More

    ಕಾನೂನಿನ ಮೊರೆ ಹೋಗಿ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿ ಕಣ್ಮುಚ್ಚಿದ ಪತಿ!

    ದುಬೈ: ಸಾವು ಯಾರಿಗೆ, ಯಾವಾಗ, ಹೇಗೆ ಬರುತ್ತದೆ ಎಂದು ಹೇಳುವುದೇ ಕಷ್ಟ. ವಯಸ್ಸು, ಆರೋಗ್ಯದ ಹಂಗೂ ಇಲ್ಲದೇ ಸಾವು ಆವರಿಸಿಕೊಳ್ಳುವುದು ಈಚೆಗೆ ಸಾಮಾನ್ಯವಾಗಿಬಿಟ್ಟಿದೆ.

    ಆದರೆ ಕೆಲವು ಸಂದರ್ಭದಲ್ಲಿ ಆಗುವ ಘಟನೆಗಳನ್ನು ನೋಡಿದರೆ, ಸಾಯುವ ಮುನ್ನ ಹೇಳಿರುವ ಮಾತು ಅಥವಾ ಅವರು ನಡೆದುಕೊಂಡಿರುವ ರೀತಿ ಇತ್ಯಾದಿಗಳನ್ನು ಗಮನಿಸಿದಾಗ ಕೆಲವರಿಗೆ ಸಾವು ಮೊದಲೇ ಸೂಚನೆ ಕೊಡತ್ತಾ ಎಂಬ ಸಂದೇಶವೂ ಕಾಡುತ್ತದೆ.

    ಅಂಥದ್ದೇ ಒಂದು ಘಟನೆ ದುಬೈನಲ್ಲಿ ನಡೆದಿದೆ. ಕೇರಳ ಮೂಲದ 28 ವರ್ಷದ ಯುವಕ ನಿತೀನ್​ ಚಂದ್ರ ಅವರ ಬದುಕಿನ ಕಥೆ ಇದು. ಇವರು ದುಬೈನಲ್ಲಿ ಕೆಲಸದಲ್ಲಿ ಇದ್ದರು. ನಿರ್ಮಾಣ ಕ್ಷೇತ್ರವೊಂದರಲ್ಲಿ ಇಂಜಿನಿಯರ್ ಆಗಿ ಇವರು ಕೆಲಸ ಮಾಡುತ್ತಿದ್ದರು. ಆರು ವರ್ಷಗಳಿಂದ ದುಬೈನಲ್ಲಿ ವಾಸವಾಗಿದ್ದರು.

    ಇದನ್ನೂ ಓದಿ: ಮಾತು ಕೇಳಿಲ್ಲ ಅಂದ್ರೆ ಉದ್ಧವ್​ ಕಾಕಾಗೆ ಹೇಳ್ತೇನೆ ಅಂದಿದ್ದ ಅಮ್ಮನಿಗೆ ಖುದ್ದು ಫೋನ್​ ಮಾಡಿದ ಸಿಎಂ ಠಾಕ್ರೆ!

    ಇವರ ಪತ್ನಿ ಅಥಿರಾ ಎರಡು ವರ್ಷದ ಹಿಂದಷ್ಟೇ ದುಬೈಗೆ ಹೋಗಿದ್ದರು. ಗರ್ಭಿಣಿಯಾಗಿದ್ದ ಅವರನ್ನು ದುಬೈನಲ್ಲಿ ಯಾರೂ ನೋಡಿಕೊಳ್ಳುವವರು ಇಲ್ಲವೆಂದು ಭಾರತಕ್ಕೆ ಕಳುಹಿಸಲು ನಿತೀನ್​ ಮುಂದಾಗಿದ್ದರು.

    ಆದರೆ ಅದಾಗಲೇ ಲಾಕ್​ಡೌನ್​ ಘೋಷಣೆಯಾಗಿಬಿಟ್ಟಿತು. ಭಾರತಕ್ಕೆ ಕಳುಹಿಸಲು ಸಾಧ್ಯವಾಗದೇ ಹರಸಾಹಸ ಪಟ್ಟರು ಈ ದಂಪತಿ. ಕೊನೆಯ ಮಾರ್ಗವಾಗಿ ನಿತೀನ್​ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದ ಅವರು, ಪತ್ನಿಯನ್ನು ಭಾರತಕ್ಕೆ ಕಳುಹಿಸಿಕೊಡಲು ಹೇಗಾದರೂ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅವರು ಕೋರಿದ್ದರು.

    ಅವರ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್​, ವಿಶೇಷ ವಿಮಾನದ ವ್ಯವಸ್ಥೆಗೆ ನಿರ್ದೇಶಿಸಿತ್ತು. ಬಳಿಕ ಭಾರತ ಸರ್ಕಾರ ಜಾರಿಗೆ ತಂದಿದ್ದ ವಂದೇ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗೀತಾ ಕೇರಳಕ್ಕೆ ವಾಪಸ್ ಬಂದಿದ್ದರು. ಆದರೆ, ನಿತೀನ್​ ಅವರಿಗೆ ಕೆಲಸದ ನಿಮಿತ್ತ ರಜೆ ಸಿಕ್ಕಿರಲಿಲ್ಲ. 

    ಇನ್ನೇನು ಮಗುವಿನ ನಿರೀಕ್ಷೆಯಲ್ಲಿ ಈ ದಂಪತಿ ಇದ್ದರು. ಲಾಕ್​ಡೌನ್​ ತೆರವುಗೊಂಡು ವಿಮಾನ ಸಂಚಾರ ಆರಂಭ ಆಗುತ್ತಿದ್ದಂತೆಯೇ ಮಗುವನ್ನು ನೋಡುವ ತವಕದಲ್ಲಿ ನಿತೀನ್​ ಇದ್ದರೆ, ಲಾಕ್​ಡೌನ್​ ಯಾವಾಗ ತೆರವಾಗಿ, ವಿಮಾನ ಸಂಚಾರ ಆರಂಭವಾಗಿ ತಮ್ಮ ಪತಿ ಊರಿಗೆ ಬಂದು ಮಗುವನ್ನು ನೋಡುತ್ತಾರೋ ಎಂಬ ತವಕದಲ್ಲಿ ಇದ್ದರು ಗೀತಾ. ಜುಲೈ ತಿಂಗಳಿನಲ್ಲಿ ಅವರ ಹೆರಿಗೆ ದಿನಾಂಕ ನೀಡಲಾಗಿದೆ. 

    ಇದನ್ನೂ ಓದಿ: ಕರೊನಾ ಟೆಸ್ಟ್​ ಮಾಡಿಸಿಕೊಂಡ ಕೇಜ್ರಿವಾಲ್​: ವರದಿ ಬರುವವರೆಗೂ ಡವಡವ

    ಆದರೆ ವಿಧಿಲೀಲೆಯೇ ಬೇರೆಯದ್ದಾಗಿತ್ತು. ಇತ್ತ ಕಾನೂನು ಮೊರೆ ಹೋಗಿ ಪತ್ನಿಯನ್ನು ತವರಿಗೆ ಕಳುಹಿಸಿದ ಕೆಲವೇ ದಿನಗಳಲ್ಲಿ ನಿತೀನ್​ ಅವರಿಗೆ ಹೃದಯಾಘಾತವಾಯಿತು! ಜೂನ್ 2ರಂದು 28 ವರ್ಷ ಪೂರೈಸಿದ್ದ ಚಿಕ್ಕ ವಯಸ್ಸಿನ ನಿತಿನ್ ಹೃದಯಾಘಾತದಿಂದ ಮೃತಪಟ್ಟರು.

    ನಿತಿನ್ ಚಂದ್ರನ್ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಜೂನ್.7ರ ರಾತ್ರಿ ನಿದ್ದೆ ಮಾಡುತ್ತಿದ್ದ ಸಮಯದಲ್ಲಿಯೇ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಒಂದು ವೇಳೆ ಪತ್ನಿಯನ್ನು ಕಳುಹಿಸಲು ನಿತೀನ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸದಿದ್ದರೆ, ಈಗ ಪತ್ನಿ ನಿಥಿರಾ ಅವರ ಬದುಕು ದುಬೈನಲ್ಲಿ ಚಿಂತಾಜನಕವಾಗಿರುತ್ತಿತ್ತು ಎಂದೇ ಹೇಳಲಾಗುತ್ತಿದೆ. 

     

    ಕೆಸರು ಎರಚಿದಷ್ಟೂ ಕಮಲದ ಹೂವು ಸುಂದರವಾಗಿ ಅರಳಲಿದೆ- ದೀದೀಗೆ ಷಾ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts