ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದೆ ಅನ್ನೋದು ಸುಳ್ಳಾ? ವಿಜ್ಞಾನ ಏನು ಹೇಳುತ್ತೆ ನೋಡಿ..! Love At First Sight

Love At First Sight
Published on

Love At First Sight : ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದೆ ( Love At First Sight ) ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿ ಈ ಮಾತನ್ನು ಹೆಚ್ಚಾಗಿ ಹೇಳುತ್ತಾರೆ. ಇದನ್ನು ಕೇಳಲು ತುಂಬಾ ರೋಮ್ಯಾಂಟಿಕ್ ಎನಿಸಬಹುದು. ಆದರೆ, ಮೊದಲ ನೋಟದಲ್ಲೇ ಪ್ರೀತಿ ಎಂಬುದು ನಿಜವೇ? ಅದು ಹೃದಯದಿಂದ ಹುಟ್ಟುವ ಭಾವನೆಯೇ? ಅಥವಾ ನಮ್ಮ ಮೆದುಳು ನಮ್ಮನ್ನು ದಾರಿ ತಪ್ಪಿಸುತ್ತಿದೆಯೇ? ಈ ವಿಷಯದ ಬಗ್ಗೆ ವಿಜ್ಞಾನಿಗಳು ಮತ್ತು ಮನಶ್ಶಾಸ್ತ್ರಜ್ಞರು ಏನು ಹೇಳುತ್ತಾರೆಂದು ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ.

ಡೋಪಮೈನ್ ಕಾರಣ

ಮೊದಲ ನೋಟದಲ್ಲೇ ಉಂಟಾಗುವ ತೀವ್ರ ಭಾವನೆಯನ್ನು ವಿಜ್ಞಾನವು 'ಪ್ರೀತಿ' ಗಿಂತ 'ವ್ಯಾಮೋಹ' ಅಥವಾ 'ಮೋಹ' ಎಂದು ಕರೆಯುತ್ತದೆ. ನಾವು ಯಾರನ್ನಾದರೂ ನೋಡಿದಾಗ, ನಮ್ಮ ಮೆದುಳು ಕೇವಲ 0.13 ಸೆಕೆಂಡುಗಳಲ್ಲಿ ಅವರ ಆಕರ್ಷಣೆಯನ್ನು ನಿರ್ಧರಿಸುತ್ತದೆ. ಈ ಸಮಯದಲ್ಲಿ, ನಮ್ಮ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ.

ಆ ಕ್ಷಣದ ಆಕರ್ಷಣೆ

ನಾವು ತಿನ್ನುವಾಗ ಅಥವಾ ನಮಗೆ ಸಂತೋಷವನ್ನು ನೀಡುವ ಕೆಲಸಗಳನ್ನು ಮಾಡುವಾಗಲೂ ಇದೇ ಡೋಪಮೈನ್ ಬಿಡುಗಡೆಯಾಗುತ್ತದೆ. ಆದ್ದರಿಂದ, ಆ ಕ್ಷಣದಲ್ಲಿ ನಾವು ಅನುಭವಿಸುವ ಹೃದಯ ಬಡಿತ ಮತ್ತು ಸಂತೋಷವು ನಿಜವಾದ ಪ್ರೀತಿಯಲ್ಲದಿರಬಹುದು, ಅದು ಆ ಕ್ಷಣದ ಆಕರ್ಷಣೆಯಿಂದ ಉಂಟಾಗುವ ಉತ್ಸಾಹ ಮಾತ್ರ ಎಂದು ವಿಜ್ಞಾನ ಹೇಳುತ್ತದೆ.

ಸುಳ್ಳು ಎಂದು ಹೇಳಲಾಗದು

ಆದಾಗ್ಯೂ, ಮೊದಲ ನೋಟದಲ್ಲೇ ಉಂಟಾಗುವ ಈ ಆಕರ್ಷಣೆಯು ಸಂಬಂಧದ ಅಡಿಪಾಯವಾಗಿದೆ. ಕೆಲವು ಜನರು ಈ ಆಕರ್ಷಣೆಯನ್ನು 'ಪ್ರೀತಿ' ಎಂದು ಪರಿಗಣಿಸುತ್ತಾರೆ ಮತ್ತು ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ. ಹೀಗಾಗಿ, ಆಕರ್ಷಣೆಯು ಕ್ರಮೇಣ ಪ್ರೀತಿಯಾಗಿ ಬೆಳೆಯುತ್ತದೆ. ಅಂದರೆ, ಇದು ಮೊದಲ ನೋಟದಲ್ಲೇ ಆಕರ್ಷಣೆಯಾಗಿದ್ದರೂ, ಆ ಆಕರ್ಷಣೆಯು ನಂತರದಲ್ಲಿ ನಿಜವಾದ ಪ್ರೀತಿಯಾಗಿ ಬೆಳೆಯುವ ಸಾಧ್ಯತೆಯಿದೆ. ಆದ್ದರಿಂದ ಇದನ್ನು 'ಭ್ರಮೆ' ಅಥವಾ 'ಸುಳ್ಳು' ಎಂದು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ.

ಅಂದಹಾಗೆ, ಮೊದಲ ನೋಟದಲ್ಲೇ ಆಕರ್ಷಣೆ ಎನ್ನುವುದು ತುಂಬಾ ಕ್ಷಣಿಕವಾದ ಭಾವನೆಯಾಗಿಬಹುದು. ಆದರೆ, ಪ್ರೀತಿಗೆ ಅಡಿಪಾಯವೇ ಆ ಭಾವನೆ. ಆಕರ್ಷಣೆಯು ನಿಜವಾದ ಪ್ರೀತಿಯಾಗಿ ಬದಲಾಗಲು ಸಮಯ, ತಿಳುವಳಿಕೆ ಮತ್ತು ಶ್ರಮ ಬೇಕಾಗುತ್ತದೆ. ಆದ್ದರಿಂದ ಮೊದಲ ನೋಟದಿಂದಲೇ ಒಂದು ಅದ್ಭುತ ಪ್ರಯಾಣ ಪ್ರಾರಂಭವಾಗುತ್ತದೆ ಎಂದು ನಂಬಬಹುದು.

ಗಮನಿಸಿ: ಪ್ರೀತಿ ಮತ್ತು ಆಕರ್ಷಣೆ ಎಂಬುದು ಮಾನವನ ಭಾವನೆಗಳು. ಇಲ್ಲಿ ವಿಜ್ಞಾನವು ನೀಡುವ ವಿವರಣೆಗಳು, ಈ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡತ್ತದೆ ಅಷ್ಟೇ. ವಿಜ್ಞಾನ ಹೇಳಿದ್ದೇ ಫೈನಲ್​ ಅಲ್ಲ. ಏಕೆಂದರೆ, ಒಬ್ಬೊಬ್ಬರ ಭಾವನೆಗಳು ವಿಭಿನ್ನವಾಗಿರುತ್ತದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರ ಪ್ರೇಮಕಥೆಯು ವಿಭಿನ್ನ ಮತ್ತು ವಿಶಿಷ್ಟವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net