‘ಇದು ನನ್ನ ಕೊನೆ ಆಸೆ’: ಕ್ಯಾನ್ಸರ್ ರೋಗಿ ಆಸೆ ಈಡೇರಿಸಿದ ಶಾರುಖ್

srk and shivani
Published on

ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಖಾನ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಅದಕ್ಕೆ ಶಾರುಖ್ ಖಾನ್ ನಡೆಗಳು ಕೆಲವೊಮ್ಮೆ ಕಾರಣವಾಗಿರುತ್ತವೆ. 60 ವರ್ಷದ ಶಿವಾನಿ ಚಕ್ರವರ್ತಿ ಎಂಬ ಕ್ಯಾನ್ಸರ್ ರೋಗಿಯೊಬ್ಬರು, ಶಾರುಖ್ ಖಾನ್ ಭೇಟಿಯಾಗಬೇಕೆಂಬ ಕೊನೆ ಆಸೆ ಬಗ್ಗೆ ಹೇಳಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿಷಯ ತಿಳಿದ ಕೂಡಲೇ ಶಾರುಖ್, ಶಿವಾನಿ ಅವರಿಗೆ ವೀಡಿಯೊ ಕಾಲ್ ಮಾಡಿ ಸುಮಾರು 30 ನಿಮಿಷಗಳ ಕಾಲ ಮಾತನಾಡಿದ್ದಾರೆ. ಶಿವಾನಿ ತಮ್ಮ ಮನದ ಭಾವವನ್ನು ಶಾರುಖ್ ಖಾನ್ ಜತೆ ಹಂಚಿಕೊಂಡಿದ್ದಾರೆ. ‘ನನ್ನ ಮಗಳಿಗೆ ನೀವು ಆಶೀರ್ವದಿಸಬೇಕು. ಕೊಲ್ಕತ್ತಾಗೆ ಬಂದಾಗ ನಮ್ಮ ಮನೆಗೆ ಬರಬೇಕು. ನಮ್ಮ ಮನೆಯಲ್ಲೇ ಊಟ ಮಾಡಬೇಕು. ನಾನು ನನ್ನ ಕೈಯಾರೆ ಅಡುಗೆ ಮಾಡಿ ನಿಮಗೆ ಬಡಿಸುತ್ತೇನೆ’ ಎಂಬ ಶಿವಾನಿ ಅವರ ಆಸೆಯನ್ನು ಶಾರುಖ್ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಜತೆಗೆ ಮಗಳ ಮದುವೆಗೂ ಹಾಜರಾಗುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಶಿವಾನಿಗೆ ಶಾರುಖ್ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಶಿವಾನಿ ಮಾತ್ರ ‘ನಾನು ಒಂದು ಬಾರಿ ಶಾರುಖ್ ಖಾನ್ ಭೇಟಿ ಆಗಬೇಕು. ಅದು ನನ್ನ ಕೊನೆ ಆಸೆ’ ಎಂದು ಭಾವುಕರಾಗಿದ್ದಾರೆ.

ಸದ್ಯ ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾದಲ್ಲಿ ಶಾರುಖ್ ಬಿಜಿಯಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net