More

    29ಕ್ಕೆ ವಿಧಾನ ಪರಿಷತ್​ನ 7 ಸ್ಥಾನಗಳಿಗೆ ಚುನಾವಣೆ: ವೇಳಾಪಟ್ಟಿ ಪ್ರಕಟ

    ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್​ಗೆ ಚುನಾಯಿತರಾಗುವ ಏಳು ಸದಸ್ಯರ ಆಯ್ಕೆಗೆ ಚುನಾವಣೆ ಜೂನ್ 29ಕ್ಕೆ ನಡೆಯಲಿದೆ. ಈ ಸಂಬಂಧ ವೇಳಾಪಟ್ಟಿ ಇಂದು ಪ್ರಕಟವಾಗಿದೆ. ಹಾಲಿ ಸದಸ್ಯರಾದ ನಸೀರ್ ಅಹ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್​, ಎನ್​.ಎಸ್​.ಬೋಸ್​ ರಾಜು, ಎಚ್​.ಎಂ.ರೇವಣ್ಣ, ಟಿ.ಎ.ಶರವಣ, ಡಿ.ಯು. ಮಲ್ಲಿಕಾರ್ಜುನ ಇವರ ಸದಸ್ಯತ್ವದ ಅವಧಿ ಈ ತಿಂಗಳ 30ಕ್ಕೆ ಕೊನೆಗೊಳ್ಳುತ್ತದೆ.

    ಈ ಸ್ಥಾನಗಳಿಗೆ ಮತ್ತೆ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಲು ಪ್ರಕಟವಾಗಿರುವ ವೇಳಾ ಪಟ್ಟಿ ಪ್ರಕಾರ, ಜೂನ್ 11ರಂದು ಅಧಿಸೂಚನೆ ಪ್ರಕಟವಾಗಲಿದೆ. ಜೂನ್ 18ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ. 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 22ರಂದು ನಾಮಪತ್ರ ಹಿಂಪಡೆಯಲು ಕೊನೆದಿನವಾಗಿರುತ್ತದೆ.

    ಇದನ್ನು ಓದಿದ್ದೀರಾ: ಕತ್ತೆಯನ್ನೂ ಬಿಡಲಿಲ್ಲ ಪಾಕ್ ಪೊಲೀಸರು!!!

    ಜೂನ್ 29ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. 30ನೇ ತಾರೀಕಿನೊಳಗೆ ಚುನಾವಣೆಯ ಎಲ್ಲ ಪ್ರಕ್ರಿಯೆಗಳೂ ಮುಗಿದಿರಬೇಕು.

    ವಿಶ್ವನಾಥ್, ಎಂಟಿಬಿ ನಾಗರಾಜ್, ಶಂಕರ್ ಅವರು ಮತ್ತೆ ವಿಧಾನ ಮಂಡಲ ಪ್ರವೇಶಿಸುವುದಕ್ಕೆ ಈ ಮೂಲಕ ವೇದಿಕೆ ಸಜ್ಜಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ವೇಳಾಪಟ್ಟಿ ಪ್ರಕಟವಾಗುವುದರೊಂದಿಗೆ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಇನ್ನಷ್ಟು ಹೆಚ್ಚಾಗಲಿದೆ.

    ರಾಜ್ಯ ರಾಜಧಾನಿಯಲ್ಲಿ ಷಟರ್ ಕತ್ತರಿಸಿ 1 ಕೆ.ಜಿ. ಚಿನ್ನ, 3 ಕಿಲೋ ಬೆಳ್ಳಿ ವಸ್ತು ದೋಚಿದ ಕಳ್ಳರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts