More

    ಮೊದಲ ನಾಮಪತ್ರ ಸಲ್ಲಿಕೆ

    ವಿಜಯಪುರ: ತೀವ್ರ ಕುತೂಹಲ ಕೆರಳಿಸಿರುವ ವಿಜಯಪುರ-ಬಾಗಲಕೋಟೆ ದ್ವಿಸದಸ್ಯ ಸ್ಥಾನದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಬುಧವಾರ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ.

    ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದ ಗುರುಲಿಂಗಪ್ಪ ದುಂಡಪ್ಪ ಅಂಗಡಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದರು. ಜಿಲ್ಲಾಡಳಿತ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಬಿಜೆಪಿಯಿಂದ ಬಿ ಫಾರ್ಮ್ ಸಿಗುವ ಭರವಸೆ ಇದೆ. ಹೀಗಾಗಿ ನಾಮಪತ್ರ ಸಲ್ಲಿಸಿದ್ದಾಗಿ ತಿಳಿಸಿದರು.

    ಬಿಜೆಪಿಯಲ್ಲಿ ಇನ್ನೂ ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಟಿಕೆಟ್‌ಗಾಗಿ ತೀವ್ರ ಪೈಪೋಟಿ ಆರಂಭಗೊಂಡಿದ್ದು, ವರಿಷ್ಠರು ಯಾರನ್ನು ಕಣಕ್ಕಿಳಿಸಿದರೆ ಸೂಕ್ತ ಎಂದು ತಲೆಗೆ ಹುಳುಬಿಟ್ಟುಕೊಂಡಿದ್ದಾರೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಕಾಂಗ್ರೆಸ್‌ನ ತಂತ್ರಗಾರಿಕೆ ನೋಡಿಕೊಂಡು ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಘೋಷಣೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

    ಕಾಂಗ್ರೆಸ್‌ನ ಹಾಲಿ ಸದಸ್ಯರಲ್ಲಿ ಟಿಕೆಟ್‌ಗಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಎಸ್.ಆರ್. ಪಾಟೀಲ ಒಂದೇ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಟ್ಟು ಹಿಡಿದರೆ ಸುನೀಲಗೌಡ ಪಾಟೀಲ ಎರಡೂ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒತ್ತಾಯಿಸುತ್ತಿರುವುದರಿಂದ ಹೈಕಮಾಂಡ್‌ಗೆ ತಲೆ ಬಿಸಿ ಶುರುವಾಗಿದೆ. ಹೀಗಾಗಿ ಘೋಷಣೆ ವಿಳಂಬವಾಗುತ್ತಿದೆ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ. ಜೆಡಿಎಸ್ ಇನ್ನೂ ಯಾವುದೇ ಚಟುವಟಿಕೆ ಆರಂಭಿಸದಿರುವುದು ಹೊಂದಾಣಿಕೆ ಸೂತ್ರದಡಿ ಬಿಜೆಪಿಗೆ ಬೆಂಬಲಿಸುವ ಮಾತು ಕೇಳಿ ಬರುತ್ತಿದೆ.

    ಮೂರಕ್ಕಿಂತ ಹೆಚ್ಚಿನ ವಾಹನಕ್ಕೆ ನಿಷೇಧ
    ನಾಮ ಪತ್ರಸಲ್ಲಿಕೆಗೆ 3ಕ್ಕಿಂತ ಹೆಚ್ಚಿನ ವಾಹನಗಳನ್ನು ತರುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಈ ಮುಂಚೆ ನಾಮಪತ್ರ ಸಲ್ಲಿಕೆಗೆ 2ಕ್ಕಿಂತ ಹೆಚ್ಚಿನ ವಾಹನ ತರುವುದಕ್ಕೆ ನಿಷೇಧವಿತ್ತು. ಈ ಆದೇಶ ತಿದ್ದುಪಡಿ ಮಾಡಿ 3ಕ್ಕಿಂತ ಹೆಚ್ಚಿನ ವಾಹನಕ್ಕೆ ನಿಷೇಧ ವಿಧಿಸಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.

    ನ.16ರಿಂದ 23ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಈ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿರ್ವಾಚನಾಧಿಕಾರಿಗಳ ಕಚೇರಿಯಾದ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ 1974 ಕಲಂ 144 ರ ಮೇರೆಗೆ ಷರತ್ತಿಗೊಳಪಟ್ಟು ಪ್ರತಿಬಂಧಕಾಜ್ಞೆಯನ್ನು ವಿಧಿಸುವ ಆದೇಶಿಸಲಾಗಿತ್ತು. ವಾಹನಗಳ ಸಂಖ್ಯೆ ಹೊರತುಪಡಿಸಿದರೆ ಆದೇಶದ ಇನ್ನುಳಿದ ಅಂಶಗಳೆಲ್ಲವೂ ಯಥಾವತ್ತಾಗಿರಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಂಟ್ರೋಲ್ ರೂಂ ಸ್ಥಾಪನೆ
    ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಅಬಕಾರಿ ಅಕ್ರಮ ತಡೆಗೆ ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಜಿಲ್ಲಾ ಹಾಗೂ ಉಪವಿಭಾಗ ವಲಯ ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.

    ಅಬಕಾರಿ ಇಲಾಖೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಉಪ ಆಯುಕ್ತೆ ಅಜ್ಮತ ಆಫ್ರೀನ್ ಅವರ ನಿಯಂತ್ರಣ ಕೊಠಡಿ ದೂ. 08352-244602 ಹಾಗೂ ಮೊ.9449597164ಕ್ಕೆ ಸಂಪರ್ಕಿಸಬಹುದು.

    ಅದೇ ರೀತಿ ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ (ದೂ. 08352-244602 ಹಾಗೂ ಮೊ. 9449597166), ಅಬಕಾರಿ ಉಪ ಅಧೀಕ್ಷಕ ಎಚ್.ಎಸ್. ವಜ್ರಮಟ್ಟಿ (ದೂ. 08352-252451 ಹಾಗೂ ಮೊ. 9449597167), ಅಬಕಾರಿ ನಿರೀಕ್ಷಕ ಮಂಜುನಾಥ ಶಿರಹಟ್ಟಿ (ದೂ. 08352-252451 ಹಾಗೂ ಮೊ. 9449597168) ಅವರನ್ನು ಸಂಪರ್ಕಿಸಬಹುದು.

    ವಿಜಯಪುರ ವಲಯದ ಅಬಕಾರಿ ನಿರೀಕ್ಷಕ ಮಹೇಶ ನಿಂಗರೆಡ್ಡಿ (ದೂ.08352-254478 ಹಾಗೂ ಮೊ. 9448960948, ಇಂಡಿ ವಲಯದ ಅಬಕಾರಿ ನಿರೀಕ್ಷಕ ಮಲ್ಲಪ್ಪ ಪಡಸಲಗಿ (ದೂ. 08359-222093 ಹಾಗೂ ಮೊ. 7019164044, ಬ.ಬಾಗೇವಾಡಿ ವಲಯದ ಅಬಕಾರಿ ನಿರೀಕ್ಷಕ ಜಿ.ಎಸ್. ಪಾಟೀಲ (ದೂ. 08358-295029 ಹಾಗೂ ಮೊ.9611972299, ಮುದ್ದೇಬಿಹಾಳ ಅಬಕಾರಿ ನಿರೀಕ್ಷಕಿ ಜ್ಯೋತಿಬಾಯಿ (ದೂ. 08356-222331 ಹಾಗೂ ಮೊ.7026038079), ಅಬಕಾರಿ ನಿರೀಕ್ಷಕಿ ಆರತಿ ಖೈನೂರ (ಮೊ. 9663436479) ಅವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts