More

    ಸಿನಿಮಾ ಆಯ್ತು ಮೂಕನ ಮಕ್ಕಳು – ಮಾಸ್ತಿ ಅವರ ಜನಪ್ರಿಯ ಕೃತಿ ಬೆಳ್ಳೆತೆರೆಗೆ

    ಬೆಂಗಳೂರು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನಪ್ರಿಯ ಕೃತಿಗಳ ಪೈಕಿ ‘ಮೂಕನ ಮಕ್ಕಳು’ ಸಹ ಒಂದು. 1940ರ ದಶಕದಲ್ಲಿ ಬರೆದ ಈ ಕೃತಿ ಈಗ ಅದೇ ಹೆಸರಿನಲ್ಲಿ ಚಿತ್ರವಾಗಿದೆ.

    ಹೆಸರು ಕೇಳಿದರೆ ಇದೊಂದು ಮಕ್ಕಳ ಚಿತ್ರ ಎಂದೆನಿಸಬಹುದು. ಆದರೆ, ಇದು ಮಕ್ಕಳ ಚಿತ್ರವೇನಲ್ಲ. ಅನಾಥ ಮೂಕನೊಬ್ಬನು ಗೌಡನ ಮನೆಯಲ್ಲಿ ನಂಬಿಕಸ್ತ ಆಳಾಗಿರುತ್ತಾನೆ. ಗೆಳೆಯರೆಲ್ಲರು ಮದುವೆಯಾಗುವುದನ್ನು ಕಂಡು, ತಾನು ಸಹ ಮದುವೆಯಾಗಬೇಕೆಂದು ಬಯಸುತ್ತಾನೆ. ಆದರೆ, ಅವನಿಗೆ ಮಾತು ಬರದಿದ್ದರಿಂದ ಯಾರೂ ಹೆಣ್ಣು ಕೊಡುವುದಕ್ಕೆ ಮುಂದೆ ಬರುವುದಿಲ್ಲ. ಆ ಹಳ್ಳಿಗೆ ಭೇಟಿ ನೀಡುವ ಸ್ವಾಮೀಜಿಯೊಬ್ಬರು ಅವನಿಗೊಂದು ವರ ಕೊಡುತ್ತಾರೆ. ಆ ವರ ಏನು ಮತ್ತು ಅದರಿಂದ ಮುಂದೆ ಏನಾಗುತ್ತದೆ ಎಂಬುದೇ ಚಿತ್ರದ ಕಥೆ.

    ಇದನ್ನೂ ಓದಿ: ಹತ್ತು ಕಿ.ಮೀ. ನಡೆದುಕೊಂಡು ಹೋಗಿ ಅಪ್ಪನ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ 11ರ ಬಾಲಕಿ !

    ಈ ಹಿಂದೆ ‘ಶಂಭೋ ಮಹದೇವ’ ಚಿತ್ರವನ್ನು ನಿರ್ದೇಶಿಸಿರುವ ಮೈಸೂರು ಮಂಜು ಈ ಚಿತ್ರವನ್ನು ನಿರ್ದೇಶಿಸಿದ್ದು, ಮಂಜುಕ್ರಿಷ್ ಗೌರಿಬಿದನೂರು ನಾಯಕನಾಗಿ ನಟಿಸಿದ್ದಾರೆ. ಅದರ ಜತೆಗೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಸಹನಿರ್ದೇಶನದ ಜವಾಬ್ದಾರಿಯನ್ನು ಸಹ ಅವರು ಹೊತ್ತುಕೊಂಡಿದ್ದಾರೆ. ಮಂಜುಕ್ರಿಷ್ ಜತೆಗೆ ವಿದ್ಯಾಶ್ರೀ, ಟಿ.ಎನ್. ಶ್ರೀನಿವಾಸಮೂರ್ತಿ, ನೂರ್ ಅಹ್ಮದ್ ಶೇಖ್, ವಿನಾಯಕ್ ಭಟ್ ಮುಂತಾದವರು ನಟಿಸಿರುವ ಈ ಚಿತ್ರ ಈಗಾಗಲೇ ಕೋಲ್ಕತ್ತಾದ ಠ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಪೋಷಕ ನಟ ಮತ್ತು ಉತ್ತಮ ಪರಿಸರ ಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

    ದಾರುಲ್ ಉಲೂಮ್ ಹಕ್ಕಾನಿಯಾ ಪಾಕಿಸ್ತಾನದ ಜಿಹಾದಿಗಳ ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts