ವಾಪಸ್​ ಬಂದ್ರು ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್​...

Untitled-1
Published on

ಬೆಂಗಳೂರು: ಕಾಂಗ್ರೆಸ್​ ಪಕ್ಷವನ್ನು ತೊರೆದು ಇತ್ತೀಚೆಗಷ್ಟೇ ಶಿವಸೇನೆಗೆ ಸೇರಿರುವ ನಟಿ ಊರ್ಮಿಳಾ ಮಾತೊಂಡ್ಕರ್ ಕೆಲವು ದಿನ 'ಇಲ್ಲಿ' ಕಾಣಿಸಿಕೊಂಡಿರಲಿಲ್ಲ. ಇದೀಗ ವಾಪಸ್ ಬಂದಿರುವ ಅವರು ಆ ಬಗ್ಗೆ ಹೇಳಿಕೊಂಡಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ಇದು ಪಕ್ಷಾಂತರದ ವಿಷಯ ಅಲ್ಲ. 'ಇಲ್ಲಿ' ಎಂದರೆ ಇದು ಸೋಷಿಯಲ್ ಮೀಡಿಯಾಗೆ ಸಂಬಂಧಿತ ವಿಷಯ. ಏಕೆಂದರೆ ಕೆಲವು ದಿನಗಳ ಹಿಂದೆ ರಂಗೀಲಾ ಹುಡುಗಿ ಊರ್ಮಿಳಾರ ಇನ್​ಸ್ಟಾಗ್ರಾಮ್​ ಖಾತೆ ಹ್ಯಾಕ್​ ಆಗಿತ್ತು. ಆ ಬಗ್ಗೆ ಸೈಬರ್ ಕ್ರೈಮ್​ಗೆ ದೂರು ಕೊಟ್ಟು, ಮತ್ತೆ ಇನ್​ಸ್ಟಾಗ್ರಾಮ್​ಗೆ ಎಂಟ್ರಿ ಸಿಕ್ಕ ಬಳಿಕದ ವಿಷಯವನ್ನು ಊರ್ಮಿಳಾ ಹಂಚಿಕೊಂಡಿದ್ದಾರೆ. 'ಅಯಾಮ್​ ಬ್ಯಾಕ್​ ಆನ್ ಇನ್​ಸ್ಟಾಗ್ರಾಮ್​' ಎಂದು ಹೇಳಿಕೊಂಡಿರುವ ಅವರು, ಮುಂಬೈ ಪೊಲೀಸರಿಗೆ ಹಾಗೂ ಇನ್​ಸ್ಟಾಗ್ರಾಮ್​ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ಸೈಬರ್ ಕ್ರೈಮ್​ ಎಂಬುದು ಮಹಿಳೆಯರು ಹಗುರವಾಗಿ ತೆಗೆದುಕೊಳ್ಳುವಂಥ ವಿಷಯವಲ್ಲ. ನನ್ನ ಇನ್​ಸ್ಟಾಗ್ರಾಮ್​ ಖಾತೆ ಹ್ಯಾಕ್​ ಆಗಿರುವ ಕುರಿತು ಮುಂಬೈ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲು ಹೋದಾಗ ಸೈಬರ್ ಕ್ರೈಮ್​ ಡಿಸಿಪಿ ರಶ್ಮಿ ಕರಂಡಿಕರ್ ಅವರ ಭೇಟಿಯಾಯಿತು. ಸೈಬರ್ ಕ್ರೈಮ್ ಸಂಬಂಧಿತ ವಿಷಯದ ಬಗ್ಗೆ ಆಗ ಅವರು ಮತ್ತಷ್ಟು ಅಂಶಗಳನ್ನು ತಿಳಿಸಿದರು. ಮುಂದೆ ಇಬ್ಬರೂ ಈ ವಿಷಯದ ಬಗ್ಗೆ ಒಂದಷ್ಟು ಕೆಲಸ ಮಾಡಲಿದ್ದೇವೆ ಎಂದೂ ಊರ್ಮಿಳಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net