More

    VIDEO: ಜನಾಂಗೀಯ ದ್ವೇಷದ ವಿರುದ್ಧ ಚುಂಬಿಸುತ್ತಾ ಪ್ರತಿಭಟನೆ ಮಾಡಿದ ನವದಂಪತಿ!

    ನ್ಯೂಯಾರ್ಕ್​: ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರ ಅಮೆರಿಕದಲ್ಲಿ ಹೊತ್ತಿ ಉರಿಯುತ್ತಿದೆ. ಈ ಪ್ರತಿಭಟನೆ ಹೊಸಹೊಸ ರೂಪಗಳನ್ನು ಪಡೆಯುತ್ತಿದೆ. ಬಹಳ ಹಿಂದಿನಿಂದಲೂ ಅಮೆರಿಕದಲ್ಲಿ ಕಪ್ಪು ವರ್ಣೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಇದೀಗ ಇಡೀ ವಿಶ್ವವೇ ಮಾತನಾಡಿಕೊಳ್ಳತೊಡಗಿದೆ.

    ಈ ನಡುವೆಯೇ, ಪ್ರತಿಭಟನೆಗೆ ನವ ದಂಪತಿ ವಿನೂತನ ರೀತಿಯಲ್ಲಿ ಕೈಜೋಡಿಸಿದ್ದಾರೆ. ಮದುವೆಯಾದ ಮರುಕ್ಷಣವೇ ರೋಡಿಗಿಳಿಸಿರುವ ಕಪ್ಪು ವರ್ಣೀಯ ದಂಪತಿ ವಿನೂತನ ರೀತಿಯಲ್ಲಿ ಪ್ರತಿಭಟನೆಯ ಅಖಾಡಕ್ಕೆ ಇಳಿದಿದ್ದಾರೆ.

    ‘Black Lives Matter’ ಹೆಸರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಅಮೆರಿಕದ ಸಹಸ್ರಾರು ಕಪ್ಪು ವರ್ಣೀಯರು ಇದಾಗಲೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದು, ಇವರಿಗೆ ಈ ನೂತನ ದಂಪತಿ ಜತೆಯಾಗಿದ್ದಾರೆ.

    ಇದನ್ನೂ ಓದಿ: ಅಮೆರಿಕ ಪ್ರತಿಭಟನೆಯಿಂದ ಹೊತ್ತಿ ಉರಿದ ಬಳಿಕ ಈ ಯುವಕನಿಗೆ ಗಿಫ್ಟ್​​ಗಳ ಸುರಿಮಳೆ!

    ಫಿಲಡೆಲ್ಫಿಯಾದಲ್ಲಿ ಹೊಸದಾಗಿ ಮದುವೆಯಾದ ದಂಪತಿ ಮೈಕೆಲ್ ಗಾರ್ಡನ್ ಹಾಗೂ ಕೆರ‍್ರಿ-ಆನಿ ರೋಡಿಗಿಳಿದಿರುವುದು ಮಾತ್ರವಲ್ಲದೇ ಪರಸ್ಪರ ಚುಂಬಿಸಿಕೊಳ್ಳುತ್ತ ಪ್ರತಿಭಟನೆ ಮಾಡಿರುವ ಕಾರಣ, ಇದರ ವಿಡಿಯೋ ಭಾರಿ ವೈರಲ್​ ಆಗಿದೆ.

    ಪ್ರತಿಭಟನಾಕಾರರಿಗೆ ಇನ್ನಷ್ಟು ಪ್ರೋತ್ಸಾಹ, ಉತ್ತೇಜನ ತುಂಬಲು ತಾವು ಪರಸ್ಪರ ಮುತ್ತಿಕ್ಕುವ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ದಂಪತಿ ಹೇಳಿದ್ದಾರೆ. ಮದುವೆಯ ಮನೆಯಿಂದ ನೇರ ಪ್ರತಿಭಟನೆಯ ಸ್ಥಳಕ್ಕೆ ಬಂದು ಚುಂಬಿಸಿಕೊಳ್ಳುತ್ತಿದ್ದಂತೆಯೇ ನೆರೆದಿದ್ದ ಪ್ರತಿಭಟನಾಕಾರರು ದೊಡ್ಡ ಮಟ್ಟದಲ್ಲಿ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದ್ದಾರೆ.

    ಕಾನೂನಿನ ಮೊರೆ ಹೋಗಿ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿ ಕಣ್ಮುಚ್ಚಿದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts