More

  ಕಾಲುಗಳಿರುವ ಹಾವನ್ನು ನೋಡಿದ್ದೀರಾ? ಹಾಗಿದ್ರೆ ಒಮ್ಮೆ ಈ ಸುದ್ದಿ ನೋಡಿ…

  ನವದೆಹಲಿ:   ಸೋಶಿಯಲ್​ ಮೀಡಿಯಾದಲ್ಲಿ ಕೆಲವು ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ.  ಅಪರೂಪದ ಪ್ರಾಣಿಗಳು ಮತ್ತು ವಿಚಿತ್ರ ಜೀವಿಗಳ ದೃಶ್ಯಗಳನ್ನು ನೋಡಿ ನಮಗೆ ಆಶ್ಚರ್ಯವಾಗುತ್ತದೆ.  ನಾವು  ಇಂದು ನಿಮಗೆ ಹಾವುಗಳಿಗೆ ಸಂಬಂಧಿಸಿದ ವಿಚಿತ್ರ ಸಂಗತಿಯ ಬಗ್ಗೆ ಹೇಳಲಿದ್ದೇವೆ.

  ಹಾವುಗಳಿಗೆ ಕಾಲುಗಳಿಲ್ಲ, ಅವು ತೆವಳುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಹಾವು ನೋಡಿದ್ರೆ ಅನೇಕರಿಗೆ ಭಯವಾಗುತ್ತದೆ. ಅಲ್ಲಿಂದ ಓಡುತ್ತಾರೆ. ಆ ಹಾವಿಗೂ ಕಾಲುಗಳಿದ್ದರೆ..?  ಹೇಗೆ ಇರುತ್ತದೆ ಅಲ್ವಾ? ನಾವು ಇಂದು ವಿಚಿತ್ರ ವಿಡಿಯೋವನ್ನು ನಿಮ್ಮ ಮುಂದೆ ತರುತ್ತಿದ್ದೇವೆ.

  ಕಾಲುಗಳಿರುವ ಹಾವನ್ನು ನೋಡಿದ್ದೀರಾ? ಹಾಗಿದ್ರೆ ಒಮ್ಮೆ ಈ ಸುದ್ದಿ ನೋಡಿ...

  ನಾಲ್ಕು ಕಾಲಿರುವ ಹಾವಿನ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. “ಇದು ಯಾವ ಜೀವಿ ಎಂದು ಯಾರಿಗಾದರೂ ತಿಳಿದಿದೆಯೇ?” ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇತರರು ಇದನ್ನು ಸುಂದರವಾಗಿ ಫೋಟೋಶಾಪ್ ಮಾಡಿದ ವೀಡಿಯೊ ಎಂದು ವಿವರಿಸುತ್ತಾರೆ. ಕ್ಯಾಮೆರಾ ಚಲಿಸುತ್ತಿದ್ದರೂ ಹಾವು ಕದಲುತ್ತಿಲ್ಲ ಎಂಬ ಕಾರಣಕ್ಕೆ ಇದು ಚೆನ್ನಾಗಿ ಎಡಿಟ್ ಮಾಡಿರುವ ವಿಡಿಯೋ ಎನ್ನುತ್ತಾರೆ. ವೀಡಿಯೊದಲ್ಲಿರುವ ಜೀವಿಯು ಒಟ್ಟು ಎರಡು ಜೋಡಿ ಕಾಲುಗಳನ್ನು ಹೊಂದಿರುವಂತೆ ತೋರುತ್ತಿದೆ. @balichannel ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗುತ್ತಿದೆ.

  ಆದರೆ ಈ ವಿಡಿಯೋ ಎಡಿಟ್​​ ಮಾಡಿರುವುದಾ? ಅಥವಾ ನಿಜವಾದ ಹಾವು ಎನ್ನುವ ಕುರಿತಾಗಿ ಯಾವುದೇ ಮಾಹಿತಿ ಇಲ್ಲ. ಆದರೆ ವಿಚಿತ್ರ ಪ್ರಾಣಿಯ ವಿಡಿಯೋವೊಂದು ವೈರಲ್ ಆಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts