More

    ಅವ್ರ ಸಿನ್ಮಾದಲ್ಲಿ ಇವ್ರು … ಇವ್ರ ಸಿನ್ಮಾದಲ್ಲಿ ಅವ್ರು

    ಮುಂಬೈ: ಶಾರೂಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದಲ್ಲಿ ಸಲ್ಮಾನ್​ ಖಾನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಈಗ ಸಲ್ಮಾನ್​ ಖಾನ್​ ಅಭಿನಯದ ಚಿತ್ರದಲ್ಲಿ ಶಾರೂಖ್​ ನಟಿಸುವ ಮೂಲಕ ಋಣ ತೀರಿಸುವುದಕ್ಕೆ ಹೊರಟಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ‘ಆಚಾರ್ಯ’ಗಾಗಿ ಹನಿಮೂನ್​ ಮುಗಿಸಿ ವಾಪಸ್ಸಾದ ಕಾಜಲ್​ ಅಗರ್​ವಾಲ್​

    ಹೌದು, ಸಲ್ಮಾನ್​ ಖಾನ್​ ಮುಂದಿನ ವರ್ಷ ಯಶ್​ರಾಜ್​ ಫಿಲಂಸ್​ನವರಿಗಾಗಿ ‘ಟೈಗರ್​ 3’ ಎಂಬ ಚಿತ್ರ ಮಾಡುತ್ತಿದ್ದು, ಈ ಚಿತ್ರದಲ್ಲಿ ಶಾರೂಖ್​ ಖಾನ್​ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

    ವಿಶೇಷವೆಂದರೆ, ಈ ಚಿತ್ರದಲ್ಲಿ ಶಾರೂಖ್​ ಖಾನ್​ ತಮ್ಮ ‘ಪಠಾಣ್​’ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಚಿತ್ರವನ್ನು ಹಾಲಿವುಡ್​ ಲೆವೆಲ್​ನಲ್ಲಿ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು, ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಇಬ್ಬರು ದೊಡ್ಡ ಸೂಪರ್​ಸ್ಟಾರ್​ಗಳು ಜತೆಯಾಗಿ ನಟಿಸುತ್ತಿರುವುದು ವಿಶೇಷ.

    ಒಂದು ಕಡೆ ‘ಟೈಗರ್​ 3’ನಲ್ಲಿ ಶಾರೂಖ್​ ಖಾನ್​ ‘ಪಠಾಣ್​’ ಆಗಿ ಕಾಣಿಸಿಕೊಂಡರೆ, ಇನ್ನೊಂದು ಕಡೆ ‘ಪಠಾಣ್​’ ಚಿತ್ರದಲ್ಲಿ ಸಲ್ಮಾನ್​ ಖಾನ್​ ಅವರು ಟೈಗರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಇಬ್ಬರ ಅಭಿಮಾನಿಗಳಿಗೂ ಖುಷಿ ತಂದಿದೆ.

    ಇದನ್ನೂ ಓದಿ: ಸುದೀಪ್​ ಜಾಗಕ್ಕೆ ಗೋಪಿಚಂದ್​ ಬರ್ತಾರಾ? ಹೀಗೊಂದು ಹೊಸ ಸುದ್ದಿ

    ಡಿಸೆಂಬರ್​ನಿಂದ ‘ಪಠಾಣ್​’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಸಲ್ಮಾನ್​ ಖಾನ್​ 12 ದಿನಗಳ ಡೇಟ್ಸ್​ ಕೊಟ್ಟಿದ್ದಾರಂತೆ. ಅದು ಮುಗಿಸಿ ‘ಟೈಗರ್’ ಚಿತ್ರೀಕರಣಕ್ಕೆ ಅವರು ತೆರಳಿದ್ದು, ಅಷ್ಟರಲ್ಲಿ ಶಾರೂಖ್​ ಬಂದು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

    ‘1980’ ಚಿತ್ರದ ರೆಟ್ರೋ ಲುಕ್​ನಲ್ಲಿ ಪ್ರಿಯಾಂಕಾ ಉಪೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts