More

    ಸುದೀಪ್​ ಜಾಗಕ್ಕೆ ಗೋಪಿಚಂದ್​ ಬರ್ತಾರಾ? ಹೀಗೊಂದು ಹೊಸ ಸುದ್ದಿ

    ಹೈದರಾಬಾದ್​: ಯಾವಾಗ ಮಲಯಾಳಂನ ಸೂಪರ್​ ಹಿಟ್​ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ’ ತೆಲುಗಿಗೆ ರೀಮೇಕ್​ ಆಗುತ್ತದೆ ಮತ್ತು ಪವನ್ ಕಲ್ಯಾಣ್​ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಯಿತೋ, ಆಗಿನಿಂದ ಪೃಥ್ವಿರಾಜ್​ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವವಾಯಿತು.

    ಇದನ್ನೂ ಓದಿ: ಸಿನಿಮಾ ಆಯ್ತು ಮೂಕನ ಮಕ್ಕಳು – ಮಾಸ್ತಿ ಅವರ ಜನಪ್ರಿಯ ಕೃತಿ ಬೆಳ್ಳೆತೆರೆಗೆ

    ಮೊದಲಿಗೆ ಪೃಥ್ವಿರಾಜ್​ ಮಾಡಿದ ಪಾತ್ರವನ್ನು ರಾಣಾ ದಗ್ಗುಬಾಟಿ ಮಾಡುತ್ತಾರೆ ಎಂಬ ವಿಷಯ ಕೇಳಿಬಂದಿತ್ತು. ಆದರೆ, ಚಿತ್ರತಂಡದವರಾಗಲೀ, ರಾಣಾ ಆಗಲೀ ಈ ಚಿತ್ರದ ಬಗ್ಗೆ ಯಾವ ಮಾತನ್ನೂ ಆಡಲಿಲ್ಲ. ನಂತರ ರಾಣಾ ಬದಲು ಕನ್ನಡಿಗ ಸುದೀಪ್​ ಅವರ ಹೆಸರು ಕೇಳಿಬಂತು. ಸುದೀಪ್​ ಈಗಾಗಲೇ ಒಂದಿಷ್ಟು ತೆಲುಗು ಚಿತ್ರಗಳಲ್ಲಿ ನಟಿಸಿರುವುದರಿಂದ, ಅವರು ಪಾತ್ರ ಮಾಡಬಹುದು ಎಂದು ಅಂದಾಜಿಸಲಾಗಿತ್ತು.

    ಆದರೆ, ಈ ಚಿತ್ರದಲ್ಲಿ ಸುದೀಪ್​ ನಟಿಸುವುದಿಲ್ಲ ಎಂಬ ವಿಷಯ ಕಳೆದ ವಾರವಷ್ಟೇ ಕೇಳಿ ಬಂತು. ಚಿತ್ರದ ಸ್ಕ್ರಿಪ್ಟ್​ನಲ್ಲಿ ಮಹತ್ತರ ಬದಲಾವಣೆ ಮಾಡಲಾಗುತ್ತಿದ್ದು, ಪೃಥ್ವಿರಾಜ್​ ಮಾಡಿದ ಪಾತ್ರವೇ ಇರುವುದಿಲ್ಲ, ಅದರ ಬದಲು ಒಂದು ಪಕ್ಕಾ ನೆಗೆಟಿವ್​ ಪಾತ್ರವನ್ನು ಈ ಚಿತ್ರಕ್ಕಾಗಿ ಸೃಷ್ಟಿಸಲಾಗುತ್ತಿದೆ ಎಂದು ಸುದ್ದಿಯಾಯಿತು.

    ಇದೀಗ ನೋಡಿದರೆ, ಪೃಥ್ವಿರಾಜ್​ ಮಾಡಿದ ಪಾತ್ರವನ್ನು ಗೋಪಿಚಂದ್​ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆ ಪಾತ್ರಕ್ಕೆ ಇರಬೇಕಾದ ಪಿಸಿಕ್​ ಗೋಪಿಚಂದ್​ಗೆ ಇದ್ದು, ಅವರು ಈ ಚಿತ್ರದಲ್ಲಿ ನಟಿಸಿದರೆ ಚೆನ್ನ ಎಂಬ ಅಭಿಪ್ರಾಯ ಚಿತ್ರತಂಡಕ್ಕಿದೆ.

    ಇದನ್ನೂ ಓದಿ: ಹಾದಿ ಸುಗಮವಾಗಿರಲಿಲ್ಲ – ತಾಪ್ಸಿ ಹೇಳಿದ ಹೋರಾಟದ ಕಥೆ

    ಅದೇ ಕಾರಣಕ್ಕೆ, ಈಗಾಗಲೇ ಗೋಪಿಚಂದ್​ಗೆ ಆಫರ್​ ನೀಡಲಾಗಿದೆಯಂತೆ. ಆದರೆ, ಸದ್ಯ ಬೇರೆ ಚಿತ್ರಗಳಲ್ಲಿ ನಟಿಸುತ್ತಿರುವ ಗೋಪಿಚಂದ್​, ಕೆಲವು ದಿನಗಳಲ್ಲಿ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರಂತೆ. ಗೋಪಿಚಂದ್​ ಎಸ್​ ಎನ್ನುತ್ತಾರಾ ಅಥವಾ ನೋ ಎನ್ನುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ನಟನೆಗೆ ಗುಡ್​ಬೈ ಹೇಳಿದರಂತೆ ಇಮ್ರಾನ್​ ಖಾನ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts