ನವದೆಹಲಿ: ಈಗಾಗಲೇ ಆರ್ಥಿಕ ಸಂಕಷ್ಟ, ಭಯೋತ್ಪಾದನೆ ಹಾಗೂ ಕ್ರೀಡೆಯಲ್ಲಿನ ವೈಫಲ್ಯದ ವಿಚಾರವಾಗಿ ಪಾಕಿಸ್ತಾನ ಸುದ್ದಿಯಲ್ಲಿದ್ದು, ವಿಶ್ವದ ಮುಂದೆ ಒಂದಿಲ್ಲೊಂದು ಕಾರಣಕ್ಕೆ ಬೆತ್ತಲಾಗುತ್ತಿದೆ. ಇದೀಗ ಪಾಕಿಸ್ತಾನದ ಮೂವರು ಹಾಕಿ ಆಟಗಾರರಿಗೆ ಅಜೀವ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಈ ಮೂವರು ಆಟಗಾರರು ಯಾವುದೇ ಮ್ಯಾಚ್ ಫಿಕ್ಸಿಂಗ್ ಆರೋಪವನ್ನಾಗಲಿ ಅಥವಾ ಬೇರೆ ಯಾವುದೇ ಆರೋಪದಲ್ಲಿ ಸಿಕ್ಕಿಬಿದ್ದು, ಆಜೀವ ನಿಷೇಧಕ್ಕೊಳಗಾಗಿಲ್ಲ. ಪಾಕಿಸ್ತಾನದ ಆರ್ಥಿಕ ದುಸ್ಥಿತಿಯಿಂದ ಬೇಸತ್ತು ಈ ಮೂವರು ಆಟಗಾರರು ಹಾಕಿ ಫೆಡರೇಶನ್‌ಗೆ ತಿಳಿಯದಂತೆ ಯುರೋಪಿಯನ್ ದೇಶಕ್ಕೆ ಪರಾರಿಯಾಗಲು ಯತ್ನಿಸಿದ ಮೂವರು ಪಾಕಿಸ್ತಾನಿ ಹಾಕಿ ಆಟಗಾರರು ಮತ್ತು ಫಿಸಿಯೋಥೆರಪಿಸ್ಟ್ ಯತ್ನಿಸಿದ್ದು, ಈ ಕಾರಣಕ್ಕಾಗಿಯೇ ಅವರನ್ನು ಬ್ಯಾನ್ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಹಾಕಿ ಫೆಡರೇಷನ್ ಕಾರ್ಯದರ್ಶಿ ರಾಣಾ ಮುಜಾಹಿದ್, ಮೂವರು ಆಟಗಾರರಾದ ಮುರ್ತಾಜಾ ಯಾಕೂಬ್, ಇಹ್ತೇಶಾಮ್ ಅಸ್ಲಾಮ್, ಅಬ್ದುರ್ ರೆಹಮಾನ್ ಮತ್ತು ಫಿಸಿಯೋಥೆರಪಿಸ್ಟ್ ವಕಾಸ್ ಕಳೆದ ತಿಂಗಳು ನೆದರ್ಲ್ಯಾಂಡ್ ಹಾಗೂ ಪೋಲೆಂಡ್ಗೆ ನೇಷನ್ಸ್ ಕಪ್ ಆಡಲು ತೆರಳಿದ್ದರು. ಪ್ರವಾಸ ಮುಗಿದ ಕೂಡಲೇ ಇಡೀ ತಂಡ ದೇಶಕ್ಕೆ ವಾಪಸ್ಸಾಗಿತ್ತು. ಆ ಬಳಿಕ ಏಷ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ಮಂಡಳಿ ತರಬೇತಿ ಶಿಬಿರವನ್ನು ಘೋಷಿಸಿದಾಗ, ಈ ಮೂವರೂ ಆಟಗಾರರು ಸಮಸ್ಯೆಗಳಿಂದ ಶಿಬಿರಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನಮಗೆ ಹೇಳಿದ್ದರು.
ಇದನ್ನೂ ಓದಿ: ರೇಣುಕಸ್ವಾಮಿ ಹತ್ಯೆ ಕೇಸ್; ಎರಡನೇ ಬಾರಿ ವಿಚಾರಣೆ ಬಳಿಕ ನಟ ಚಿಕ್ಕಣ್ಣ ಹೇಳಿದ್ದಿಷ್ಟು
ಆ ಬಳಿಕ ಈ ನಾಲ್ವರಿಗೆ ನೇಷನ್ಸ್ ಕಪ್ ಸಮಯದಲ್ಲಿ ನೀಡಲಾಗಿದ್ದ ವೀಸಾವನ್ನು ಬಳಸಿ ನೆದರ್ಲ್ಯಾಂಡ್ಗೆ ತೆರಳಿದ್ದು, ಅಲ್ಲಿನ ಸರ್ಕಾರದಿಂದ ಆಶ್ರಯ ಪಡೆದಿದ್ದಾರೆ. ಆಟಗಾರರ ಈ ನಡೆ ಪಾಕಿಸ್ತಾನ ಹಾಕಿಗೆ ನಿರಾಶಾದಾಯಕವಾಗಿದ್ದು, ಇವರ ಈ ನಡುವಳಿಕೆಯಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಯುರೋಪಿಯನ್ ರಾಷ್ಟ್ರಗಳಿಗೆ ವೀಸಾಗಾಗಿ ಅರ್ಜಿ ಸಲ್ಲಿಸಲು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ ಇವರುಗಳನ್ನು ಬ್ಯಾನ್ ಮಾಡಲಾಗಿದೆ ಎಂದು ರಾಣ ಮುಜಾಹಿದ್ ತಿಳಿಸಿದ್ದಾರೆ.
ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗಿರುವ ಪಾಕಿಸ್ತಾನದಲ್ಲಿ ಕ್ರೀಡಾಪಟುಗಳಿಗೆ ಸರಿಯಾದ ವೇತನವನ್ನು ನೀಡಲು ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಟಗಾರರು ತಮ್ಮ ಪ್ರಯಾಣ ಭತ್ಯೆ ಮತ್ತು ವೇತನವನ್ನು ಸರಿಯಾದ ಸಮಯಕ್ಕೆ ಪಡೆಯಲಾಗುತ್ತಿಲ್ಲ. ಹೀಗಾಗಿ ಆಟಗಾರರು ದೇಶವನನ್ಉ ತೊರೆಯುತ್ತಿದ್ದು, ವಿದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ವಿಚಾರವಾಗಿ ಪಾಕ್ ಜಗತ್ತಿನ ಮುಂದೆ ಪದೇ ಪದೇ ಬೆತ್ತಲಾಗುತ್ತಿದೆ.