More

    ಕುಣಿಯುವ ಕಾಂಚಾಣದ ಸುತ್ತ ಡಾಲರ್ಸ್‌ಪೇಟೆ; ತಮಿಳು ನಾಡಿನಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ

    ಬೆಂಗಳೂರು: ‘ಮರ್ಫಿ’, ‘ಮದಗಜ’ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಮೋಹನ್ ನಿರ್ದೇಶನದ ಚೊಚ್ಚಲ ಚಿತ್ರ ‘ಎ ಡೇ ಇನ್ ಡಾಲರ್ಸ್‌ಪೇಟೆ’. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇತ್ತೀಚೆಗಷ್ಟೆ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಪ್ರಾರಂಭಿಸಿದೆ.

    ನಿರ್ದೇಶಕ ಮೋಹನ್, ‘ಇದು ಸತ್ಯ ಘಟನೆಯಾಧಾರಿತ ಚಿತ್ರ. ತಮಿಳುನಾಡಿನ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಕಣ್ತಪ್ಪಿನಿಂದ 13 ಕೋಟಿ ರೂ. ಹಣವನ್ನು 100 ಜನರ ಅಕೌಂಟ್‌ಗೆ ಜಮೆ ಮಾಡಿಬಿಡುತ್ತಾರೆ. ನಂತರ ನಡೆಯುವ ಬೆಳವಣಿಗೆಗಳು ರೋಚಕ ತಿರುವು ಪಡೆಯುತ್ತದೆ. ಇದೊಂದು ಹೈಪರ್‌ಲಿಂಕ್ ಹಾಗೂ ಡಾರ್ಕ್ ಕಾಮಿಡಿ ಥ್ರಿಲ್ಲರ್ ಜಾನರ್‌ಗೆ ಸೇರಿದ ಸಿನಿಮಾ. ನಾಲ್ಕು ಪಾತ್ರಗಳ ನಾಲ್ಕು ಕಥೆಗಳು ನಡೆಯುತ್ತಿರುತ್ತದೆ, ನಂತರ ಆ ಪಾತ್ರಗಳು ಒಂದೆಡೆ ಸೇರುತ್ತವೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

    ಇದನ್ನೂ ಓದಿ: ಲೈಸೆನ್ಸ್​ ಇಲ್ಲದೆ ವಾಹನ ಚಾಲನೆ; 5 ದಶಕಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ!

    ನಿರ್ದೇಶಕ ಪವನ್ ಕುಮಾರ್ ಪತ್ನಿ ಸೌಮ್ಯ ಜಗನ್‌ಮೂರ್ತಿ ನಾಯಕಿಯಾಗಿದ್ದು, ‘ನಾನು ಪೂಜಾ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಥ್ರಿಲ್ಲರ್ ಚಿತ್ರವಾದರೂ ಪಾತ್ರಗಳು ಅಳುತ್ತಿದ್ದರೆ, ಪ್ರೇಕ್ಷಕರು ನಗುವಂತೆ ಮಾಡುವ ಸನ್ನಿವೇಶಗಳಿವೆ’ ಎಂದರು. ನಟ ಗರುಡಾ ರಾಮ್ ಸಹೋದರ ವೆಂಕಟ್ ಡಾನ್ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಆಕರ್ಷ್ ಕಮಲ, ರಾಜ್, ಪೃಥ್ವಿ ಅಂಬಾರ್, ದತ್ತು ಬಣಕಾರ್, ರಾಘವೇಂದ್ರ, ಮಹೇಂದ್ರ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ, ಆನಂದ್ ಸುಂದರೇಶ್ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts