ನಟಿ ಪೂರ್ಣಾ ಜತೆ ವಿವಾಹೇತರ ಸಂಬಂಧ?! ನಟ, ನಿರ್ದೇಶಕ ರವಿಬಾಬು ಕೊಟ್ಟ ಸ್ಪಷ್ಟನೆ ಹೀಗಿದೆ…

Poorna Ravibabu
Published on

ಹೈದರಾಬಾದ್​: ವದಂತಿಗಳಿಗೆ ಚಿತ್ರರಂಗವೇ ಕೇರಾಫ್ ಅಡ್ರೆಸ್ ಎಂದೇ ಹೇಳಬಹುದು. ಏಕೆಂದರೆ, ಸಿನಿ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಗಳ ಬಗ್ಗೆ ದಿನಕ್ಕೊಂದು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದೆಲ್ಲ ಕಾಮನ್​ ಅಂತ ಸೆಲೆಬ್ರಿಟಿಗಳು ಸುಮ್ಮನಾಗುತ್ತಾರೆ. ಆದರೆ, ಕೆಲವೊಮ್ಮೆ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿ, ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆಯುತ್ತಾರೆ.

ವದಂತಿಗಳನ್ನು ಎದುರಿಸುತ್ತಲೇ ಇರುವವರಲ್ಲಿ ನಟಿ ಪೂರ್ಣಾ ಮತ್ತು ನಿರ್ದೇಶಕ ರವಿಬಾಬು ಕೂಡ ಒಬ್ಬರು. ಅಂದಹಾಗೆ ರವಿಬಾಬು ಅವರು ಟಾಲಿವುಡ್​ನಲ್ಲಿ ನಟ ಮತ್ತು ನಿರ್ದೇಶಕರಾಗಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಹೊಂದಿದ್ದಾರೆ. ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರವಿಬಾಬು, ಓರ್ವ ನಟನಾಗಿ ಕಾಲಕಾಲಕ್ಕೆ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದರೂ, ನಿರ್ದೇಶಕರಾಗಿ ರವಿಬಾಬು ಅವರ ಸಿನಿಮಾಗಳು ಇತ್ತೀಚೆಗೆ ಸೋಲು ಕಂಡಿವೆ. ರವಿಬಾಬು ಅವರ ಸಿನಿಮಾಗಳಲ್ಲಿ ನಾಯಕಿ ಪೂರ್ಣಾ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ರವಿಬಾಬು ಅವರ ಸಿನಿಮಾಗಳಾದ ಯಾ ಯಾ 2, ಲಡ್ಡು ಬಾಬು, ಅಡುಗೋದಲ್ಲಿ ಪೂರ್ಣಾ ನಟಿಸಿದ್ದಾರೆ. ಹೀಗಾಗಿ ಇಬ್ಬರ ನಡುವೆ ಸಂಬಂಧವಿದೆ ಎಂಬ ವದಂತಿಗಳೂ ಹಲವು ಬಾರಿ ಹರಿದಾಡಿವೆ. ಆಗಾಗ ಈ ಸುದ್ದಿ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇದೆ. ಇತ್ತೀಚೆಗೆ ರವಿಬಾಬು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಪೂರ್ಣಾ ಅವರೊಂದಿಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದರು.

ನಟಿ ಪೂರ್ಣಾ ಜೊತೆ ನನಗೆ ಅಫೇರ್ ಇದೆ ಅಂತ ದೊಡ್ಡ ಸುದ್ದಿಯಾಗಿತ್ತು. ಇದೆಲ್ಲ ಮಾಧ್ಯಮಗಳು ಸೃಷ್ಟಿಸಿದ ಸುದ್ದಿಯಷ್ಟೇ, ನಮ್ಮ ನಡುವೆ ಆ ರೀತಿ ಯಾವುದೇ ಸಂಬಂಧವಿಲ್ಲ. ಸತತ ಮೂರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವುದರಿಂದ ಇಂತಹ ಸುದ್ದಿಗಳು ಹುಟ್ಟಿಕೊಂಡಿವೆ. ನನಗೆ ಪೂರ್ಣಾ ಜೊತೆ ಲವ್ ಅಫೇರ್ ಇದೆ. ಆದರೆ, ಆ ಸಂಬಂಧ ನೀವು ಅಂದುಕೊಂಡಂತೆ ಅಲ್ಲ. ಪ್ರತಿಯೊಬ್ಬ ನಿರ್ದೇಶಕರು ತಮ್ಮ ಕಲಾವಿದರೊಂದಿಗೆ ಪ್ರೀತಿಯನ್ನು ಹೊಂದಿರುತ್ತಾರೆ. ನನಗೂ ಪೂರ್ಣಾ ಅವರಿಗೂ ಅಂತಹ ಸಂಪರ್ಕವಿದೆ ಎಂದು ರವಿಬಾಬು ಸ್ಪಷ್ಟನೆ ನೀಡಿದ್ದಾರೆ.

ಪೂರ್ಣಾ ಅವರು ನಿರ್ದೇಶಕರು ಹೇಳಿದ್ದಕ್ಕಿಂತ ಚೆನ್ನಾಗಿ ನಟಿಸುತ್ತಾರೆ. ಎಲ್ಲ ಪಾತ್ರಗಳಿಗೆ ನ್ಯಾಯ ಒದಗಿಸುವುದರಿಂದ ನನ್ನ ಸಿನಿಮಾಗಳಿಗೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡೆ. ಅದನ್ನು ಬಿಟ್ಟು ಬೇರೇನು ಇಲ್ಲ. ನಾನು ನಿರ್ದೇಶಕ ಅಂತ ನನ್ನ ಎಲ್ಲ ಸಿನಿಮಾಗಳನ್ನು ಪೂರ್ಣಾ ಒಪ್ಪಿಕೊಳ್ಳುವುದಿಲ್ಲ. ಕತೆ ಇಷ್ಟವಾದರೆ ಮಾತ್ರ ಒಪ್ಪುತ್ತಾರೆ. ನನ್ನ ನಿರ್ದೇಶನದ ವಾಷಿಂಗ್ ಮೆಷಿನ್‌ ಚಿತ್ರದಲ್ಲಿ ನಟಿಸುವಂತೆ ಪೂರ್ಣಾಳನ್ನು ಕೇಳಿದೆ. ಆದರೆ ಆಕೆ ಆಗಲ್ಲ ಎಂದರು ಎಂದು ರವಿಬಾಬು ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net