

ಬಳ್ಳಾರಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಂದಿನ ಸಚಿವ ಎಚ್.ವೈ.ಮೇಟಿಗೆ ಸಂಬಂಧಿಸಿದ್ದ ಸೆಕ್ಸ್ ಸಿಡಿ ರಿಲೀಸ್ ಮಾಡಿ ಭಾರಿ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.
ಉದ್ಯೋಗದ ಆಮಿಷವೊಡ್ಡಿ ಯುವತಿಯನ್ನ ಕಾಮತೃಷೆಗೆ ಬಳಸಿಕೊಂಡ ಆರೋಪ ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದು, ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಬಳ್ಳಾರಿಯಲ್ಲಿ ಮಾತನಾಡಿದ ರಾಜಶೇಖರ ಮುಲಾಲಿ, ಸೆಕ್ಸ್ ಸಿಡಿ ಬಿಡುಗಡೆ ಹಿಂದೆ ರಮೇಶ್ ಜಾರಕಿಹೊಳಿಯ ಮರ್ಯಾದೆ ಕಳೆಯುವ ಹುನ್ನಾರ ಇದೆ. ಆ ಸಿಡಿಯಲ್ಲಿರುವ ವಿಡಿಯೋ ಮತ್ತು ವಾಯ್ಸ್ಗೆ ಲಿಂಕ್ ಇಲ್ಲ. ಈ ಸಿಡಿ ಹಳೇಯದು, ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇರಬಹುದು. ಇಲ್ಲಿಯವರೆಗೂ ಸಂತ್ರಸ್ತರು ದೂರು ನೀಡಿಲ್ಲ. ಆ ಮಹಿಳೆ ನಿಜವಾದ ಸಂತ್ರಸ್ತೆಯಾಗಿದ್ರೆ ದೂರು ನೀಡಲಿ. ಭಯ ಇದ್ರೆ ನನ್ನನ್ನು ಭೇಟಿ ಮಾಡಲಿ, ನಾನು ಅವರಿಗೆ ಸೂಕ್ತ ರಕ್ಷಣೆ ಕೊಟ್ಟು ನ್ಯಾಯ ದೊರಕಿಸಿಕೊಡುವೆ ಎಂದರು. ಇದನ್ನೂ ಓದಿರಿ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಗೋಕಾಕ್ ಬಂದ್! ಸೀಮೆಎಣ್ಣೆ ಸುರಿದುಕೊಂಡು ಆಕ್ರೋಶ