ಮೂರನೇ ಬಾರಿಗೆ ಕಂಗನಾಗೆ ಸಮನ್ಸ್​ ಕೊಟ್ಟ ಮುಂಬೈ ಪೊಲೀಸ್​ ...

Kangana Ranaut and Rangoli Chandel - Final
Published on

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂಡೆಲ್​ ಅವರಿಗೆ ನವೆಂಬರ್​ 23 ಮತ್ತು 24ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಮುಂಬೈ ಪೊಲೀಸ್​ ಸಮನ್ಸ್​ ಕೊಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ಇಬ್ಬರೂ ಸೋಷಿಯಲ್​ ಮೀಡಿಯಾದಲ್ಲಿ ಆಕ್ಷೇಪಾರ್ಹ ಬರಹಗಳನ್ನು ಬರೆಯುವುದರ ಜತೆಗೆ ಕೋಮು ಸಾಮರಸ್ಯ ಕದಡುವ ಕೆಲಸವನ್ನು ಬರೆಯುತ್ತಿದ್ದಾರೆ ಎಂದು ಅವರಿಬ್ಬರ ಮೇಲೆ ದೂರು ನೀಡಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅವರಿಬ್ಬರಿಗೂ ಸಮನ್ಸ್​ ನೀಡಲಾಗಿದೆ.

ಇದಕ್ಕೂ ಮುನ್ನ, ಕಂಗನಾ ಮತ್ತು ರಂಗೋಲಿಗೆ ಎರಡು ಬಾರಿ ಸಮನ್ಸ್​ ನೀಡಲಾಗಿತ್ತು. ಅಕ್ಟೋಬರ್​ 26 ಮತ್ತು 27ರಂದು ಅವರಿಬ್ಬರಿಗೂ ವಿಚಾರಣೆಗೆ ಬರುವಂತೆ ಹೇಳಲಾಗಿತ್ತು. ಆದರೆ, ಏನೋ ಕಾರಣ ನೀಡಿ ಇಬ್ಬರೂ ವಿಚಾರಣೆಗೆ ಹೋಗಲಿಲ್ಲ.

ಆ ನಂತರ ನವೆಂಬರ್​ 9 ಮತ್ತು 10ಕ್ಕೆ ಎರಡನೆಯ ಬಾರಿಗೆ ಸಮನ್ಸ್​ ಕೊಟ್ಟಿದ್ದು, ಆಗಲೇ ಅವರಿಬ್ಬರೂ ತಪ್ಪಿಸಿಕೊಂಡಿದ್ದರು. ಈ ಬಾರಿ ತಮ್ಮ ಕಸಿನ್​ ಮದುವೆಯ ನೆಪ ಹೇಳಿ ತಪ್ಪಿಸಿಕೊಂಡಿದ್ದ ಅವರು, ನವೆಂಬರ್​ 15ರ ನಂತರ ಬರುವುದಾಗಿ ತಿಳಿಸಿದ್ದರು. ಅದರಂತೆ. ನ 23 ಮತ್ತು 24ಕ್ಕೆ ಅವರಿಬ್ಬರ ವಿಚಾರಣೆಯನ್ನು ಇಟ್ಟುಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net