More

    ಇಲ್ಲಿ ನಿರ್ಮಾಣವಾಯ್ತು ನಟ ಸೋನು ಸೂದ್​ ದೇವಾಲಯ: ನಿತ್ಯವೂ ಪೂಜೆ, ಆರತಿ

    ತೆಲಂಗಾಣ: ಕರೊನಾ ವೈರಸ್​ ನಿಮಿತ್ತ ದೇಶಾದ್ಯಂತ ಜಾರಿಗೆ ಮಾಡಲಾಗಿದ್ದ ಲಾಕ್​ಡೌನ್​ ಆರಂಭವಾದ ದಿನದಿಂದಲೂ ಕೇಳಿಬರುತ್ತಿರುವ ಕೆಲವೇ ಕೆಲವು ಹೆಸರುಗಳ ಪೈಕಿ ಬಾಲಿವುಡ್​ ನಟ ಸೋನು ಸೂದ್​ ಕೂಡ ಒಬ್ಬರು.

    ಲಾಕ್​ಡೌನ್​ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗುವುದರಿಂದ ಆರಂಭವಾದ ಅವರ ಪಯಣ, ಕರೊನಾ ವೈರಸ್​ನಿಂದ ಕಂಗೆಟ್ಟು ಹೋದವರಿಗೆ ಹಲವಾರು ರೀತಿಯಲ್ಲಿ ನೆರವಾಗುವುದರಿಂದ ಹಿಡಿದು, ಯಾರಾದರೂ ಕಷ್ಟದಲ್ಲಿ ಇದ್ದಾಗ ಅವರಿಗೆ ಕೈಲಾದ ಸಹಾಯ ಮಾಡಲು ಧಾವಿಸುವ ಮೂಲಕ ಇದೀಗ ಮನೆಮಾತಾಗಿದ್ದಾರೆ ಈ 42 ವರ್ಷದ ನಟ.

    ಈಗಾಗಲೇ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡಿ ಮಾನವೀಯತೆ ಮೆರೆದು, ಮಾಧ್ಯಮಗಳಲ್ಲಿ ಸದಾ ಸುದ್ದಿ ಮಾಡುತ್ತಲೇ ಇರುವ ಈ ನಟನಿಗೆ ಇದೀಗ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

    ಇವರ ಇಂಥ ಶ್ಲಾಘನಾರ್ಹ ಕಾರ್ಯದಿಂದ ತೆಲಂಗಾಣದ ದುಬ್ಬಾ ತಾಂಡಾ ಗ್ರಾಮಸ್ಥರು ಅದೆಷ್ಟು ರೀತಿಯಲ್ಲಿ ಖುಷಿಯಾಗಿದ್ದಾರೆಂದರೆ, ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ಸೋನು ಸೂದ್​ ಅವರನ್ನು ದೇವರೆಂದು ಪರಿಗಣಿಸುತ್ತಿರುವುದು ಮಾತ್ರವಲ್ಲದೇ ಅವರಿಗಾಗಿ ಒಂದು ಆಲಯವನ್ನೇ ತೆರೆದಿದ್ದಾರೆ. ಇದು ನಮ್ಮ ದೇವಾಲಯ, ಇಲ್ಲಿರುವ ದೇವರು ಸೋನು ಸೂದ್​ ಎನ್ನುತ್ತಿರುವ ಸ್ಥಳೀಯರು, ಅವರ ಮೂರ್ತಿಯನ್ನು ಇಟ್ಟು ದಿನವೂ ಪೂಜಿಸುತ್ತಿದ್ದಾರೆ.

    ಹ್ಯಾಪಿ ನ್ಯೂ ಇಯರ್ ನಕ್ಷತ್ರದ ವಿಗ್ರಹವನ್ನು ಹೊಂದಿರುವ ದೇವಾಲಯವನ್ನು ಭಾನುವಾರ ಶಿಲ್ಪಿ ಮತ್ತು ಸ್ಥಳೀಯ ಜನರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಆರತಿ ಪ್ರದರ್ಶನವೂ ನಡೆಯಿತು. ಈ ಸಂದರ್ಭದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡಿದರು.

    ದೇಶದ 28 ರಾಜ್ಯಗಳ ಜನರಿಗೆ ಇವರು ದೇವರಂತೆ ಬಂದು ಮಾಡಿರುವ ಸಹಾಯವನ್ನು ನೋಡಿ ನಾವು ಈ ದೇವಾಲಯ ಕಟ್ಟಿದ್ದೇವೆ ಎನ್ನುತ್ತಾರೆ ರಮೇಶ್​ಕುಮಾರ್​.

    ಇವರ ಸೇವಾಕಾರ್ಯ ಭಾರತ ಮಾತ್ರವಲ್ಲದೇ ಪ್ರಪಂಚದ ಗಮನವನ್ನೂ ಸೆಳೆದಿದೆ. ವಿಶ್ವಸಂಸ್ಥೆಯಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಇಂಥ ದೇವರಿಗಾಗಿ ಈ ಆಲಯ ಎನ್ನುತ್ತಾರೆ ಗ್ರಾಮಸ್ಥರು. ಶಿಲ್ಪಿ ಮಧುಸೂದನ್ ಪಾಲ್ ಸೋನು ಅವರ ವಿಗ್ರಹ ಕೆತ್ತಿದ್ದಾರೆ.

    ಲಿವ್​ ಇನ್ ಹೆಸರಲ್ಲಿ ಗರ್ಭಿಣಿ ಮಾಡಿ ಬೀದಿಗೆ ಬಿಟ್ಟಿದ್ದಾನೆ- ಆತ್ಮಹತ್ಯೆ ಬಿಟ್ಟು ಬೇರೆನು ಮಾಡಲಿ?

    ಬಿಜೆಪಿ ನಾಯಕರ ಕ್ರಿಮಿನಲ್​ ಕೇಸ್​ ವಾಪಸ್ ಪ್ರಕರಣ- ಸರ್ಕಾರಕ್ಕೆ ಶಾಕ್​ ಕೊಟ್ಟ ಹೈಕೋರ್ಟ್

    ಮಕ್ಕಳಾಗಿಲ್ಲವೆಂದು ಇನ್ನೊಂದು ಮದ್ವೆಯಾದರೆ ಇಬ್ರಿಗೂ ಮಕ್ಕಳಾದವು: ಈಗ ಆಸ್ತಿಯ ಭಾಗ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts