Giraffe gazelle : ಜಗತ್ತಿನಲ್ಲಿ ಹಲವು ರೀತಿಯ ಪ್ರಾಣಿಗಳು ವಾಸಿಸುತ್ತವೆ. ಪ್ರತಿಯೊಂದು ಪ್ರಾಣಿಗಳಿಗೆ ತಮ್ಮದೇ ಆದ ವಿಶೇಷ ಗುಣಗಳು ಇರುತ್ತವೆ. ಅಲ್ಲದೆ, ಇದರಲ್ಲಿ ವಿಚಿತ್ರ, ವಿಭಿನ್ನ ರೀತಿಯನ್ನು ವಿವಿಧ ಪ್ರಾಣಿಗಳು ಬದುಕುತ್ತವೆ. ಸಾಮಾನ್ಯವಾಗಿ ಒಂಟೆಗಳು ನೀರಿಲ್ಲದೆ 10 ರಿಂದ 15 ದಿನ ಜೀವಿಸುತ್ತದೆ. ಆದರೆ, ಇದೀಗ ಈ ಪ್ರಾಣಿ ತಮ್ಮ ಇಡೀ ಜೀವನದಲ್ಲಿ ನೀರು ಕುಡಿಯದೇ ಜೀವಿಸುವ ಪ್ರಾಣಿಯ ಬಗ್ಗೆ ತಿಳಿಯೋಣ.
ಗೆರೆನುಕ್ (ಜಿರಾಫೆ ಗಸೆಲ್)
ಈ ಪ್ರಾಣಿ ಜಿಂಕೆ ಜಾತಿಗೆ ಸೇರಿದೆ. ಇದರ ಹೆಸರು ಗೆರೆನುಕ್, ಇದು ಪೂರ್ವ ಆಫ್ರಿಕಾದಲ್ಲಿ ಕಂಡು ಬರುತ್ತದೆ. ಉದ್ದನೆಯ ಕುತ್ತಿಗೆ ಹಾಗೂ ಮಧ್ಯಮ ಗಾತ್ರ ಜಿಂಕೆಯಾಗಿದೆ. ಇದನ್ನು ಜಿರಾಫೆ ಗೆಸಲ್ ಮತ್ತು ವೈಜ್ನಾನಿಕವಾಗಿ ಲಿಟೋಕ್ರಾನಿಯಸ್ ವಾಲೆರಿ ಎಂತಲೂ ಕರೆಯುತ್ತಾರೆ.
ಗೆರೆನುಕ್ ಅನ್ನು ಜಿರಾಫೆ ಗಸೆಲ್ ಎಂದೂ ಕರೆಯುತ್ತಾರೆ. ಇದು ಪೂರ್ವ ಆಫ್ರಿಕಾದ ಒಣ ಮತ್ತು ಮುಳ್ಳುಗಳಿಂದ ಕೂಡಿದ ಪ್ರದೇಶಗಳಲ್ಲಿ ಕಂಡುಬರುತ್ತದೆ, ಉದಾಹರಣೆಗೆ ಇಥಿಯೋಪಿಯಾ, ಸೊಮಾಲಿಯಾ ಮತ್ತು ಟಾಂಜಾನಿಯಾ ಪ್ರದೇಶಗಳಲ್ಲಿ.
ಗೆರೆನುಕ್ ಆಹಾರ ಏನು..?
ಗೆರೆನುಕ್ ಉದ್ದವಾದ ತೆಳ್ಳಗಿನ ಕುತ್ತಿಗೆಯನ್ನು ಹೊಂದಿದ್ದು, 80–105 ಸೆಂ.ಮೀ. ಗಾತ್ರದಲ್ಲಿರುತ್ತದೆ. ಈ ಜಿಂಕೆಗಳು ವಿವಿಧ ರೀತಿಯ ಎಲೆಗಳು, ಚಿಗುರುಗಳು, ಹಣ್ಣುಗಳು, ಹೂವುಗಳು ಮತ್ತು ಮೊಗ್ಗುಗಳನ್ನು ತಿನ್ನುತ್ತವೆ. ಗೆರೆನುಕ್ ನೀರು ಕುಡಿಯುವ ಅಗತ್ಯವಿಲ್ಲ, ಏಕೆಂದರೆ ಅವುಗಳಿಗೆ ಅಗತ್ಯವಿರುವ ನೀರನ್ನು ಸಸ್ಯಗಳಿಂದ ಪಡೆಯುತ್ತವೆ. ಅವು ಜೀವಮಾನವಿಡೀ ನೀರು ಕುಡಿಯದಿದ್ದರೂ ಸಹ ಬದುಕಬಲ್ಲವು.ಗೆರೆನುಕ್‌ನ ವಿಶಿಷ್ಟ ಬೆನ್ನುಮೂಳೆಯ ರಚನೆಯು ಅದರ ಹಿಂಗಾಲುಗಳ ಮೇಲೆ ನೇರವಾಗಿ ನಿಲ್ಲಲು ಮತ್ತು 2 ಮೀಟರ್ (ಸುಮಾರು 6 ಅಡಿ) ಎತ್ತರದವರೆಗೆ ಆಹಾರವನ್ನು ತಲುಪಲು ಅನುವು ಮಾಡಿಕೊಡುತ್ತದೆ.
ಗಂಟೆಗೆ 64 ಕಿ.ಮೀ ಸ್ಪೀಡ್
ತಮ್ಮ ಪರಭಕ್ಷಗಳಿಂದ ತಪ್ಪಿಸಿಕೊಳ್ಳಲು, ಗಂಟೆ ಸುಮಾರು 40 ಮೈಲಿಗಳ ವೇಗದಲ್ಲಿ 64 ಕಿ.ಮೀ ಓಡ ಬಲ್ಲವು. ಗಂಡು ಗೆರೆನುಕ್‌ಗಳು ತಮ್ಮ ಕಣ್ಣುಗಳ ಸಮೀಪವಿರುವ ನಾಳಗಳಿಂದ ದಪ್ಪ, ಟಾರ್ ತರಹದ ವಸ್ತುವನ್ನು ಸ್ರವಿಸುತ್ತವೆ. ನಂತರ ಅವರು ಇತರ ಗೆರೆನುಕ್‌ಗಳನ್ನು ತಮ್ಮ ಪ್ರಾದೇಶಿಕ ಗಡಿಗಳ ಬಗ್ಗೆ ಎಚ್ಚರಿಸಲು ಅದನ್ನು ಕಾಂಡಗಳು ಮತ್ತು ಕೊಂಬೆಗಳ ಮೇಲೆ ಒರೆಸುತ್ತಾರೆ.(ಏಜೆನ್ಸೀಸ್)
ಬಾಬಾ ವಂಗಾ ಭವಿಷ್ಯವಾಣಿ: ಈ 5 ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿವೆ | Zodiac Signs