King Kohli : ಭಾರತದಲ್ಲಿ ಕ್ರಿಕೆಟ್ ಎಂದರೆ ಹಬ್ಬ ಇದ್ದಂತೆ ಅದರಲ್ಲೂ ಐಪಿಎಲ್ ಲೀಗ್ ಎಂದರೆ ಒಂದು ದಿನ ಮಾತ್ರ ಅಲ್ಲ ಎರಡು ತಿಂಗಳು ಕಾಲ ಹಬ್ಬವೋ ಹಬ್ಬ. ಯಾಕೆಂದರೆ ಟೀಮ್ ಇಂಡಿಯಾದಲ್ಲಿರೋ ಎಲ್ಲಾ ಆಟಗಾರರು ಇಲ್ಲಿ ಬೇರೆ ಬೇರೆ ಪ್ರಾಂಚೈಸಿಗಳಲ್ಲಿ ಆಡುತ್ತಾರೆ. ತಮ್ಮ ನೆಚ್ಚಿನ ಆಟಗಾರರ ಆಟವನ್ನು ನೋಡಿ ಕಂಣ್ತುಂಬಿಕೊಳ್ಳುತ್ತಾರೆ. ಅಲ್ಲದೆ, ತಮ್ಮ ನೆಚ್ಚಿನ ತಂಡ ಕಪ್ ಗೆದ್ದು ಕಪ್ ಹಿಡಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಇಂತಹ ಅಭಿಮಾನಿಗಳು ಕ್ರಿಕೆಟ್ಗೆ ದೊರೆಯವುದು ನಮ್ಮ ದೇಶದಲ್ಲಿ ಮಾತ್ರ ಎಂದು ಹೇಳಬಹುದು.
ಇದನ್ನೂ ಓದಿ:ಶಾಲೆಯಲ್ಲಿ ಪಕ್ಷಿ ಸಂಕುಲ ರಕ್ಷಣೆ ಕರ್ತವ್ಯ : ಮಕ್ಕಳಿಗೆ ನಿತ್ಯಾನಂದ ಶೆಟ್ಟಿ ಮಾಹಿತಿ
ಹೌದು, ಕ್ರಿಕೆಟ್ ಅನ್ನು ದೇವರಂತೆ ಪ್ರೀತಿಸುತ್ತಾರೆ. ಹೀಗಿರುವಾಗ ತಮ್ಮ ನೆಚ್ಚಿನ ಆಟಗಾರರನ್ನು ಒಮ್ಮೆ ಭೇಟಿಯಾದ್ರೆ ಜೀವನ ಸಾರ್ಥಕವಾಯಿತು ಎಂದುಕೊಳ್ಳುತ್ತಾರೆ. ಇದೀಗ ಮೊನ್ನೆ ನಡೆದ ಆರ್ಸಿಬಿ VS ಕೆಕೆಆರ್ ಪಂದ್ಯದದ ವೇಳೆ ಅಭಿಮಾನಿಯೊಬ್ಬ ವಿರಾಟ್ ಅನ್ನು ತಪ್ಪಿಕೊಂಡು ಕಾಲಿಗೆ ನಮಸ್ಕಾರ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದೀಗ ಇತನೇ ಮಾತನಾಡಿದ್ದಾನೆ.
ಕ್ರೀಡಾಂಗಣದಲ್ಲಿ ನಡೆದಿದ್ದೇನು..?
ಕಳೆದ ಭಾನುವಾರ ಕಲ್ಕತ್ತಾದ ಈಡನ್ಸ್ ಗಾರ್ಡನ್ಸ್ ಮೈದಾನದಲ್ಲಿ ರಾಯಲ್ ಚಾಲೆಂಚರ್ಸ್ ಬೆಂಗಳೂರು VS ಕಲ್ಕತ್ತಾ ನೈಟ್ ರೈಡರ್ಸ್ನ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ವೇಳೆ ಕೊಹ್ಲಿ ಅಭಿಮಾನಿಯೊನಬ್ಬ ಏಕಾಏಕಿ ಮೈದಾನಕ್ಕೆ ನುಗ್ಗಿ ಕೊಹ್ಲಿಯತ್ತ ಧಾವಿಸಿ, ವಿರಾಟ್ ಕಾಲಿಗೆ ಬಿದ್ದು, ನಮಸ್ಕರಿಸಿ ವಿರಾಟ್ ತಬ್ಬಿಕೊಂಡನು. ಬಳಿಕ ಭದ್ರತಾ ಸಿಬ್ಬಂದಿ ಬಂದು ಅತನನ್ನು ಎಳೆಕರೆದ್ಯೊಯ್ದರು.
Moment Of The Match ❤️
A Fan Branches Everything For Virat Kohli And Touches His Feet What A Madness As A Fan Pure Kattar Kolhi Supporter 🥺❤️..#ViratKohli𓃵 | #KKRvRCB pic.twitter.com/6bcZ6eer3H
— Harsh 17 (@harsh03443) March 22, 2025
ಅಭಿಮಾನಿ ಪಖೀರಾ ಹೇಳಿದ್ದೇನು..?
ವಿರಾಟ್ ಕಾಲು ಮುಟ್ಟಿ ನಮಸ್ಕರಿಸಿದ್ದು ಪಖೀರಾ ಎಂಬ 18ರ ಯುವ ಅಭಿಮಾನಿ. “ಏನಾದರೂ ಆಗಲಿ ನಾನು ತುಂಬಾ ಸಂತೋಷವಾಗಿದ್ದೇನೆ. ವಿರಾಟ್ ನನಗೆ ದೇವರು ಮತ್ತು ನನ್ನ ದೇವರನ್ನು ಭೇಟಿಯಾಗಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಗಿದೆ” ಎಂದು ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ವಿರಾಟ್ ತನ್ನ ಐವತ್ತು ರನ್ ಗಳಿಸಿದಾಗ ಇದೇ ನನಗೆ ಸರಿಯಾದ ಕ್ಷಣ ಎಂದು ಭಾವಿಸಿ ಮೈದಾನಕ್ಕೆ ಹೋದೆ. ನಾನು ಅವರನ್ನು ಸ್ವಾಗತಿಸಿದ ನಂತರ, ಅವರು ನನ್ನ ಹೆಸರು ಕೇಳಿ ನನ್ನನ್ನು ತಬ್ಬಿಕೊಂಡರು. ನಂತರ ಅವರು ‘ ಭಾಯ್ ತು ಚಲಾ ಜಾ ಅಭಿ’ (ನೀನು ಈಗ ಹೊರಡಬೇಕು) ಎಂದು ಹೇಳಿದರು. ಅವರು ಭದ್ರತಾ ಸಿಬ್ಬಂದಿಯನ್ನು ನನಗೆ ಏನೂ ಮಾಡಬೇಡಿ ಎಂದು ಕೇಳಿಕೊಂಡರು” ಎಂದು ಪಖೀರಾ ಹೇಳಿದರು.(ಏಜೆನ್ಸೀಸ್)
RCB ತಂಡ ಕಪ್ ಗೆಲ್ಲುವಲ್ಲಿ ಈ ಬಾರಿ ಮುಖ್ಯಪಾತ್ರ ವಹಿಸಲಿದ್ದಾರೆಯೇ ಆಂಡಿ ಫ್ಲವರ್?; ಇವರ ವೇತನ ತಿಳಿದರೆ ಶಾಕ್!