More

    ಮಕ್ಕಳಾಗಿಲ್ಲವೆಂದು ಇನ್ನೊಂದು ಮದ್ವೆಯಾದರೆ ಇಬ್ರಿಗೂ ಮಕ್ಕಳಾದವು: ಈಗ ಆಸ್ತಿಯ ಭಾಗ ಹೇಗೆ?

    ಮಕ್ಕಳಾಗಿಲ್ಲವೆಂದು ಇನ್ನೊಂದು ಮದ್ವೆಯಾದರೆ ಇಬ್ರಿಗೂ ಮಕ್ಕಳಾದವು: ಈಗ ಆಸ್ತಿಯ ಭಾಗ ಹೇಗೆ?

    ಪ್ರಶ್ನೆ: ನಮ್ಮ ತಂದೆಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಗೆ ಮಕ್ಕಳು ಆಗಲಿಲ್ಲ ಎಂದು ನಮ್ಮ ತಾಯಿಯನ್ನು ಮದುವೆ ಆದರು. ಆದರೆ ನಮ್ಮ ತಾಯಿಯನ್ನು ಮದುವೆ ಆದ ಮೇಲೆ ಮೊದಲ ಹೆಂಡತಿಗೂ ಮಕ್ಕಳಾಯಿತು.

    ಮೊದಲ ಹೆಂಡತಿಗೆ ಆರು ಮಕ್ಕಳು . ಎರಡನೇ ಹೆಂಡತಿಗೆ ನಾವು ಇಬ್ಬರು ಗಂಡು ಮಕ್ಕಳು. ನಮ್ಮ ತಂದೆ ತೀರಿಕೊಂಡಿದ್ದಾರೆ. ಇಬ್ಬರು ಹೆಂಡತಿಯರೂ ಬದುಕಿದ್ದಾರೆ. ಮೊದಲ ಹೆಂಡತಿಯ ಮಕ್ಕಳೆಲ್ಲಾ ವಿದ್ಯಾವಂತರು ಮತ್ತು ಆಸ್ತಿವಂತರು.

    ಎರಡನೇ ಹೆಂಡತಿಯ ಮಕ್ಕಳಾದ ನಾನು ಮತ್ತು ನನ್ನ ತಮ್ಮ ಹೆಚ್ಚು ಓದಿಲ್ಲ. ಸಣ್ಣ ಮೆಕಾನಿಕ್ ಕೆಲಸ ಮಾಡುತ್ತಿದ್ದೇವೆ. ನಮ್ಮತಂದೆ ತೀರಿಕೊಂಡು ಎರಡು ವರ್ಷ ಆಯಿತು. ಆಸ್ತಿಗಳೆಲ್ಲ ಅವರ ಸ್ವಯಾರ್ಜಿತ ಆಸ್ತಿಗಳು. ನಾವು ನಮ್ಮ ತಂದೆ ಕಟ್ಟಿಸಿದ ಮನೆಯಲ್ಲಿ ಇದ್ದೇವೆ. ಹಾಗೇ ಎರಡು ಎಕರೆ ತೋಟ ಇದೆ. ಈಗ ನಮ್ಮ ತಂದೆಯ ಮೊದಲ ಹೆಂಡತಿಯ ಮಕ್ಕಳು ಈ ಮನೆ ಮತ್ತು ಆಸ್ತಿಯಲ್ಲಿ ಎಲ್ಲ ಮಕ್ಕಳಿಗೂ ಸಮಭಾಗ ಆಗಬೇಕು ಎನ್ನುತ್ತಿದ್ದಾರೆ. ನಮ್ಮ ತಂದೆಯ ಬೇರೆ ಆಸ್ತಿಗಳನ್ನು ಅವರು ಬದುಕಿರುವಾಗಲೇ ಒಬ್ಬೊಬ್ಬರೂ ಬೇರೆ ಬೇರೇ ರಿಜಿಸ್ಟರ್ ದಾನ ಪತ್ರ ಮಾಡಿಸಿಕೊಂಡಿದ್ದಾರೆ. ನಮಗೆ ಆ ಆಸ್ತಿಗಳಲ್ಲಿ ಭಾಗ ಕೊಡುವುದಿಲ್ಲ ಎನ್ನುತ್ತಿದ್ದಾರೆ.

    ಈಗ ನಾವು ಸ್ವಾಧೀನದಲ್ಲಿ ಇರುವ ಆಸ್ತಿಯನ್ನು ನಾವೇ ಉಳಿಸಿಕೊಳ್ಳಲು ಏನು ಮಾಡ ಬೇಕು? ಮೊದಲ ಹೆಂಡತಿಯ ಮಕ್ಕಳು ದಾನ ಪತ್ರ ಮಾಡಿಸಿಕೊಂಡಿರುವ ಆಸ್ತಿಯಲ್ಲಿ ನಮಗೆ ಅರ್ಧ ಭಾಗ ಬರಲು ನಾವು ಏನು ಮಾಡ ಬೇಕು ತಿಳಿಸಿ. ಇಬ್ಬರು ಹೆಂಡತಿಯರು ಇರುವುದರಿಂದ ನಮ್ಮ ತಂದೆಯ ಆಸ್ತಿ ಎರಡು ಭಾಗ ಆಗಬೇಕು ಎಂದರೆ ಅವರು ಒಪ್ಪುತ್ತಿಲ್ಲ.

    ಉತ್ತರ: ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಅವರು ಬದುಕಿರುವಾಗಲೇ ನೋಂದಾಯಿತ ದಾನ ಪತ್ರದ ಮೂಲಕ ಯಾರಿಗಾದರೂ ದಾನ ಮಾಡಿದ್ದರೆ, ಆ ಆಸ್ತಿಯಲ್ಲಿ ನಿಮಗೆ ಹಕ್ಕು ಬರುವುದಿಲ್ಲ. ಯಾರಿಗೆ ದಾನ ಮಾಡಿದ್ದಾರೋ ಅವರಿಗೆ ಮಾತ್ರ ಹಕ್ಕು ಇರುತ್ತದೆ.

    ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು https://www.vijayavani.net/ ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಹುಡುಗನೊಬ್ಬನ ಜತೆ ಮದುವೆಗೂ ಮುಂಚೆ ಇದ್ದ ಒಡನಾಟದಿಂದ ಹೊರಬರುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts