More

    ಲೈಸೆನ್ಸ್​ ಇಲ್ಲದೆ ವಾಹನ ಚಾಲನೆ; 5 ದಶಕಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ!

    ಲಂಡನ್​: ಕಳೆದ 50 ವರ್ಷಗಳ ಕಾಲ ಡ್ರೈವಿಂಗ್​ ಲೈಸೆನ್ಸ್​ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಕಾರನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಚಿತ್ರ ಘಟನೆ ಇಂಗ್ಲೆಂಡ್​ನ ಡರ್ಬ್​ಶೈರ್​ನಲ್ಲಿ ನಡೆದಿದೆ.

    ಡ್ರೈವಿಂಗ್​ ಲೈಸೆನ್ಸ್​ ಇಲ್ಲದೆ ವಾಹನ ಚಾಲನೆ ಮಾಡುವವರು ತೀರಾ ಕಡಿಮೆ ಏಕೆಂದರೆ ಸ್ವಲ್ಪ ಯಾಮಾರಿದರೂ ಸಹ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ. ಕೆಲವೊಮ್ಮೆ ಈಗಾದರೂ ಸಹ ನಾವು ದಂಡವನ್ನು ಪಾವತಿಸುತ್ತೇವೆ.

    ಪರವಾನಗಿ ಇಲ್ಲದೆ ಚಾಲನೆ

    ಇಂಗ್ಲೆಂಡ್​ನ ಡರ್ಬ್​ಶೈರ್​ನ್ಲಲಿ ವ್ಯಕ್ತಿ ಓರ್ವ ಕಳೆದ 50 ವರ್ಷಗಳಿಂದ ಡ್ರೈವಿಂಗ್​ ಲೈಸೆನ್ಸ್​ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದ.

    derbyshire police

    ಮೇ 6ರಂದು ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದಾಗ ವ್ಯಕ್ತಿಯ ಬಳಿ ಚಾಲನಾ ಪರವಾನಗಿ ಇಲ್ಲದಿರುವುದು ಬೆಳಕಿದೆ ಬಂದಿದೆ. 69 ವರ್ಷದ ವ್ಯಕ್ತಿ ಕಳೆದ ಐದು ದಶಕಗಳಿಂದ ಡ್ರೈವಿಂಗ್​ ಲೈಸೆನ್ಸ್​ ಇಲ್ಲದೆ ವಾಹನ ಚಲಾಯಿಸುತ್ತಿದ್ದಾನೆ ಮತ್ತು ಅದನ್ನು ಮಾಡಿಸುವ ಯೋಚನೆಯೂ ಸಹ ಮಾಡಿಲ್ಲ ಎಂಬ ಆಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: VIDEO| ಕಾರನ್ನು ನಿಲ್ಲಿಸಲು ಹೋಗಿ ಸರಣಿ ಅಪಘಾತ ಮಾಡಿದ ಮಹಿಳೆ!

    ನಕಲಿ ದಾಖಲೆ ಸಲ್ಲಿಕೆ

    ಬಂಧಿತ ವ್ಯಕ್ತಿ ವಿಮಾ ಕಂಪನಿಗಳ ಬಳಿ ಸಂಪೂರ್ಣ ಸಮಯದ ಪರವಾನಗಿ ಹೊಂದಿರುವುದಾಗಿ ಹೇಳಿ ಮೋಸ ಮಾಡುತ್ತಿದ್ದ. ಆತ ತನ್ನ ಬಳಿಪರವಾನಗಿ ಇದೆ ಎಂದು ಸೂಚಿಸುವ ನಕಲಿ ವಿವರಗಳನ್ನು ವಿಮಾ ಕಂಪನಿಗಳಿಗೆ ಸಲ್ಲಿಸುತ್ತಿದ್ದ ತಿಳಿದು ಬಂದಿದೆ. 

    ಸದಯ ಘಟನೆ ಸಂಬಂಧ ಆರೋಪಿ ಹಾಗೂ ಆತನ ಕಾರನ್ನು ಪೊಲೀಸರು ವಶಕ್ಕೆ ಪಡೆದು ವಿವಿಧ ಪ್ರಕರಣಗಳಡಿ ದೂರನ್ನು ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts