಿದಂತೆ ಎಲ್ಲರೂ ಪ್ರಮಾಣಿಕವಾಗಿ ಕೆಲಸ‌ ಮಾಡಿದ್ದಾರೆ. ಎಲ್ಲಾ ಸಮುದಾಯದ ಜನ ನನಗೆ ಮತ ಹಾಕಿದ್ದಾರೆ. ಸಾಮೂಹಿಕ ಸಂಘಟನೆಯಿಂದ ಹಾಗೂ ಒಗ್ಗಟ್ಟಿನಿಂದ ನನಗೆ ಗೆಲುವಾಗಿದೆ ಎಂದು ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೊಂಢಿದ್ದಾರೆ.

    ನಮ್ಮ ಸಮಾಜದಲ್ಲಿ ಒಗ್ಗಟ್ಟಿಲ್ಲ…

    ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಸ್ಲಿಂ ಏರಿಯಾದಲ್ಲಿ 880 ಮತ ಇದ್ದಲ್ಲಿ 876 ಮತ ಅವರಿಗೆ ಹಾಕಿದ್ದಾರೆ. ನಾಲ್ಕು ಮತ ಮಾತ್ರ ಬೇರೆಯವರಿಗೆ ಹಾಕಿದ್ದಾರೆ. ಅಷ್ಟು ಅವರು ಒಗ್ಗಟ್ಟಾಗಿದ್ದಾರೆ. ಹಿಂದುಗಳು ಒಂದಾಗಿದ್ದಾರೆ. ಆದರೆ ನಮ್ಮ ಸಮಾಜದಲ್ಲಿ ಒಗ್ಗಟ್ಟು ಇಲ್ಲದಿರುವುದು ನಮ್ಮ ದುರ್ಧೈವ. ನಮ್ಮ ಜನರು ಅವರಂತೆ ಒಗ್ಗಟ್ಟು ಆಗುವುದಿಲ್ಲಾ. ಆದರೂ ಸದ್ಯ ಒಗ್ಗಟ್ಟಾಗಿದ್ದಾರೆ. ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿ ಮಾಡಿದ್ದನ್ನು ಜನ ನೆನಪಿನಲ್ಲಿ‌ ಇಟ್ಟುಕೊಂಡು ಮತ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

    ಅವ್ರಿಬ್ಬರು ಬಂಡಾಯ ಏಳುತ್ತಾರೆ!

    ಮತ್ತೊಂದು ಬಾರಿಗೆ ಶಾಸನಕನಾಗಿ ಚುನಾಯಿತರಾಗುತ್ತಿದ್ದಂತೆ ಯತ್ನಾಳ್ ಹೇಳಿಯೊಂದನ್ನು ನೀಡಿದ್ದು, ಕಾಂಗ್ರೆಸ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಬಹಳ ದಿನದ ಸರ್ಕಾರ ನಡೆಸುವುದಿಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ಒಬ್ಬರ ಮೇಲೊಬ್ಬರು ಬಂಡಾಯ ಏಳುತ್ತಾರೆ. ಇದು ಇನ್ನೊಂದೇ ವರ್ಷದಲ್ಲಿ ಮತ್ತೆ ಚುನಾವಣೆಗೆ ನಾಂದಿ ಆಗಲಿದೆ. ಈ ಸರ್ಕಾರ ಪತನ ಆಗಬಹುದು ಎಂದು ಯತ್ನಾಳ್ ಹೇಳಿಕೊಂಡಿದ್ದಾರೆ.

    ನನ್ನ ಸಲಹೆ ಗಂಭೀರವಾಗಿ ಪರಿಗಣಿಸಲ್ಲ!

    ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಒಂದೇ ಸ್ಥಾನ ಗೆದ್ದಿರುವ ವಿಚಾರವಾಗಿ ಪ್ರತಿಕ್ರಿಯಸಿ, ನಾನು ಸಾಕಷ್ಟು ಪ್ರಯತ್ನ ಮಾಡಿ, ಅನೇಕ ಸಲಹೆ ಕೊಟ್ಟಿದ್ದೇನೆ. ಅವುಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಜಿಲ್ಲೆಯಲ್ಲಿ ಇನ್ನೂ ನಾಲ್ಕೈದು ಸೀಟ್ ಗೆಲ್ಲತ್ತಿದ್ದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts