25 ಲಕ್ಷ ರೂ., 2 ಕೆಜಿ ಚಿನ್ನ! ಪತ್ನಿ ನೇಣಿಗೆ ಶರಣು; ಪತಿ ಮೇಲೆಯೇ ಹೆತ್ತವರ ಕಣ್ಣು | Suicide Case

blank

Suicide Case: ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್​ನ ಎಲ್​ಬಿ ನಗರದಲ್ಲಿ ವರದಿಯಾಗಿದೆ.

blank

ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ; ಮಧ್ಯಂತರ ಪರಿಹಾರ ಅರ್ಜಿ ವಿಚಾರಣೆ ಮೇ 20 ಕ್ಕೆ ಮುಂದೂಡಿಕೆ| Waqf act

ಎಲ್​ಬಿ ನಗರ ಪೊಲೀಸರು ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ, ಖಮ್ಮಂ ಪಟ್ಟಣದ ಕಟ್ಟಾ ವೆಂಕಟೇಶ್ವರಲು ಅವರ ಪುತ್ರಿ ಜಾಸ್ಮಿನ್ (29) ಎಲ್.ಬಿ. ನಗರದ ಶಿವಪುರಿ ಕಾಲೋನಿಯ ಸಾಫ್ಟ್‌ವೇರ್ ಎಂಜಿನಿಯರ್ ಪೆಂಡೆಮ್ ರಾಜಶೇಖರ್ ಜೊತೆಗೆ ವಿವಾಹವಾಗಿದ್ದರು. ಮದುವೆಯ ಸಮಯದಲ್ಲಿ, 25 ಲಕ್ಷ ರೂ. ನಗದು ಮತ್ತು 2 ಕೆಜಿ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ಕೊಡಲಾಗಿತ್ತು. ಇಬ್ಬರೂ ಸುಖವಾಗಿರಲಿ ಎಂದು ಬಯಸಿದ್ದ ಕುಟುಂಬಕ್ಕೆ ಇದೀಗ ಮಗಳ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ, ರಾಜಶೇಖರ್ ಮತ್ತು ಆತನ ಕುಟುಂಬ ಸದಸ್ಯರು ಜಾಸ್ಮಿನ್‌ಗೆ ಹೆಚ್ಚುವರಿ ಹಣವನ್ನು ವರದಕ್ಷಿಣೆಯಾಗಿ ಕೊಡುವಂತೆ ಕಿರುಕುಳ ನೀಡಿದ್ದರು. ಈ ಹಿನ್ನೆಲೆ ಆಕೆಯನ್ನು ತವರಿಗೂ ಓಡಿಸಿದ್ದರು. ಆದರೆ, ಹಿರಿಯರು ಮಧ್ಯಸ್ಥಿಕೆ ವಹಿಸಿ, ರಾಜಶೇಖರ್ ಮನೆಯವರ ಮನವೊಲಿಸಿ ವಾಪಾಸ್ ಕಳಿಸಿಕೊಟ್ಟಿದ್ದರು. ಆದರೆ, ತನ್ನ ಹಣದ ದಾಹ ಬುದ್ಧಿಯನ್ನು ಬದಲಾಯಿಸಿಕೊಳ್ಳದ ರಾಜಶೇಖರ್, ಜಾಸ್ಮಿನ್​ಗೆ ವಿಪರೀತ ಕಿರುಕುಳ ನೀಡುತ್ತಿದ್ದ. ಘಟನೆ ಬಗ್ಗೆ ಮಾಹಿತಿ ಪಡೆದಿದ್ದ ಯುವತಿಯ ಕುಟುಂಬ, ಮಗಳ ಗಂಡನ ವಿರುದ್ಧ ಖಮ್ಮಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಪಾಕಿಸ್ತಾನ ಪರಮಾಣು ಸೌಲಭ್ಯದಲ್ಲಿ ವಿಕಿರಣ ಸೋರಿಕೆ!: ಪರಮಾಣು ಶಕ್ತಿ ಸಂಸ್ಥೆ ಹೇಳಿದ್ದೇನು? | IAEA

ರಾಜಶೇಖರ್​ನ ಠಾಣೆಗೆ ಕರೆಸಿ, ಕೌನ್ಸೆಲಿಂಗ್ ಮಾಡಿ, ಸರಿಯಾಗಿ ಬದುಕುವಂತೆ ಬುದ್ಧಿ ಹೇಳಿದ್ದ ಪೊಲೀಸರು, ಎಚ್ಚರಿಕೆ ಕೂಡ ಕೊಟ್ಟಿದ್ದರು. ಮಂಗಳವಾರ (ಮೇ.13) ಕೆಲಸಕ್ಕೆ ಹೋಗಿದ್ದ ರಾಜಶೇಖರ್, ಕರ್ತವ್ಯ ಮುಗಿಸಿ ಸಂಜೆ ಮನೆಗೆ ಬಂದಾಗ ಒಳಗಿನಿಂದ ಬಾಗಿಲು ಲಾಕ್ ಆಗಿರುವುದನ್ನು ಗಮನಿಸಿದ್ದಾನೆ. ಜಾಸ್ಮಿನ್‌ಗೆ ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ, ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಒಳಗೆ ನೋಡಿದಾಗ ಜಾಸ್ಮಿನ್ ನೇಣು ಬಿಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಜಾಸ್ಮಿನ್ ದೇಹದ ಮೇಲೆ ಗಾಯಗಳನ್ನು ಗಮನಿಸಿದ ಬೆನ್ನಲ್ಲೇ ಪೋಷಕರು ಪೊಲೀಸರಿಗೆ ದೂರು ನೀಡಿ, ಈ ಕೊಲೆಯನ್ನು ರಾಜಶೇಖರ್​ ಮಾಡಿ, ಈಗ ಆತ್ಮಹತ್ಯೆಯಂತೆ ಬಿಂಬಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಮೃತ ಯುವತಿಯ ತಂದೆ ವೆಂಕಟೇಶ್ವರಲು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).

ಕೆನ್ನೆಯಲ್ಲಿ ಮಾಸದ ಕೈ ಗುರುತು! ಜೂ. ವಕೀಲೆಗೆ ಹಿರಿಯ ವಕೀಲನಿಂದ ಥಳಿತ; ಯುವತಿ ಬೆಂಬಲಕ್ಕೆ ಕೇರಳ ಸರ್ಕಾರ | Jr Lawyer

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank