2 ಭಾಗಗಳಲ್ಲಿ ಬರಲಿದೆ ಸಿಎಂ ಸಿದ್ಧರಾಮಯ್ಯ ಬಯೋಪಿಕ್​​​​​; 'ಲೀಡರ್ ರಾಮಯ್ಯ' ಆಗಿ ವಿಜಯ್ ಸೇತುಪತಿ

Siddaramaiah
Published on

-ವಿಜಯ್ ಸೇತುಪತಿ ಡೇಟ್ಸ್ ಗಾಗಿ ಕಾಯುತ್ತಿದೆ ಚಿತ್ರತಂಡ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲು ಲೀಡರ್​ ರಾಮಯ್ಯ ಚಿತ್ರ ತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯನ್ನು ಕಳೆದ ಏಳು ತಿಂಗಳಿನಿಂದ ಸಿದ್ದಪಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್‌ಗೆ 'ಲೀಡರ್ ರಾಮಯ್ಯ' ಎಂದು ಟೈಟಲ್ ಇಡಲಾಗಿದೆ. ಸಿ.ಎಂ ಸಿದ್ಧರಾಮಯ್ಯ ಬಯೋಪಿಕ್​​​​​ಗೆ ಕಿಕ್​ಸ್ಟಾರ್ಟ್ ಸಿಕ್ಕಿದ್ದು,​ ಸಿದ್ಧರಾಮಯ್ಯ ರೋಲ್​ನಲ್ಲಿ ವಿಜಯ್​​​ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಮೂಡಿ ಬರ್ತಿರೋ ಜೀವನ ಚರಿತ್ರೆ ಸಿನಿಮಾವನ್ನು ಎರಡು ಭಾಗಗಳಲ್ಲಿ ತೆರೆ ಮೇಲೆ ತರಲು ಸಿದ್ಧತೆ ನಡೆಸಲಾಗಿದೆ.  ಈ ಸಿನಿಮಾ ರಾಜ್ಯದ 24 ನೇ ಮುಖ್ಯಮಂತ್ರಿಯ ಸಿದ್ದರಾಮಯ್ಯ ಜೀವನದ ಸುತ್ತ ಈ ಕತೆ ಸುತ್ತುತ್ತದೆ.

ಸತ್ಯ ರತ್ನಂ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಶಶಾಂಕ್​ ಶೇಷಗಿರಿ ಮ್ಯೂಸಿಕ್​ ಕಂಪೋಸಿಂಗ್​​​​​​ ಚಿತ್ರಕ್ಕಿದೆ. ಹಯತ್ ಪೀರ ಮತ್ತು ಚನ್ನಪ್ಪ ಹಲಳ್ಳಿ ನಿರ್ಮಾಣದಲ್ಲಿ ಬರುತ್ತಿದೆ. ಆಗಸ್ಟ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ತಮಿಳು ನಟ ವಿಜಯ್ ಸೇತುಪತಿಯನ್ನು ಕರೆತರಲು ಬಹಳ ಉತ್ಸುಕರಾಗಿರುವ. ಈ ಚಿತ್ರ ತಂಡ ವಿಜಯ್​ ಸೇತುಪತಿ ಕಾಲ್​ ಶೀಟ್​ಗಾಗಿ ಕಾಯುತ್ತಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net