More

    ಬೈಕ್ ಸವಾರನಿಗೆ ತೀವ್ರ ಗಾಯ

    ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗೇಟ್ ಸಮೀಪ ಟಿಪ್ಪರ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಉತ್ತರ ಕನ್ನಡ ಮೂಲದ ಭರತ್ ದೊಡ್ಡಮನಿ(26) ಗಾಯಗೊಂಡವರು. ಭರತ್ ಪತ್ನಿ ಜತೆ ಬೈಕಿನಲ್ಲಿ ನಂಜನಗೂಡು ಕಡೆ ಹೋಗುವಾಗ ಮುಂದೆ ಹೋಗುತ್ತಿದ್ದ ಟಿಪ್ಪರ್‌ನತ್ತ ವಾಲಿದ್ದರಿಂದ ಕೆಳಗೆ ಬಿದ್ದಿದ್ದಾರೆ. ಟಿಪ್ಪರ್ ಚಾಲಕ ಸಮಯ ಪ್ರಜ್ಞೆಯಿಂದ ವಾಹನವನ್ನು ರಸ್ತೆಯ ಕೊನೆಗೆ ಕೊಂಡೊಯ್ದರೂ ಬೈಕ್ ಟಿಪ್ಪರ್‌ಗೆ ತಾಕಿದ್ದರಿಂದ ಸವಾರರು ಕೆಳಗೆ ಬಿದ್ದು ಗಾಯಗೊಂಡರು.


    ವಿಷಯ ತಿಳಿದ ಕೂಡಲೇ ಹೊಯ್ಸಳ ಪೊಲೀಸರು ಸ್ಥಳಕ್ಕೆ ತೆರಳಿ ಕೆಳಗೆ ಬಿದ್ದಿದ್ದ ಭರತ್‌ನನ್ನು ಬೇಗೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳಿಸಲಾಗಿದೆ. ಅವರ ಪತ್ನಿಗೆ ಯಾವುದೇ ಗಾಯಗಳಾಗಿಲ್ಲ.

    ಎರಡು ವಾಹನಗಳನ್ನು ಠಾಣೆಗೆ ತರಲಾಗಿದ್ದು, ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts