ಬಾರ್ಬಿ ಮತ್ತು ಓಪನ್‌ಹೈಮರ್​ ಚಿತ್ರಗಳಿಗೆ ಸೆಡ್ಡು ಹೊಡೆದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'!

Untitled design - 2023-08-01T150355.933
Published on

ಕರ್ನಾಟಕ: ರಾಜ್ಯದಲ್ಲಿ ಹಾಲಿವುಡ್​​ ಚಿತ್ರಗಳಾದ 'ಬಾರ್ಬಿ' ಮತ್ತು 'ಓಪನ್‌ಹೈಮರ್​'ಗೆ ಕನ್ನಡ ಚಿತ್ರರಂಗದ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಇದೀಗ ಭಾರೀ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ಹಾಲಿವುಡ್​ ಸಿನಿಮಾಗಳಾದ 'ಓಪನ್​ಹೈಮರ್'​ ಮತ್ತು 'ಬಾರ್ಬಿ' ಚಿತ್ರಗಳು ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಕ್ರಿಸ್ಟಫರ್​ ನೋಲನ್ ನಿರ್ದೇಶನದ ಓಪನ್​ಹೈಮರ್​ ಚಿತ್ರ ರಿಲೀಸ್​ಗೂ ಮುನ್ನವೇ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿತ್ತು. ಇದೀಗ ಕರ್ನಾಟಕವನ್ನು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಆಂಗ್ಲ ಭಾಷೆಯ ಈ ಎರಡು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆಯೊಂದಿಗೆ, ಪ್ರದರ್ಶನವನ್ನು ಕಾಣುತ್ತಿದೆ.

ಭಾರತೀಯ ಬಾಕ್ಸ್ ಆಫೀಸ್ ವರದಿಯ ಪ್ರಕಾರ ಓಪನ್ ಹೈಮರ್, ಬಾರ್ಬಿ ಚಿತ್ರವನ್ನು ಹಿಂದಿಕ್ಕಿದೆ. ಆದ್ರೆ, ಕರ್ನಾಟಕದ ಬಾಕ್ಸ್ ಆಫೀಸ್​​ನಲ್ಲಿ ಈ ಎರಡೂ ಹಾಲಿವುಡ್​​ ಚಿತ್ರಗಳು, 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದೊಂದಿಗೆ ಭಾರೀ ಪೈಪೋಟಿಯನ್ನು ಎದುರಿಸುತ್ತಿವೆ. ಪ್ರದರ್ಶನ ಮತ್ತು ಗಳಿಕೆ ಎರಡರಲ್ಲೂ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಮುಂದಿದೆ ಮತ್ತು ಮುನ್ನುಗ್ಗುತ್ತಿದೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನವಾಗಿದ್ದು, ಪರವಂ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net