ಕಸದ ರಾಶಿಯಲ್ಲಿ ಮೆಲೋಡಿ ಹಾಡಿಗೆ ಹೆಜ್ಜೆ ಹಾಕಿದ ಯುವತಿ! ಈ ಜಾಗ ನಿಮಗೆ ಸಖತ್​ ಆಗಿದೆ ಎಂದ ನೆಟ್ಟಿಗರು

Viral Video

ಮುಂಬೈ: ಇತ್ತೀಚಿನ ಯುವ ಪೀಳಿಗೆಯೂ ಸಾಮಾಜಿಕ ಜಾಲತಾಣದ ಗೀಳಿಗೆ ಹೆಚ್ಚು ಮಾರು ಹೋಗುತ್ತಿದ್ದು, ವೈರಲ್​ ಆಗಿ ರಾತ್ರೋ ರಾತ್ರಿ ಸೆಲೆಬ್ರಿಟಿ ಆಗುವ ಆಲೋಚನೆಯೊಂದಿಗೆ ಒಂದಿಲ್ಲೊಂದು ಕೆಲಸಕ್ಕೆ ಕೈ ಹಾಕುತ್ತಿರುತ್ತಾರೆ. ಇದೀಗ ಡಿಜಿಟಲ್​ ಕಂಟೆಂಟ್​ ಕ್ರಿಯೇಟರ್​ ಒಬ್ಬರು ವೈರಲ್​ ತಮ್ಮ ವಿಡಿಯೋಗೆ ಹೆಚ್ಚಿನ ವೀವ್ಸ್​ ಹಾಗೂ ಲೈಕ್​ ಬರಲಿ ಎಂಬ ಕಾರಣಕ್ಕೆ ಡಂಪಿಂಗ್​ ಯಾರ್ಡ್​ನಲ್ಲಿ ರೀಲ್ಸ್​ ಮಾಡಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಡಂಪಿಂಗ್​ ಯಾರ್ಡ್​ ಒಂದರಲ್ಲಿ ಕಂಟೆಂಟ್​ ಕ್ರಿಯೇಟರ್​ ಸೀಮಾ ಅಕ್ಷಯ್​ ಕುಮಾರ್​ ನಟನೆಯ ಹಿಟ್​ ಚಿತ್ರ ಅಂದಾಜ್​ ಸಿನಿಮಾದ ಹಾಡಿಗೆ ಮಳೆಯಲ್ಲೇ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಡ್ಯಾನ್ಸ್​ ವೇಳೆ ಅಲ್ಲೇ ಇಡಲಾಗಿರುವ ಬಕೆಟ್​ ಒಂದರಿಂದ ಮೈಮೇಲೆ ನೀರನ್ನು ಸುರಿದುಕೊಳ್ಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಹಿಂದೆ ಬಸ್, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಚಿತ್ರ ವಿಚಿತ್ರವಾಗಿ ಡ್ಯಾನ್ಸ್​ ಮಾಡುವ ಸುದ್ದಿಯಾಗಿದ್ದ ಸೀಮಾ ಇದೀಗ ಡಂಪಿಂಗ್ ಯಾರ್ಡ್​​ನಲ್ಲಿ ಡ್ಯಾನ್ಸ್​ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ 7.5ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿರುವ ಸೀಮಾ ಆಗಿಂದಾಗೆ ಸುದ್ದಿಯಾಗುತ್ತಿರುತ್ತಾರೆ.

Share This Article

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…