ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಕರೊನಾ ಸೋಂಕು; ಆಸ್ಪತ್ರೆಗೆ ದಾಖಲು

Jyotiraditya 9 June 20
Published on

ನವದೆಹಲಿ: ಮಾರ್ಚ್​ನಲ್ಲಿ ಕಾಂಗ್ರೆಸ್​ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಕರೊನಾ ಸೋಂಕಿಗೆ ಒಳಗಾಗಿದ್ದಾರೆ.

ಸಿಂಧಿಯಾ ಹಾಗೂ ಅವರ ತಾಯಿ ಮಾಧವಿ ರಾಜೆ ಸಿಂಧಿಯಾ ಇಬ್ಬರಲ್ಲೂ ಕೊವಿಡ್​-19 ಕಾಣಿಸಿಕೊಂಡಿದ್ದು, ಅವರು ದಕ್ಷಿಣ ದೆಹಲಿಯಲ್ಲಿರುವ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಇದನ್ನೂ ಓದಿ: ಪತ್ನಿಯ ಯೋಗಾಭ್ಯಾಸ ವಿಡಿಯೋದಲ್ಲಿ ‘ಬೆತ್ತಲಾದ’ ನ್ಯೂಸ್​ ಆ್ಯಂಕರ್​…!

ಸಿಂಧಿಯಾ ಅವರಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಕರೊನಾ ಲಕ್ಷಣ ಇತ್ತು. ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ತಾಯಿಯನ್ನು ಟೆಸ್ಟ್​ಗೆ ಒಳಪಡಿಸಿದಾಗ ಅವರಲ್ಲಿಯೂ ಪಾಸಿಟಿವ್​ ಎಂದು ವರದಿ ಬಂದಿದೆ. ಆದರೆ ಅವರಿಗೆ ಯಾವುದೇ ಲಕ್ಷಣಗಳೂ ಇಲ್ಲ. ಇದನ್ನೂ ಓದಿ: 29ಕ್ಕೆ ವಿಧಾನ ಪರಿಷತ್​ನ 7 ಸ್ಥಾನಗಳಿಗೆ ಚುನಾವಣೆ: ವೇಳಾಪಟ್ಟಿ ಪ್ರಕಟ

ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರಲ್ಲಿ ಕರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಅವರನ್ನು ಗುರ್​ಗಾಂವ್​ನ ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಮಾಡಲಾಗಿತ್ತು. ಸೋಮವಾರ ಡಿಸ್​ಚಾರ್ಜ್​ ಆಗಿದ್ದಾರೆ.

ಹಾಗೇ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರಲ್ಲೂ ಜ್ವರ, ಗಂಟಲು ನೋವಿನಂತರ ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ ಕೊವಿಡ್​-19 ಟೆಸ್ಟ್​ಗೆ ಒಳಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net