ವಕ್ಫ್ ತಿದ್ದುಪಡಿ ಕಾಯ್ದೆ; ಮಧ್ಯಂತರ ಪರಿಹಾರ ಅರ್ಜಿ ವಿಚಾರಣೆ ಮೇ 20 ಕ್ಕೆ ಮುಂದೂಡಿಕೆ| Waqf act

Supreme Court
Published on

2025ರ ವಕ್ಸ್‌ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠಕ್ಕೆ ವರ್ಗಾಯಿಸಲಾಗಿತ್ತು. ಇಂದು (20) ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ ವಿಚಾರಣೆಯನ್ನು ಮುಂದಿನ (ಮಂಗಳವಾರ) ಮೇ.20 ಕ್ಕೆ ಮುಂದೂಡಲಾಗಿದೆ.

ನವದೆಹಲಿ : 2025ರ ವಕ್ಸ್ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ.20 ಕ್ಕೆ ಮುಂದೂಡಿದೆ.

ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸುವವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರದೊಳಗೆ ತಮ್ಮ ಲಿಖಿತ ಟಿಪ್ಪಣಿಗಳನ್ನು ಸಲ್ಲಿಸುವಂತೆ ಸಿಜೆಐ ನೇತೃತ್ವದ ಪೀಠವು ಕೇಳಿದೆ.

ಇವುಗಳಲ್ಲಿ ಬಳಕೆದಾರರಿಂದ ವಕ್ಫ್ ಸಮಸ್ಯೆಗಳು, ವಕ್ಫ್ ಮಂಡಳಿ ಮತ್ತು ಮಂಡಳಿಗಳಿಗೆ ಮುಸ್ಲಿಮೇತರರ ನಾಮನಿರ್ದೇಶನ ಮತ್ತು ವಕ್ಫ್ ಅಡಿಯಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸುವುದು ಸೇರಿವೆ.

ವಕ್ಫ್ ಬಳಕೆದಾರರಿಂದ ವಕ್ಫ್, ವಕ್ಫ್ ಮಂಡಳಿ ಹಾಗೂ ಮಂಡಳಿಗಳಿಗೆ ಮುಸ್ಲಿಮೇತರರ ನಾಮನಿರ್ದೇಶನ ಮತ್ತು ವಕ್ಫ್ ಅಡಿಯಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸುವುದು ಎಂಬ ಮೂರು ಪ್ರಮುಖ ವಿಷಯಗಳ ಕುರಿತು ಮಧ್ಯಂತರ ಆದೇಶ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೇ 20, ಮಂಗಳವಾರ ವಿಚಾರಣೆ ನಡೆಸುವುದಾಗಿ ಸುಪ್ರೀಕೋರ್ಟ್​ ತಿಳಿಸಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net