More

    ವಾಮಾಚಾರದ ವಿರುದ್ಧ ಗದಾಯುದ್ಧ; ದುಷ್ಟ ಶಕ್ತಿಗಳ ವಿರುದ್ಧ ಹನುಮ ಬಂಟನ ಹೋರಾಟ

    ಬೆಂಗಳೂರು: ವಾಮಾಚಾರಕ್ಕೆ ಸಂಬಂಧಿಸಿದ ಹಲವು ಸಿನಿಮಾಗಳು ಬಂದಿವೆ. ಆದರೆ, ವೈಜ್ಞಾನಿಕವಾಗಿ, ಸಂಶೋಧನೆ ಮಾಡಿದ ಮಾಹಿತಿಯನ್ನು ಆಧರಿಸಿ ಸಿನಿಮಾ ಮಾಡಿರುವ ಉದಾಹರಣೆಯಿಲ್ಲ. ಇದೀಗ ನಿರ್ದೇಶಕ ಶ್ರೀವತ್ಸ ರಾವ್ ಎರಡು ವರ್ಷ ರೀಸರ್ಚ್ ಮಾಡಿ ವಾಮಾಚಾರಕ್ಕೆ ಹೆಸರುವಾಸಿಯಾದ ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ತೆರಳಿ, ಮಾಹಿತಿ ಕಲೆ ಹಾಕಿ ಸಿನಿಮಾ ಮಾಡಿದ್ದಾರೆ. ಹೆಸರು ‘ಗದಾಯುದ್ಧ’.

    ಶ್ರೀವತ್ಸ ರಾವ್, ‘ವೇದಗಳನ್ನು ಓದಿ, ನೈಜ ಘಟನೆಗಳ ಮತ್ತು ವೈಜ್ಞಾನಿಕ ಮಾಹಿತಿ ಎಲ್ಲವನ್ನೂ ಆಧರಿಸಿ ಕಮರ್ಷಿಯಲ್ಲಾಗಿ ಈ ಸಿನಿಮಾ ಮಾಡಿದ್ದೇನೆ. ಪ್ರತಿ ವರ್ಷ ಭಾರತದಲ್ಲಿ ಐದು ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅದಕ್ಕಿರುವ ಹಲವು ಕಾರಣಗಳಲ್ಲಿ ವಾಮಾಚಾರ ಕೂಡ ಒಂದು’ ಎಂದು ಮಾಹಿತಿ ನೀಡುತ್ತಾರೆ. ಚಿತ್ರಕ್ಕೆ ಸುಮಿತ್ ನಾಯಕನಾಗಿದ್ದು, ‘ಸಹಾಯಕ ನಿರ್ದೇಶಕನಾಗಬೇಕು ಅಂತ ನಿರ್ದೇಶಕರ ಬಳಿ ಕೇಳಿದೆ. ಅವರು ಹೀರೋ ಮಾಡಿದರು. ನಮ್ಮ ಸಿನಿಮಾ ಜನರಿಗೆ ಇಷ್ಟವಾದರೆ ಅದೇ ಪ್ರತಿಫಲ’ ಎಂದು ಹೇಳಿಕೊಂಡರು. ಧನ್ಯಾ ನಾಯಕಿಯಾಗಿದ್ದು, ‘ಕೆಟ್ಟದ್ದಕ್ಕಾಗಿ ವಾಮಾಚಾರ ಮಾಡುವ ಪಾತ್ರದಲ್ಲಿ ಡ್ಯಾನಿ ಕುಟ್ಟಪ್ಪ ನಟಿಸಿದ್ದು, ನಾನು ಪಾಸಿಟಿವ್ ಶಕ್ತಿಯನ್ನು ನಂಬುವ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದರು.

    ನಾಯಕ ಸುಮಿತ್ ತಂದೆ ನಿತಿನ್ ಚಿತ್ರ ನಿರ್ಮಿಸಿದ್ದು, ‘ನಾನು ಮೂಲತಃ ಮಹಾರಾಷ್ಟ್ರದವನು. ಆದರೆ, ನನಗೆ ಅನ್ನ ನೀಡುತ್ತಿರುವುದು ಕರ್ನಾಟಕ. ಹೀಗಾಗಿ ಕನ್ನಡದಲ್ಲಿಯೇ ಮೊದಲ ಸಿನಿಮಾ ಮಾಡುವ ಆಸೆಯಿತ್ತು’ ಎಂದರು. ‘ಗದಾಯುದ್ಧ’ ಜೂ. 9ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts