

ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುಸ್ತಕ ಬರೆಯುವದಾಗಿ ಘೋಷಿಸಿದ್ದರು, ಇದೀಗ ಅವರ ಪತ್ನಿ ಕರೀನಾ ಕಪೂರ್ ಸಹ ಒಂದು ಪುಸ್ತಕ ಬರೆಯುತ್ತಿರುವುದಾಗಿ ಹೇಳಿಕೊಂಡಿದ್ದು, ಆ ಪುಸ್ತಕ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಅನಾರೋಗ್ಯದ ನಡುವೆಯೂ ಶೂಟಿಂಗ್ ಮಾಡಿದ್ರಂತೆ ಮಿಥುನ್ …
ಕರೀನಾ ಕಪೂರ್ ಸಹ ತಮ್ಮ ಪತಿಯ ತರಹವೇ ಆತ್ಮಚರಿತ್ರೆ ಬರೆಯುವುದಕ್ಕೆ ಮುಂದಾಗಿದ್ದಾರಾ? ಎಂಬ ಪ್ರಶ್ನೆ ಬರುವುದು ಸಹಜ. ಹಾಗೇನಾದರೂ ಪ್ರಶ್ನೆ ಬಂದರೆ, ಅದನ್ನು ತಲೆಯಿಂದ ತೆಗೆದು ಹಾಕಿ. ಕರೀನಾ ಬರೆಯುತ್ತಿರುವುದು ತಮ್ಮ ಆತ್ಮಚರಿತ್ರೆಯನ್ನಲ್ಲ, ಬದಲಿಗೆ ಪ್ರೆಗ್ನನ್ಸಿ ಬಗ್ಗೆ.
ಕರೀನಾ ಕಪೂರ್, 'ಪ್ರೆಗ್ನನ್ಸಿ ಬೈಬಲ್' ಎಂಬ ಪುಸ್ತಕವನ್ನು ಬರೆಯುತ್ತಿದ್ದು, ಜಗ್ಗರ್ನಾಟ್ ಸಂಸ್ಥೆಯು ಈ ಪುಸ್ತಕವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಮಗ ತೈಮುರ್ ಅಲಿ ಖಾನ್ನ ನಾಲ್ಕನೇ ಹುಟ್ಟುಹಬ್ಬದ ಅಂಗವಾಗಿ, ಸ್ವತಃ ಕರೀನಾ ಕಪೂರ್ ಅವರೇ ಈ ವಿಷಯವನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಸುದೀಪ್ ಮಾಡಬೇಕಿದ್ದ ಪಾತ್ರ ರಾಣಾ ಪಾಲಾಯ್ತು …
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅವರು, 'ಇವತ್ತು ತೈಮುರ್ನ ನಾಲ್ಕನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಗರ್ಭಧಾರಣೆ ಕುರಿತು ಪುಸ್ತಕ ಬರೆಯುತ್ತಿರುವ ವಿಷಯವನ್ನು ಹಂಚಿಕೊಳ್ಳುವುದಕ್ಕೆ ಬಹಳ ಖುಷಿಯಾಗುತ್ತಿದೆ. ಈ ಪುಸ್ತಕದಲ್ಲಿ ಫಿಟ್ನೆಸ್, ಡಯಟ್ ಮುಂತಾದ ಹಲವು ವಿಷಯಗಳ ಬಗ್ಗೆ ಬರೆಯುತ್ತಿದ್ದೇನೆ. ಈ ಪುಸ್ತಕ ಮುಂದಿನ ವರ್ಷ ಬಿಡುಗಡೆಯಾಗಲಿದೆ' ಎಂದು ಕರೀನಾ ಕಪೂರ್ ಹೇಳಿಕೊಂಡಿದ್ದಾರೆ.