ನೀರಿನಂಥ ಹೀರೋಗೆ ಹಾಲಿನಂಥ ನಾಯಕಿ! ‘ವಾಮನ’ ಚಿತ್ರದ ಧನ್‌ವೀರ್, ರೀಷ್ಮಾ ಪಾತ್ರಗಳು ರಿವೀಲ್

vamana
Published on

ಬೆಂಗಳೂರು: ಧನ್‌ವೀರ್, ರೀಷ್ಮಾ ನಾಣಯ್ಯ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಚಿತ್ರ ‘ವಾಮನ’. ಭಾನುವಾರ (ಜು. 30) ಶಂಕರ್ ರಾಮನ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲಾಯಿತು. ಕೇವಲ 24 ತಾಸುಗಳಲ್ಲಿ 30 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿರುವ ಹಾಡಿಗೆ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನಿರ್ದೇಶಕ ಶಂಕರ್ ರಾಮನ್, ‘ಚಿತ್ರದಲ್ಲಿ ನಾಯಕನದು ನೀರಿನಂತ ಗುಣ. ರಾವಣ, ದುರ್ಯೋಧನ ಇಬ್ಬರೂ ವಾಮನನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನೂ ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿವೆ. ಮಾಸ್ ಮತ್ತು ಕ್ಲಾಸ್ ಎರಡೂ ಬಗೆಯ ಪ್ರೇಕ್ಷಕರಿಗೆ ಏನು ಬೇಕೋ ಅದೆಲ್ಲವೂ ಚಿತ್ರದಲ್ಲಿವೆ’ ಎಂದು ಹೇಳಿಕೊಂಡರು. ನಂತರ ನಾಯಕ ಧನ್‌ವೀರ್, ‘‘ವಾಮನ’ ನನ್ನ ಮೂರನೇ ಚಿತ್ರ. ಈ ಬಗೆಯ ಇಂಟ್ರೊ ಸಾಂಗ್ ಈ ಹಿಂದಿನ ಸಿನಿಮಾಗಳಲ್ಲೇ ಇರಬೇಕೆಂದು ನಿರೀಕ್ಷಿಸಿದ್ದೆ. ಉತ್ತಮ ಕಂಟೆಂಟ್ ಇರುವ ಚಿತ್ರ’ ಎಂದರು. ನಾಯಕಿ ರೀಷ್ಮಾ ನಾಣಯ್ಯ, ‘ಚಿತ್ರದ ಎಲ್ಲ ಹಾಡುಗಳೂ ಚೆನ್ನಾಗಿ ಮೂಡಿಬಂದಿವೆ. ನಾನಿಲ್ಲಿ ಸಿಂಪಲ್, ಮುದ್ದಾದ ನಂದಿನಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಲವ್‌ನಲ್ಲಿಯೇ ಫೈಟ್ ಇದೆ’ ಎಂದು ಮಾಹಿತಿ ನೀಡಿದರು.

ಚಿತ್ರದಲ್ಲಿ ತಾರಾ, ಸಂಪತ್, ಆದಿತ್ಯ ಮೆನನ್, ಅವಿನಾಶ್, ಭೂಷಣ್, ಕಾಕ್ರೋಚ್ ಸುಧಿ ಪ್ರಮುಖ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net