'ಕಾವಾಲಯ್ಯ' ಸಾಂಗ್ ಟ್ರೆಂಡ್​​ ಆದ ಬೆನ್ನಲ್ಲೇ ಜೈಲರ್‌ ಚಿತ್ರದ ಮತ್ತೊಂದು ಹಾಡಿನ ರಿಲೀಸ್​​ ಡೇಟ್​​ ಫಿಕ್ಸ್​!

Untitled design (27)
Published on

ಆಂಧ್ರಪ್ರದೇಶ: ಸೂಪರ್ ಸ್ಟಾರ್ ರಜನಿಕಾಂತ್​ ಅಭಿನಯದ 'ಜೈಲರ್‌' ಚಿತ್ರದ ಮತ್ತೊಂದು ಹಾಡಿನ ಬಿಡುಗಡೆ ದಿನಾಂಕವನ್ನು ಇದೀಗ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಟಾಲಿವುಡ್​​ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಜೈಲರ್' ಚಿತ್ರವನ್ನು ಕಣ್ತುಂಬಿಕೊಳ್ಳಲು ತಲೈವಾ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದು, ಚಿತ್ರದ ಮೊದಲ ಹಾಡು 'ಕಾವಾಲಯ್ಯ' ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಆಗುವ ಮುಖೇನ ಸದ್ದು ಮಾಡುತ್ತಿದೆ. ಸದ್ಯ ಇದೇ ಸಾಲಿಗೆ ಮತ್ತೊಂದು ಮಾಸ್​​ ಸಾಂಗ್​ ಅನ್ನು ಸೇರಿಸಲು ಚಿತ್ರತಂಡ ಚಿಂತಿಸಿದ್ದು, ಅದರ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿದೆ.

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಯೋಜಿಸಿರುವ ಜೈಲರ್​​ ಚಿತ್ರದ ಆಲ್ಬಂನಿಂದ ಎರಡನೇ ಸಾಂಗ್​​ 'ಹುಕುಮ್' ಅನ್ನು ಇದೇ ಜುಲೈ 17 ರಂದು ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net