ಏಷ್ಯನ್​ ರಿಲೇ ಚಾಂಪಿಯನ್​ಷಿಪ್​ನಲ್ಲಿ ದಾಖಲೆ ಸಹಿತ ಸ್ವರ್ಣ ಗೆದ್ದ ಭಾರತ

blank

ಬ್ಯಾಂಕಾಕ್​: ಭಾರತದ 4/400 ಮೀ. ಮಿಶ್ರ ರಿಲೇ ತಂಡ ಚೊಚ್ಚಲ ಆವೃತ್ತಿಯ ಏಷ್ಯನ್​ ರಿಲೇ ಚಾಂಪಿಯನ್​ಷಿಪ್​ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಸ್ವರ್ಣ ಪದಕ ಗೆದ್ದುಕೊಂಡಿದೆ. ಆದರೆ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆಯಿಂದ ವಂಚಿತವಾಗಿದೆ.

ಮುಹಮ್ಮದ್​ ಅಜ್ಮಲ್​, ಜ್ಯೋತಿಕಾ ಶ್ರೀ ದಂಡಿ, ಅಮೋಜ್​ ಜೇಕಬ್​ ಮತ್ತು ಶುಭಾ ವೆಂಕಟೇಶನ್​ ಒಳಗೊಂಡ ತಂಡ ಸೋಮವಾರ ನಡೆದ ಸ್ಪರ್ಧೆಯಲ್ಲಿ 3 ನಿಮಿಷ, 14.12 ಸೆಕೆಂಡ್​ಗಳಲ್ಲಿ ಓಟ ಮುಗಿಸಿ ಅಗ್ರಸ್ಥಾನ ಪಡೆಯಿತು. ಕಳೆದ ವರ್ಷ ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ 3 ನಿಮಿಷ, 14.34 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದ್ದು ಹಿಂದಿನ ರಾಷ್ಟ್ರೀಯ ದಾಖಲೆಯಾಗಿತ್ತು.

ರಿಲೇ ಓಟದ ಎಲ್ಲ 4 ಚರಣಗಳಲ್ಲಿ ಭಾರತ ತಂಡ ಅಗ್ರಸ್ಥಾನ ಕಾಯ್ದುಕೊಂಡರೆ, ಶ್ರೀಲಂಕಾ (3ನಿ, 17.00 ಸೆ) ದ್ವಿತೀಯ ಮತ್ತು ವಿಯೇಟ್ನಾಂ (3ನಿ, 18.45 ಸೆ) ತೃತೀಯ ಸ್ಥಾನ ಪಡೆಯಿತು.

ಭಾರತದ ಮಿಶ್ರ ರಿಲೇ ತಂಡ ಈಗ ವಿಶ್ವ ಅಥ್ಲೆಟಿಕ್ಸ್​ನ ರೋಡ್​ ಟು ಪ್ಯಾರಿಸ್​ ರ್ಯಾಂಕಿಂಗ್​ನಲ್ಲಿ 21ನೇ ಸ್ಥಾನಕ್ಕೇರಿದೆ. 15 ಅಥವಾ 16ನೇ ಸ್ಥಾನಕ್ಕೇರಿದರೆ ಮಾತ್ರ ಭಾರತಕ್ಕೆ ಒಲಿಂಪಿಕ್ಸ್​ ಸ್ಪರ್ಧೆ ಅವಕಾಶ ಲಭಿಸಲಿದೆ. 14 ತಂಡಗಳು ಈಗಾಗಲೆ ನೇರಅರ್ಹತೆ ಸಂಪಾದಿಸಿದ್ದು, ಉಳಿದ 2 ಸ್ಥಾನಗಳಿಗೆ ಜೂನ್​ 30ರ ಅಂತಿಮ ಗಡುವಿನೊಂದಿಗೆ ಶ್ರೇಷ್ಠ ಸಮಯದ ಸಾಧನೆಯ ಆಧಾರದಲ್ಲಿ ಅರ್ಹತೆ ನೀಡಲಾಗುತ್ತದೆ. ಸದ್ಯ ಜೆಕ್​ ಗಣರಾಜ್ಯ (3ನಿ, 11.98 ಸೆ) ಮತ್ತು ಇಟಲಿ (3ನಿ, 13.56) ಕ್ರಮವಾಗಿ 15, 16ನೇ ಸ್ಥಾನದಲ್ಲಿವೆ. ಹೀಗಾಗಿ ಕನಿಷ್ಠ 3 ನಿಮಿಷ, 13.56 ಸೆಕೆಂಡ್​ನೊಳಗೆ ಸ್ಪರ್ಧೆ ಮುಗಿಸಿದರಷ್ಟೇ ಭಾರತಕ್ಕೆ ಒಲಿಂಪಿಕ್ಸ್​ ಅರ್ಹತೆ ಅವಕಾಶವಿದೆ.

ಈಗಾಗಲೆ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿರುವ ಭಾರತದ 4/400 ಮೀ. ಪುರುಷರ ಮತ್ತು ಮಹಿಳಾ ರಿಲೇ ತಂಡಗಳು ಕೂಟದ 2ನೇ ದಿನವಾದ ಮಂಗಳವಾರ ಸ್ಪರ್ಧಿಸಲಿವೆ.

ಮೋಟಾರ್‌ ಸ್ಪೋರ್ಟ್ಸ್​​ ರೋಡ್‌ಶೋ ಮೂಲಕ ರೇಸಿಂಗ್ ಹುಮ್ಮಸ್ಸು ಹೆಚ್ಚಿಸಲು ಮೊಬಿಲ್1​-ಆರ್​ಪಿಪಿಎಲ್​ ಸಹಯೋಗ

Share This Article

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…