

Clock Invented : ಸಾವಿರಾರು ವರ್ಷಗಳಿಂದ ಸಮಯವನ್ನು ಆಳೆಯಲು ಸೂರ್ಯನನ್ನು ಆಧಾರವಾಗಿ ಬಳಸುತ್ತಿದ್ದರು. ಹೀಗಾಗಿ, ಗಡಿಯಾರದ ಅವಿಷ್ಕಾರದವರೆಗೂ ಜನರು ಸಮಯವನ್ನು ನೋಡಲು ಸೂರ್ಯನನ್ನೇ ಆಧಾರವಾಗಿ ಇಟ್ಟುಕೊಂಡಿದ್ದರು. ಬದಲಾದ ಕಾಲದಲ್ಲಿ ಗಡಿಯಾರವನ್ನು ಕಂಡುಹಿಡಿಯಲಾಯಿತು. ಹೇಗೆ? ಎಲ್ಲಿ? ನೋಡೋಣ ಬನ್ನಿ.
ಇತಿಹಾಸದ ಪ್ರಕಾರ, ಮಧ್ಯಯುಗೀಯ ಕಾಲದಲ್ಲಿ ಸೂರ್ಯ ಗಡಿಯಾರಗಳ ಬದಲಿಗೆ ಯಾಂತ್ರಿಕ ಗಡಿಯಾರಗಳು ಬಳಕೆ ಬಂದವು. ಆದಾಗ್ಯೂ, ನಗರಗಳಲ್ಲಿನ ಇದೇ ರೀತಿಯ ಯಾಂತ್ರಿಕ ಗಡಿಯಾರಗಳಲ್ಲಿಯೂ ಸಹ ಸೂರ್ಯಚಲನೆಯನ್ನು ಆಧಾರಿಸಿ ಸಮಯವನ್ನು ಮತ್ತೆ ಸರಿ ಹೊಂದಿಸಲಾಯಿತು ಎಂದು ಹೇಳಲಾಗಿದೆ. ಇದರ್ಥ ಪ್ರತಿಯೊಂದು ಪಟ್ಟಣ್ಣವೂ ವಿಭಿನ್ನ ಸಮಯವನ್ನು ಹೊಂದಿತ್ತು. ಈ ಪರಿಸ್ಥಿತಿ ಬಹುತೇಕ 1800 ರ ದಶಕದವರೆಗೂ ಮುಂದುವರೆಯಿತು. ಆ ಸಮಯದಲ್ಲಿ, ಉತ್ತರ ಅಮೆರಿಕಾದಲ್ಲಿ ಒಟ್ಟು 144 ಸಮಯ ವಲಯಗಳು ಇದ್ದವು.
ಐತಿಹಾಸಿಕವಾಗಿ, ಹೆಚ್ಚಿನ ಜನರು ತಮ್ಮ ಮನೆಗಳಿಂದ ಹೆಚ್ಚು ದೂರ ಪ್ರಯಾಣಿಸಲಿಲ್ಲ. ಆ ಕಾಲದಲ್ಲಿ ಕುದುರೆಗಳು, ಒಂಟೆಗಳು ಮತ್ತು ಎತ್ತಿನ ಬಂಡಿಗಳು ಪ್ರಯಾಣದ ಸಾಧನಗಳಾಗಿದ್ದವು. ಇದರರ್ಥ ದೀರ್ಘ ಪ್ರಯಾಣಗಳು ಇರುವುದಿಲ್ಲ. ಹೀಗಾಗಿ, ಸಮಯಪಾಲನೆಯ ಅವಶ್ಯಕತೆ ಹೆಚ್ಚು ಇರಲಿಲ್ಲ. ಆದರೆ, ಈ ಸಮಸ್ಯೆ ರೈಲ್ವೆಯ ಆಗಮನದೊಂದಿಗೆ ಪ್ರಾರಂಭವಾಯಿತು.
ರೈಲು ಮಾರ್ಗಗಳ ನಿರ್ಮಾಣವು ಭೂ ಪ್ರಯಾಣದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿತು.ಇದಲ್ಲದೇ ಮಾನವರು ಸಮಯವನ್ನು ಗ್ರಹಿಸುವ ವಿಧಾನವನ್ನು ಶಾಶ್ವತವಾಗಿ ಬದಲಾಯಿಸಿತು. 1883 ರಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ರೈಲ್ರೋಡ್ ಕಂಪನಿಗಳು ಸಮಯ ವಲಯಗಳಲ್ಲಿ ಮಾಡಿದ ಬದಲಾವಣೆಗಳು ಪ್ರಪಂಚದಾದ್ಯಂತ ಸಮಯ ವಲಯಗಳ ಪರಿಕಲ್ಪನೆಗೆ ಕಾರಣವಾಯಿತು.
1800 ದಶಕದ ಮಧ್ಯಭಾಗದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ರೈಲು ಪ್ರಯಾಣ ಹೆಚ್ಚಾಯಿತು. ಉತ್ತರ ಅಮೆರಿಕಾ ಖಂಡದ್ಯಾಂತ ಸರಕು ಮತ್ತು ಪ್ರಯಾಣಿಕರನ್ನು ಸಾಗಿಲು ರೈಲುಗಳು ಸಾಕಷ್ಟು ಹಿಂದೆ ಉಳಿದಿದ್ದವು. ಇದಕ್ಕೆ ಮುಖ್ಯ ಕಾರಣ ರೈಲು ವೇಳಾಪಟ್ಟಿ ನಿರ್ವಹಿಸುವಲ್ಲಿ ಸಾಧ್ಯವಾಗದೇ ಇರುವುದು. ಇದರಿಂದ ರೈಲುಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಕೂಡ ಇತ್ತು. ಹೀಗಾಗಿ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ರೈಲು ನಿರ್ವಾಹಣ ಕಂಪನಿಗಳು ಸಮಯ ವಲಯದ ವ್ಯವಸ್ಥೆಯನ್ನು ಪ್ರಾರಂಭಿಸಿದರು.
1879ರಲ್ಲಿ, ಸರ್ ಸ್ಯಾನ್ಫೋರ್ಡ್ ಫ್ಲೆಮಿಂಗ್ ರೈಲು ತಪ್ಪಿಸಿಕೊಂಡರು. ಕೆನಡಾದಲ್ಲಿ ರೈಲ್ವೆ ಎಂಜಿನಿಯರ್ ಆಗಿದ್ದ ಫ್ಲೆಮಿಂಗ್‌ಗೆ ಒಂದು ಐಡಿಯಾ ಬಂತು. ಅದೇ ಸಮಯ ವಲಯ. ನವೆಂಬರ್ 18, 1883 ರಂದು, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿನ ರೈಲ್ರೋಡ್ ಕೈಗಾರಿಕೆಗಳು ಫ್ಲೆಮಿಂಗ್ ಅವರ ಪ್ರಸ್ತಾಪವನ್ನು ಅನುಮೋದಿಸಿದವು.
ಆದಾಗ್ಯೂ, ಉತ್ತರ ಅಮೆರಿಕ ಖಂಡವು ದೊಡ್ಡದಾಗಿರುವುದರಿಂದ, ನಾಲ್ಕು ಪ್ರಮುಖ ಸಮಯ ವಲಯಗಳನ್ನು ರಚಿಸಲು ನಿರ್ಧರಿಸಲಾಯಿತು. ಅವು ಪೂರ್ವ, ಮಧ್ಯ, ಪರ್ವತ ಮತ್ತು ಪೆಸಿಫಿಕ್ ಪ್ರಮಾಣಿತ ಸಮಯ. ಇವು ಇನ್ನೂ ಬದಲಾಗಿಲ್ಲ.
ಹೊಸ ಏಕೀಕೃತ ಸಮಯ ವಲಯ ವ್ಯವಸ್ಥೆಯು ರೈಲು ಅಪಘಾತಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಗೋಲ್ಡ್‌ಮನ್ ವಿವರಿಸಿದರು. ಒಂದು ವರ್ಷದ ನಂತರ, ಫ್ಲೆಮಿಂಗ್ ವಾಷಿಂಗ್ಟನ್‌ನಲ್ಲಿ ಅಂತರರಾಷ್ಟ್ರೀಯ ಪ್ರೈಮ್ ಮೆರಿಡಿಯನ್ ಸಮ್ಮೇಳನವನ್ನು ಆಯೋಜಿಸಲು ಸಹಾಯ ಮಾಡಿದರು.
ಗ್ರೀನ್‌ವಿಚ್ ಮೆರಿಡಿಯನ್ ಅನ್ನು 0° ರೇಖಾಂಶವೆಂದು ಗುರುತಿಸಿದ್ದು ಇಲ್ಲಿಯೇ ಮತ್ತು ಗ್ರೀನ್‌ವಿಚ್ ಮೆರಿಡಿಯನ್ ಅನ್ನು ಆಧರಿಸಿ ಪ್ರಪಂಚದಾದ್ಯಂತ ಸಮಯವನ್ನು ಪ್ರಮಾಣೀಕರಿಸಲು ಪ್ರಸ್ತಾಪಿಸಲಾಯಿತು. 1918 ರಲ್ಲಿ ಅಮೆರಿಕದ ಫೆಡರಲ್ ಸರ್ಕಾರವು ಈ ಹೊಸ ಸಮಯ ವಲಯಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿತು.(ಏಜೆನ್ಸೀಸ್)