

Kamakshi Bhaskarla : ಹವ್ಯಾಸ ಅಥವಾ ಅಭ್ಯಾಸ ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ. ಕೆಲವರಲ್ಲಿ ಓದುವುದು, ಬರೆಯುವುದು, ಸಮಾಜ ಸೇವೆ ಮುಂತಾದ ಒಳ್ಳೆಯ ಅಭ್ಯಾಸಗಳಿದ್ದರೆ, ಒಂದಿಷ್ಟು ಮಂದಿಯಲ್ಲಿ ಧೂಮಪಾನ, ಮದ್ಯಪಾನ ಹಾಗೂ ಮಾನವೀಯತೆ ಮರೆತು ವರ್ತಿಸುವಂತಹ ಕೆಟ್ಟ ಅಭ್ಯಾಸಗಳಿರುತ್ತವೆ. ಇನ್ನು ಕೆಲವರಲ್ಲಿ ಚಿತ್ರ-ವಿಚಿತ್ರ ಅಭ್ಯಾಸಗಳು ಇರುತ್ತವೆ. ಉದಾಹರಣೆಗೆ, ಕೆಲವರು ಮೊಬೈಲ್ ಇಲ್ಲದೇ ಟಾಯ್ಲೆಟ್ಗೆ ಹೋಗುವುದಿಲ್ಲ. ಅದೇ ರೀತಿ ಇಲ್ಲೊಬ್ಬ ಟಾಲಿವುಡ್ ಸುಂದರಿಗೂ ಒಂದು ವಿಚಿತ್ರ ಅಭ್ಯಾಸವಿದೆ. ಅದರ ಬಗ್ಗೆ ತಿಳಿದರೆ ನಿಮ್ಮ ಹುಬ್ಬೇರುವುದು ಖಚಿತ.
ಅಂದಹಾಗೆ, ಆ ವಿಚಿತ್ರ ಅಭ್ಯಾಸ ಇರುವುದು ಹಾಟ್ ಬ್ಯೂಟಿ ಕಾಮಾಕ್ಷಿ ಭಾಸ್ಕರ್ಲಾ ಅವರಿಗೆ. ಕನ್ನಡಿಗರಿಗೆ ಕಾಮಾಕ್ಷಿ ಪರಿಚತ ಇಲ್ಲದಿರಬಹುದು ಆದರೆ, ಅವರು ನಟಿಸಿದ ಸಿನಿಮಾಗಳಂತೂ ನೆನಪಿನಲ್ಲಿರುತ್ತವೆ. ಅಂತಹ ಚಿತ್ರಗಳಲ್ಲಿ ಪೋಲಿಮೆರಾ ಹಾಗೂ ದೂತಾ ಕೂಡ ಸೇರಿವೆ. ಈ ಚಿತ್ರಗಳನ್ನು ನೋಡಿದವರು ಯಾರೂ ಕಾಮಾಕ್ಷಿ ಅವರನ್ನು ಮರೆಯುವುದಿಲ್ಲ. ಈ ಸುಂದರಿ ತನ್ನ ಅಭಿನಯದಿಂದಲೇ ಪ್ರೇಕ್ಷಕರನ್ನು ತಮ್ಮತ್ತ ಸೆಳೆದಿದ್ದಾರೆ.
ಅಂದಹಾಗೆ, ಕಾಮಾಕ್ಷಿ ಅವರು ತುಂಬಾ ಗ್ಲಾಮರಸ್ ಬೆಡಗಿ. ಅವರ ಇನ್ಸ್ಟಾಗ್ರಾಂ ಪೇಜ್ ತೆಗೆದು ನೋಡಿದರೆ ಬಿಕಿನಿ ಮತ್ತು ಅರೆಬೆತ್ತಲೆ ಫೋಟೋಗಳೇ ತುಂಬಿವೆ. ಆದರೆ, ಪೋಲಿಮೆರಾ ಚಿತ್ರದಲ್ಲಿ ಕಾಮಾಕ್ಷಿ ಡಿಗ್ಲಾಮರಸ್ ಆಗಿ ಕಾಣಿಸಿಕೊಂಡರು. ಇನ್ಸ್ಟಾದಲ್ಲಿ ಅವರ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಪ್ರಸ್ತುತ, ಈ ಬೆಡಗಿ '12A ರೈಲ್ವೆ ಕಾಲನಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲರಿ ನರೇಶ್ ನಾಯಕನಾಗಿ ನಟಿಸಿರುವ ಈ ಚಿತ್ರವೂ ಒಂದು ಥ್ರಿಲ್ಲರ್ ಆಗಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಈ ಸುಂದರಿ, ಚಿತ್ರದ ಬಗ್ಗೆ ಮತ್ತು ತಮಗಿರುವ ವಿಚಿತ್ರ ಅಭ್ಯಾಸದ ಬಗ್ಗೆ ಕ್ಯಾಮರಾ ಮುಂದೆ ಹೇಳಿದರು. ಆಕೆಯ ವಿಚಿತ್ರ ಅಭ್ಯಾಸ ಕೇಳಿದ ಅಭಿಮಾನಿಗಳು ಒಂದು ಕ್ಷಣ ಹುಬ್ಬೇರಿಸಿದ್ದಾರೆ.
ಬೇಸರವಾದಗ ಅಥವಾ ಮನಸ್ಸಿಗೆ ದುಃಖವಾದಾಗ ಕಾಮಾಕ್ಷಿ ಅವರು ಸ್ಮಶಾನಕ್ಕೆ ಹೋಗುತ್ತಾರಂತೆ. ಅಲ್ಲಿಗೆ ಹೋದರೆ, ಆಕೆಗೆ ಶಾಂತಿ ಸಿಗುತ್ತದೆಯಂತೆ. ನಾನು ಖಿನ್ನತೆಗೆ ಒಳಗಾದಾಗ ಅಥವಾ ತುಂಬಾ ಬೇಸರ ಎನಿಸಿದಾಗ ಸ್ಮಶಾನಕ್ಕೆ ಹೋಗುತ್ತೇನೆ. ಅಲ್ಲಿಗೆ ಹೋದರೆ, ನನಗೆ ಒಂದು ರೀತಿಯ ಉತ್ತೇಜನ ಸಿಗುತ್ತದೆ ಮತ್ತು ನನ್ನ ಮನಸ್ಸಿಗೆ ಸಾಕಷ್ಟು ಶಾಂತಿ ದೊರೆಯುತ್ತದೆ ಎಂದು ಕಾಮಾಕ್ಷಿ ಹೇಳಿದರು. ಸದ್ಯ ಆಕೆಯ ಮಾತು ಟಾಲಿವುಡ್ ಗಲ್ಲಿಯೊಳಗೆ ಗಿರಕಿ ಹೊಡೆಯುತ್ತಿದೆ. (ಏಜೆನ್ಸೀಸ್)