ಜಾರಕಿಹೊಳಿ ಸಿಡಿ ಕೇಸ್​ಗೆ ಟ್ವಿಸ್ಟ್: ವಿಡಿಯೋದಲ್ಲಿನ ಧ್ವನಿ ಚಿಕ್ಕಮಗಳೂರು ವ್ಯಕ್ತಿಯದ್ದು?

cd
Published on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ವಿಡಿಯೋದಲ್ಲಿನ ಧ್ವನಿ ಯಾರದ್ದು? ಎಂಬ ಪ್ರಶ್ನೆಗೆ ಉತ್ತರ ಸಿಗುವ ಕಾಲ ಸನಿಹದಲ್ಲಿದ್ದೆ. ಚಿಕ್ಕಮಗಳೂರು ಮೂಲದ ವ್ಯಕ್ತಿಯ ಧ್ವನಿಗೂ ಈ ವಿಡಿಯೋದಲ್ಲಿನ ಧ್ವನಿಗೂ ಸಾಮ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

10 ನಿಮಿಷಗಳ ವಿಡಿಯೋದಲ್ಲಿರುವ ಹಿನ್ನೆಲೆ ಧ್ವನಿ ಚಿಕ್ಕಮಗಳೂರು ವ್ಯಕ್ತಿಯದ್ದ ಎಂಬ ಅನುಮಾನ ದಟ್ಟವಾಗಿದ್ದು, ಇದೇ ಕಾರಣಕ್ಕೆ ಆ ವ್ಯಕ್ತಿಯ ವಾಯ್ಸ್ ಸ್ಯಾಂಪಲ್ ಪಡೆದಿರುವ ಎಸ್​ಐಟಿ ತಂಡ, ಪರಿಶೀಲನೆಗಾಗಿ ಎಫ್​ಎಸ್ಎಲ್​ಗೆ ಕಳುಹಿಸಿದೆ. ಶೀಘ್ರವೇ ಎಫ್​ಎಸ್​ಎಲ್ ವಾಯ್ಸ್ ವರದಿ ಬರುವ ನಿರೀಕ್ಷೆ ಇದೆ.

ಮೇಲ್ನೋಟಕ್ಕೆ ಈಗಾಗಲೇ ಆ ವ್ಯಕ್ತಿಯ ವಾಯ್ಸ್ ಹಾಗೂ ಸಿಡಿಯಲ್ಲಿರುವ ಹಿನ್ನೆಲೆ ಧ್ವನಿಗೆ ಸಾಮ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಎಫ್​ಎಸ್ಎಲ್‌ ವರದಿಯಲ್ಲಿ ಆ ವ್ಯಕ್ತಿಯದ್ದೇ ವಾಯ್ಸ್​ ಎಂದು ಸಾಬೀತಾದರೆ ಆತನನ್ನು ಬಂಧಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net