ವಯನಾಡು: 360ಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ವಯನಾಡು ಭೂ ದುರಂತಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ನೂರಾರು ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ರಕ್ಷಣಾ ಪಡೆಗಳು, ಸ್ಥಳೀಯ ಪೊಲೀಸರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ರಾತ್ರಿ ಹಗಲೆನ್ನದೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಭೂಕುಸಿತದಲ್ಲಿ ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿ ನಿಂತಿದ್ದಾರೆ. ಇವರ ಕಥೆಯೂ ಮನಕಲುಕುತ್ತಿದ್ದು, ಜನರು ಒವರ ಕಷ್ಟಕ್ಕೆ ಮರುಗುತ್ತಿದ್ದಾರೆ.
ಮಂಗಳವಾರ ಜುಲೈ 30ರಂದು ಮಧ್ಯರಾತ್ರಿ ವಯನಾಡಿನ ಮೆಪ್ಪಾಡಿಯಲ್ಲಿ ಮೊದಲು ಭೂಕುಸಿತ ಸಂಭವಿಸಿದಾಗ ನೀತು ಜೊಜೊ ಎಂಬುವವರು ವಯನಾಡ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (WIMS)ಗೆ ಕರೆ ಮಾಡಿ ಕೂಡಲೇ ಮಾಹಿತಿ ನೀಡಿದ್ದಾರೆ. ರಕ್ಷಣಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತಲುಪುವ ವೇಳೆಗಾಗಲೇ ಪರಿಸ್ಥಿತಿ ಮತ್ತಷ್ಟು ಕೈ ಮೀರಿ ಹೋಗಿತ್ತು. ರಕ್ಷಣಾ ತಂಡ ಸ್ಥಳಕ್ಕೆ ತಲುಪುವ ವೇಳೆ ಮೆಪ್ಪಾಡಿ, ಚೊರಲ್ಮಾಲಾ ಗ್ರಾಮವು ಸಂಪೂರ್ಣವಾಗಿ ಭೂ ಕುಸಿತಕ್ಕೆ ತುತ್ತಾಗಿತ್ತು. ರಕ್ಷಣೆ ಕೋರಿ ಕರೆ ಮಾಡಿದ್ದ ನೀತು ಮಣ್ಣಿನಡಿ ಸಿಲುಕಿ ಅಸುನೀಗಿದ್ದರು.
ಇದನ್ನೂ ಓದಿ: ಕೋಚ್ ಸ್ಥಾನದಲ್ಲಿ ಹೆಚ್ಚು ದಿನ ಉಳಿಯಲ್ಲ; ಗೌತಿ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ವಿಶ್ವಕಪ್ ವಿಜೇತ ತಂಡದ ಆಟಗಾರ
ನೀತು ಸಹೋದ್ಯೋಗಿಯೊಬ್ಬರು ಮಾತನಾಡಿ, ನೀತು ವಿಮ್ಸ್‌ನಲ್ಲಿ ಕಾರ್ಯನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ 1:30ಕ್ಕೆ ಕರೆ ಮಾಡಿ ಆಕೆ ನಮಗೆ ಚೊರಲ್ಮಾಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ಮನೆಗಳಿಗೆ ನೀರು ನುಗುತ್ತಿವೆ. ಕೂಡಲೇ ಈ ವಿಚಾರವನ್ನು ರಕ್ಷಣಾ ಇಲಾಖೆಗೆ ತಿಳಿಸಿ ಹಾಗೂ ಇಲ್ಲಿನ ಜನರುನ್ನು ಕಾಪಾಡಿ ಎಂದು ಮೊದಲು ಕರೆ ಮಾಡಿ ದುರಂತದ ಬಗ್ಗೆ ಮಾಹಿತಿ ನೀಡಿದರು.
ನಾವು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಂಕಷ್ಟದಲ್ಲಿರುವವರನ್ನು ಕಾಪಾಡಲು ಮುಂದಾದೆವು. ಇದಾದ ಕೆಲ ಕ್ಷಣಕ್ಕೆ ಅಗ್ನಿಶಾಮಕ ಇಲಾಖೆಗೆ ಹೆಚ್ಚಿನ ಕರೆಗಳು ಬರಲು ಆರಂಭಿಸಿದ ಪರಿಣಾಮ ವೇಗವಾಗಿ ಹೋಗಲು ಯತ್ನಿಸಿದರಾರು ಮರಗಳು ರಸ್ತೆಯಲ್ಲಿ ಬಿದ್ದಿದ್ದ ಪರಿಣಾಮ ಬೇಗ ತಲುಪಲು ಸಾಧ್ಯವಾಗಲಿಲ್ಲ. ನೀತು ನಮಗೆ ನಿರಂತರವಾಗಿ ಕರೆ ಮಾಡುತ್ತಿದ್ದಳು. ಆಕೆಯ ಪತಿ, ಐದು ವರ್ಷದ ಮಗ ಹಾಗೂ ನೆರೆಹೊರೆಯವರು ಆಕೆಯ ಮನೆ ಬಳಿ ಜಮಾಯಿಸಲು ಶುರು ಮಾಡಿದರು.
ನೀತು ಹಾಗೂ ಕುಟುಂಬದವರು ರಕ್ಷಣಾ ತಂಡಗಳ ಸಹಾಯದಿಂದ ಗ್ರಾಮದಲ್ಲಿನ ಜನರನ್ನು ಬೆಟ್ಟದ ಮೇಲಿನ ಸುರಕ್ಷಿತವಾದ ಜಾಗ್ಕಕೆ ಕರೆದುಕೊಂಡು ಹೋಗಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ಎರಡನೇ ಭೂಕುಸಿತದಲ್ಲಿ ನೀತು ಮನೆಯ ಮೇಲೆ ಬಂಡೆ ಉರುಳಿದ ಪರಿಣಾಮ ಆಕೆ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾಳೆ. ಅನೇಕರನ್ನು ಕರೆ ಮಾಡಿದ ಆಕೆ ಇಂದು ನಮ್ಮೊಂದಿಗೆ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ನೀತು ಅವರ ಸಹೋದ್ಯೋಗಿ ಬೇಸರ ಹೊರಹಾಕಿದ್ದಾರೆ.