Junior Lawyer: ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಜೂನಿಯರ್ ವಕೀಲೆಯಾಗಿ ಕೋರ್ಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಾಮಿಲಿ ಎಂಬ ಯುವತಿಗೆ ಹಿರಿಯ ವಕೀಲ ಮನಬಂದಂತೆ ಥಳಿಸಿದ ಘಟನೆ ಇದೀಗ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಶಾಮಿಲಿಯನ್ನು ನಿಂದಿಸಿ, ಕೆನ್ನೆ ಮೇಲೆ ತನ್ನ ಕೈಬೆರಳು ಕೂರವಂತೆ ಕಪಾಳಮೋಕ್ಷ ಮಾಡಿರುವ ಹಿರಿಯ ವಕೀಲನ ವಿರುದ್ಧ ಹಲವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 40 ಲಕ್ಷ ರೂ. ಜಮೀನು, 100 ಗ್ರಾಂ ಚಿನ್ನ! ಷರತ್ತಿಗೆ ಒಪ್ಪಿದ್ದರೂ ಹೀಗೇಕೆ ಆಯಿತು? ವಧು ಕಂಗಾಲು | Marriage
ಕೇರಳದ ತಿರುವನಂತಪುರಂನ ಕೋರ್ಟ್ನಲ್ಲಿ ಜೂ. ವಕೀಲೆಯಾಗಿ ಕೆಲಸ ಮಾಡುತ್ತಿದ್ದ ಶಾಮಿಲಿಯನ್ನು ಕೆಲಸದಿಂದ ಕಿತ್ತುಬಿಸಾಡಿದ್ದ ಹಿರಿಯ ವಕೀಲ ಬೈಲಿನ್ ದಾಸ್, ಕಡೆಗೂ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಕಚೇರಿಯಲ್ಲಿನ ಉದ್ಯೋಗಿಗಳೊಂದಿಗೆ ಕೆಟ್ಟದಾಗಿ ವರ್ತಿಸುವುದರ ಜೊತೆಗೆ ಇತರೆ ಜೂ. ವಕೀಲರಿಗೂ ತೊಂದರೆ ಕೊಡುತ್ತಿದ್ದ. ಆದರೆ, ಯಾರೊಬ್ಬರೂ ಹೇಳುವ ಧೈರ್ಯ ಮಾಡಿರಲಿಲ್ಲ. ಈತನ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಬೇಸತ್ತಿದ್ದ ಶಾಮಿಲಿ, ಕೆಲಸಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಒಂದಷ್ಟು ವರದಿಗಳು ಉಲ್ಲೇಖಿಸಿವೆ.
ಆರೋಪಿ ಬೈಲಿನ್ ಪರ ಬಾರ್ ಕೌನ್ಸಿಲ್ ನಿಂತಿದೆ. ಆತ ತಪ್ಪಿಸಿಕೊಳ್ಳಲು ಇದೇ ಬಾರ್ ಕೌನ್ಸಿಲ್ ಕಾರಣ. ಅವನಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಹಲ್ಲೆಗೊಳಗಾದ ಶಾಮಿಲಿ ಮತ್ತು ಆಕೆಯ ತಾಯಿ ಗಂಭೀರ ಆರೋಪ ಎಸಗಿದ್ದರು. ಓರ್ವ ಮಹಿಳೆ ವಿರುದ್ಧ ಹಿರಿಯ ವಕೀಲನ ಗೂಂಡಾ ವರ್ತನೆಗೆ ಕೇರಳ ವ್ಯಾಪಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಹಲವರು ಶಾಮಿಲಿ ಪರ ಧ್ವನಿ ಎತ್ತಿದ್ದಾರೆ. ಇನ್ನು ಈ ಘಟನೆಗೆ ಸ್ವತಃ ಶಾಮಿಲಿಯೇ ಪ್ರತಿಕ್ರಿಯಿಸಿದ್ದು, ನನಗೆ ಯಾವ ಸಹೋದ್ಯೋಗಿಯಿಂದಲೂ ಬೆಂಬಲ ಸಿಕ್ಕಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮ 19ರಂದು
ವಕೀಲರಿರುವ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಬಾರ್ ಕೌನ್ಸಿಲ್ ಅಸೋಸಿಯೇಷನ್ ಕುರಿತು ಮಾತನಾಡಿದ ಶಾಮಿಲಿ, “ಈ ವಿಷಯದಲ್ಲಿ ನನಗೆ ಸಹೋದ್ಯೋಗಿಗಳು ನನ್ನ ಪರ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ ಎಂಬ ಕಟು ಸತ್ಯ ಅರಿವಾಯಿತು. ಬಾರ್ ಕೌನ್ಸಿಲ್ ಅಸೋಸಿಯೇಷನ್ನ ಹಲವರು ನನ್ನ ಪರ ಮಾತನಾಡಿದ್ದೀರಿ ಅದಕ್ಕೆ ಧನ್ಯವಾದಗಳು. ಇದರ ಮಧ್ಯೆ ಒಂದಷ್ಟು ಜನ ನನ್ನ ವಿರುದ್ಧ ಸುಳ್ಳು ವಿಚಾರಗಳನ್ನು ಹರಡುತ್ತಿದ್ದಾರೆ. ವಿಷಯ ಏನು ಅಂತ ತಿಳಿಯದೆ ಸುಮ್ಮನೆ ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ” ಎಂದು ಹೇಳಿದ್ದಾರೆ.
“ಇಲ್ಲಿ ನಾನೇ ತಪ್ಪು ಮಾಡಿದೆ ಎಂದು ಕೆಲವರು ಹೇಳ್ತಾರೆ. ಅಷ್ಟಕ್ಕೂ ಇಲ್ಲಿ ನಾನೇನೂ ತಪ್ಪು ಮಾಡಿದೆ ಇಂಥಾ ಶಿಕ್ಷೆಗೆ ಗುರಿಯಾಗಲು ಎಂಬ ಸಂಗತಿ ನನಗಿನ್ನೂ ಅರ್ಥ ಆಗಿಲ್ಲ. ಅಸಲಿಗೆ ನನ್ನ ಕೆನ್ನೆ ಮೇಲಿರುವ ಬಲವಾದ ಗುರುತೇ ಕೆಲವರ ಪ್ರಶ್ನೆಗೆ ಉತ್ತರ. ಇಂತಹ ಸ್ಥಿತಿ ನಿಮ್ಮ ಮಕ್ಕಳಿಗೆ, ಸಹೋದರಿಯರಿಗೆ ಅಥವಾ ಕುಟುಂಬಕ್ಕೆ ಬರದಿರಲಿ. ನಿಮ್ಮ ಮನೆಯಲ್ಲಿ ಯಾರಿಗಾದರೂ ಇದೇ ನೋವು ಕಾಡಿದರೆ ಆಗ ನಿಮಗೆ ನನ್ನ ಪರಿಸ್ಥಿತಿ, ನೋವು ಏನು ಅಂತ ತಿಳಿಯುತ್ತದೆ. ನನ್ನ ಜೊತೆ ಕೇರಳದ ಜನರಿದ್ದಾರೆ. ಯಾವೊಬ್ಬ ಹಿರಿಯ ವಕೀಲನಿಗೂ ಇನ್ನೂ ಹೆದರುವುದಿಲ್ಲ. ನನ್ನ ಒಂದು ಕೂದಲನ್ನು ಮುಟ್ಟಲು ಸಾಧ್ಯವಿಲ್ಲ. ಕೇಸ್ ದಾಖಲಿಸಿ, ಜೈಲಿಗೆ ಕಳುಹಿಸಿದರೂ ನನ್ನ ನಿಲುವಿನಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ” ಎಂದು ಶಾಮಿಲಿ ಖಡಕ್ ಆಗಿ ಮಾತನಾಡಿದ್ದಾರೆ,(ಏಜೆನ್ಸೀಸ್).
25 ಲಕ್ಷ ರೂ., 2 ಕೆಜಿ ಚಿನ್ನ! ಪತ್ನಿ ನೇಣಿಗೆ ಶರಣು; ಪತಿ ಮೇಲೆಯೇ ಹೆತ್ತವರ ಕಣ್ಣು | Suicide Case