More

    ‘ಯದಾ ಯದಾಹಿ ಪ್ರೇಮಸ್ಯ…’ ತೆರೆ ಹಿಂದೆಯೂ ನಟಿಸಿದ್ದ ಸಿಂಹಪ್ರಿಯಾ ಜೋಡಿ

    ಬೆಂಗಳೂರು: ಸ್ಯಾಂಡಲ್‌ವುಡ್ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಬ್ಬರೂ ಮದುವೆಯಾಗಿ ಈಗ ಸಿಂಹಪ್ರಿಯಾ ಆಗಿದ್ದಾರೆ. ಇಬ್ಬರೂ ತೆರೆಯ ಮೇಲೆ ಉತ್ತಮ ಕಲಾವಿದರು ಎಂಬುದನ್ನು ಈಗಾಗಲೇ ಹಲವು ಚಿತ್ರಗಳಲ್ಲಿ ಪ್ರೂವ್ ಮಾಡಿದ್ದಾರೆ. ಆದರೆ, ಇವರು ತೆರೆಯ ಹಿಂದೆಯೂ ನಟಿಸಿದ್ದ ಕುರಿತು ಇತ್ತೀಚೆಗಷ್ಟೆ ಹೇಳಿಕೊಂಡಿದ್ದಾರೆ. ಅಂದಹಾಗೆ ಅದಕ್ಕೆ ವೇದಿಕೆಯಾಗಿದ್ದು ‘ಯದಾ ಯದಾ ಹಿ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. ಇದೊಂದು ಮರ್ಡರ್ ಮಿಸ್ಟರಿ ಚಿತ್ರವಾಗಿದ್ದು, ವಸಿಷ್ಠ ಮತ್ತು ಹರಿಪ್ರಿಯಾ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ. ಜತೆಗೆ ಮೊದಲ ಬಾರಿಗೆ ಒಟ್ಟಿಗೆ ಹಾಡಿದ್ದಾರೆ ಕೂಡ.

    ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಸಿಷ್ಠ, ‘ಈ ಚಿತ್ರದಲ್ಲಿ ನನ್ನ ಹೆಸರನ್ನು ಸೂಚಿಸಿದ್ದು ಹರಿಪ್ರಿಯಾ. ಅದಾಗಲೇ ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಆದರೆ, ಹಾಗಂತೆ ಹೀಗಂತೆ ಅಂತ ಮತ್ತೊಬ್ಬರ ಬಾಯಿಗೆ ಆಹಾರವಾಗಬಾರದು ಎಂಬ ಕಾರಣಕ್ಕೆ ಪ್ರೀತಿಯ ವಿಷಯವನ್ನು ಗೌಪ್ಯವಾಗಿಟ್ಟಿದ್ದೆವು. ಶೂಟಿಂಗ್ ಸಮಯದಲ್ಲಿ ಎರಡು ದಿನ ನನ್ನ ಸನ್ನಿವೇಶ ಇಲ್ಲದಿದ್ದರೂ ನಾನು ಶೂಟಿಂಗ್ ಸೆಟ್‌ಗೆ ಬಂದಿದ್ದೆ. ಆಗ ನಾನು, ಹರಿಪ್ರಿಯಾ ದೂರ ಕುಳಿತುಕೊಂಡು ಬ್ಲೂಟೂತ್ ಮೂಲಕ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ನಾವಿಬ್ಬರೂ ಪ್ರೀತಿಸುತ್ತಿರುವ ವಿಷಯವನ್ನು ಯಾರಿಗೂ ಗೊತ್ತಾಗದಂತೆ ನೋಡಿಕೊಂಡೆವು’ ಎಂದರು.

    ಇದನ್ನೂ ಓದಿ: ಕಾಫಿ ಕ್ರಿಕೆಟರ್ಸ್‌, ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ಗೆಲುವು

    ಚಿತ್ರದಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ದಿಗಂತ್, ‘ನಾನು ದಡ್ಡ, ನನಗೂ ಈ ವಿಷಯ ಗೊತ್ತಾಗಿರಲಿಲ್ಲ. ಈಗ ಸ್ಪಷ್ಟತೆ ದೊರೆಯುತ್ತಿದೆ’ ಎಂದು ಹಾಸ್ಯಚಟಾಕಿ ಹಾರಿಸಿದರು.

    ತೆಲುಗು ಮೂಲದ ಅಶೋಕ್ ತೇಜ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೇರಳ, ಮುನ್ನಾರ್, ಚಿಕ್ಕಮಗಳೂರು, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ 55 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಜೂನ್ 2ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಜಾಕ್ ಮಂಜು ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts