ಕರಣ್ ಕಣ್ಣಿಗೆ ಸ್ಟಾರ್ ಮಕ್ಕಳಷ್ಟೇ ಅಂದಗಾತಿಯರು; ಜೋಹರ್​ ವಿರುದ್ಧ ಕಂಗನಾ ಮತ್ತೆ ಕಿಡಿ!

Kanga
Published on

ಕರಣ್​ ಜೋಹರ್​ ವಿರುದ್ಧ ಬಾಲಿವುಡ್​​ನ ಕೆಲ ಸ್ಟಾರ್ ನಟರು ತಿರುಗಿ ಬಿದ್ದಿದ್ದಾರೆ. ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಬೆನ್ನಲ್ಲೆ, ಸ್ವಜನಪಕ್ಷಪಾತದ ಹೊಗೆ ಬಾಲಿವುಡ್​ನಲ್ಲಿ ಭುಗಿಲೆದ್ದಿದ್ದು, ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಗೂ ಬಿಸಿ ತಟ್ಟಿದೆ. ಅದರಲ್ಲೂ ಕಂಗನಾ ರಣಾವತ್​ ಮತ್ತು ಕರಣ್​ ಜೋಹರ್​ ನಡುವಿನ ಶೀತಲ ಸಮರ ಮಾತ್ರ ಇನ್ನೂ ನಿಲ್ಲುವ ಹಂತಕ್ಕೆ ಬಂದಿಲ್ಲ. ಇದೀಗ ಸ್ಟಾರ್​ ನಟರ ಮಕ್ಕಳ ಫೋಟೋ ಬಗ್ಗೆ ಕಂಗನಾ ಕಮೆಂಟ್​ ಮಾಡಿದ್ದು, ಕರಣ್​ಗೆ ನೇರವಾಗಿ ತರಾಟೆ ತೆಗೆದುಕೊಂಡಿದ್ದಾರೆ.

ಆಲಿಯಾ ಭಟ್​, ಸಾರಾ ಆಲಿಖಾನ್​, ಸೋನಮ್​ ಕಪೂರ್​, ಸೋನಾಕ್ಷಿ ಸಿನ್ಹಾ ಈ ನಾಲ್ವರು ಬಾಲಿವುಡ್​ನ ಖ್ಯಾತನಾಮ ನಟ, ನಿರ್ದೇಶಕರ ಮಕ್ಕಳು. ಸಿನಿಮಾಕ್ಕೆ ಆಗಮಿಸುವುದಕ್ಕೂ ಮುನ್ನ ಇವರ ಲುಕ್​ ಹೇಗಿತ್ತು ಎಂಬುದನ್ನು ಈಗಾಗಲೇ ಫೋಟೋಗಳಲ್ಲಿ ಕಂಡಾಗಿದೆ. ಇದೀಗ ಟ್ವಿಟರ್​ನಲ್ಲಿ ಅಂಥ ಒಂದು ಫೋಟೋಕ್ಕೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.

‘ಒಂದಷ್ಟು ಮಂದಿ ಇದಕ್ಕೆ ಬಾಡಿ ಶೇಮಿಂಗ್​ ಎನ್ನಬಹುದು. ಆದರೆ, ಇದು ಅದಲ್ಲ. ಕರಣ್​ ಜೋಹರ್​ ಅವರಂಥವರಿಗೆಲ್ಲ ಇದೊಂದು ರಿಯಾಲಿಟಿ ಚೆಕ್​ ಇದ್ದಂತೆ. ಅವರ ಪ್ರಕಾರ ಸ್ಟಾರ್ ಮಕ್ಕಳಷ್ಟೇ ಸುಂದರಿಯರು. ಪ್ರತಿಭಾನ್ವಿತರು. ಹೊರಗಿನಿಂದ ಬಂದವರ್ಯಾರು ಇವರ ಕಣ್ಣಿಗೆ ಕಾಣಿಸುವುದಿಲ್ಲ. ಜನ ಎಚ್ಚೆತ್ತುಕೊಳ್ಳಬೇಕು’ ಎಂದಿದ್ದಾರೆ.

ಇನ್ನು ಬಾಲಿವುಡ್​ನಲ್ಲಿ ನೆಪೋಟಿಸಂ ವಿರುದ್ಧ ಈಗಾಗಲೇ ಸಾಕಷ್ಟು ಕಲಾವಿದರು ಅಸಮಾಧಾನ ಹೊರಹಾಕಿದ್ದಾರೆ. ಬಿಪಾಶಾ ಬಸು, ಅಭಯ್​ ಡಿಯೋಲ್​, ಸುಹಾನಾ ಖಾನ್ ಸಹ ಧ್ವನಿ ಎತ್ತಿದ್ದರು. ಇದೊಂದು ದೀರ್ಘವಾದ ಮತ್ತು ಏಕಾಂಗಿ ಹೋರಾಟ. ಆದರೆ ಫಲಿತಾಂಶ ಮಾತ್ರ ಈ ಚಳವಳಿಯಲ್ಲಿ ಇಡೀ ದೇಶ ಭಾಗಿಯಾಗಬೇಕು’ ಎಂದೂ ಈ ಹಿಂದೆ ಕಂಗನಾ ಹೇಳಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net