ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಸೋಲುಣಿಸಿ ಶಾಕ್ ನೀಡುವ ಮೂಲಕ ಆತಿಥೇಯರು ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡವು ಮುನ್ನಡೆ ಕಾಯ್ದುಕೊಂಡಿದ್ದು, ಕ್ಲೀನ್ಸ್ವೀಪ್ ತಪ್ಪಿಸಲು ಬುಧವಾರ (ಆಗಸ್ಟ್ 07) ನಡೆಯುವ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಹೋರಾಡಬೇಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಶ್ರೀಲಂಕಾ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಗುರಿ ಬೆನ್ನತ್ತಿದ್ದ ಭಾರತ ತಂಡವು ನಾಯಕ ರೋಹಿತ್ ಶರ್ಮ (64 ರನ್, 44 ಎಸೆತ, 5 ಬೌಂಡರಿ, 4 ಸಿಕ್ಸರ್), ಅಕ್ಷರ್ ಪಟೇಲ್ (44 ರನ್, 44 ಎಸೆತ, 4 ಬೌಂಡರಿ, 2 ಸಿಕ್ಸರ್) ಪ್ರತಿರೋಧದ ಹೊರತಾಗಿಯೂ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ 42.2 ಓವರ್‌ಗಳಲ್ಲಿ 208 ರನ್ ಗಳಿಸಿ ಆಲೌಟ್ ಆಯಿತು. 32 ರನ್ಗಳ ಅಂತರದಲ್ಲಿ ಸೋಲುವ ಮೂಲಕ ಟೀಮ್ ಇಂಡಿಯಾ ಭಾರೀ ಮುಖಭಂಗವನ್ನು ಅನುಭವಿಸಿತು.
ಇದನ್ನೂ ಓದಿ: ಕೋಚ್ ಸ್ಥಾನದಲ್ಲಿ ಹೆಚ್ಚು ದಿನ ಉಳಿಯಲ್ಲ; ಗೌತಿ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ವಿಶ್ವಕಪ್ ವಿಜೇತ ತಂಡದ ಆಟಗಾರ
ಇನ್ನೂ ಶ್ರೀಲಂಕಾ ವಿರುದ್ಧದ ಸೋಲಿನ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ನೀವು ಪಂದ್ಯವನ್ನು ಸೋತಾಗ ಭಾರೀ ನೋವುಂಟು ಮಾಡುತ್ತದೆ. ಮೊದಲನೆಯದಾಗಿ ಇಲ್ಲಿ 10 ಓವರ್ಗಳ ಪ್ರಶ್ನೆ ಉದ್ಭವಿಸುವುದಿಲ್ಲ. ನಾವು ಸ್ಥಿರವಾದ ಕ್ರಿಕೆಟ್ ಆಡಬೇಕಾಗಿದ್ದು, ಇಂದು ಆಡುವಲ್ಲಿ ನಾವು ವಿಫಲವಾಗಿದ್ದೇವೆ. ತುಂಬಾ ನಿರಾಸೆಯಾಗಿದ್ದು, ಈ ರೀತಿ ಸಂಭವಿಸುತ್ತದೆ..
ಈ ಮೇಲ್ಮೈಯ ಸ್ವರೂಪ ಮತ್ತು ಆಟವು ಹೇಗೆ ಹೋಗುತ್ತದೆ ಎಂಬುದರ ಸ್ವರೂಪವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಮಧ್ಯಮ ಓವರ್‌ಗಳಲ್ಲಿ ರನ್ ಗಳಿಸಲು, ನಿಜವಾಗಿಯೂ ಕಷ್ಟವಾಯಿತು. ಆದ್ದರಿಂದ ನಾವು ಹೆಚ್ಚಿನ ರನ್ಅನ್ನು ಪವರ್ಪ್ಲೇನಲ್ಲೇ ಗಳಿಸಬೇಕಿತ್ತು. ನಾನು 65 ರನ್ ಗಳಿಸಲು ಕಾರಣ, ನಾನು ಬ್ಯಾಟಿಂಗ್ ಮಾಡಿದ ರೀತಿ. ತಂಡವನ್ನು ಗೆಲ್ಲಿಸಬೇಕಾಗಿದ್ದಲ್ಲಿ ನಾವು ಅಪಾಯಕಾರಿ ಆಟವಾಡಬೇಕಾಗುತ್ತದೆ. ನಾವು ಔಟ್ ಆದಾಗ ನಿಜವಾಗಿಯೂ ಬೇಸರವಾಗುತ್ತದೆ. ಆದರೆ, ಅದು ನನ್ನ ಉದ್ದೇಶವನ್ನು ಬದಲಿಸುವುದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.