ಸುದೀಪ್​ ಮಾಡಬೇಕಿದ್ದ ಪಾತ್ರ ರಾಣಾ ಪಾಲಾಯ್ತು ...

Sudeep - Rana - Final
Published on

ಹೈದರಾಬಾದ್​: ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಪಾತ್ರವನ್ನು ಸುದೀಪ್​ ಅವರು ಮಾಡಬೇಕಿತ್ತಂತೆ. ಪಾತ್ರ ಮಾಡುವುದಕ್ಕೆ ಚಿತ್ರತಂಡದವರು ಸುದೀಪ್​ಗೆ ಆಫರ್​ ಸಹ ಕೊಟ್ಟಿದ್ದರಂತೆ. ಕಾರಣಾಂತರಗಳಿಂದ ಸುದೀಪ್​ ಈ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ ಮತ್ತು ಅವರು ಮಾಡಬೇಕಿದ್ದ ಪಾತ್ರವು ಇದೀಗ ರಾಣಾ ದಗ್ಗುಬಟ್ಟಿ ಪಾಲಾಗಿದೆ.

ಹೌದು, ಸುದೀಪ್​ ಅಭಿನಯಿಸಬೇಕಿದ್ದ ಈ ಪಾತ್ರವನ್ನು ರಾಣಾ ದಗ್ಗುಬಾಟಿ ಪಾಲಾಗಿದ್ದು, ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಅಂದಹಾಗೆ, ಆ ಚಿತ್ರ ಯಾವುದು ಎಂಬ ಕುತೂಹಲವಾಯ್ತಾ? ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಚಿತ್ರದ ತೆಲುಗು ರೀಮೇಕ್​.

'ಅಯ್ಯಪ್ಪನುಂ ಕೋಶಿಯುಂ' ಚಿತ್ರವು ತೆಲುಗಿಗೆ ರೀಮೇಕ್ ಆಗುತ್ತಿದೆ ಮತ್ತು ಬಿಜು ಮೆನನ್​ ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ಮಾಡುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇನ್ನು, ಪೃಥ್ವಿರಾಜ್​ ಮಾಡಿದ್ದ ಪಾತ್ರವನ್ನು ಯಾರಿಂದ ಮಾಡಿಸಬೇಕು ಎಂದು ಚರ್ಚೆಯಾದಾಗ, ಸುದೀಪ್​ ಅವರ ಹೆಸರು ಕೇಳಿಬಂದಿತ್ತು.

ಅದರಂತೆ, ಚಿತ್ರತಂಡದವರು ಸುದೀಪ್​ ಅವರನ್ನು ಸಂಪರ್ಕಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಅವರು ನಟಿಸುವುದಕ್ಕೆ ಸಾಧ್ಯವಾಗದೆ, ಇದೀಗ ಆ ಪಾತ್ರವನ್ನು ರಾಣಾ ದಗ್ಗುಬಾಟಿ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಇನ್ನು ರಾಣಾ ಅವರ ತಂದೆಯ ಪಾತ್ರವನ್ನು ತಮಿಳು ನಟ ಸಮುದ್ರಕಣಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹೆಸರಿಡದ ಚಿತ್ರವನ್ನು ಸಾಗರ್​ ಕೆ ಚಂದ್ರ ಎನ್ನುವವರು ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್​ಟೈನ್​ಮೆಂಟ್ಸ್​ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net